Tuesday, April 1, 2025
ಬೆಂಗಳೂರು

ಸ್ಯಾಂಡಲ್ ವುಡ್ ಸೆಲೆಬ್ರೆಟಿಗಳಿಗೆ ಡ್ರಗ್ ಪೂರೈಸುತ್ತಿದ್ದ ಆಫ್ರಿಕಾ ಪ್ರಜೆಯ ಬಂಧನ -ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್ ವುಡ್ ಸೇರಿದಂತೆ ಹಲವು ಪ್ರಸಿದ್ಧ ವ್ಯಕ್ತಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಆರೋಪದಡಿ ಸಿಸಿಬಿ ಪೊಲೀಸರು ಆಫ್ರಿಕಾ ಪ್ರಜೆಯೊಬ್ಬನನ್ನು ಬಂಧಿಸಿದ್ದಾರೆ.

ಲೂಮ್ ಪೆಪ್ಪಾರ್ ಸಾಂಬ ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಡ್ರಗ್ಸ್ ಪ್ರಕರಣದಲ್ಲಿ ಈಗಾಗಲೇ ಬಂಧನಕ್ಕೆ ಒಳಗಾಗಿರುವ ಆರ್ ಟಿಓ ಅಧಿಕಾರಿ ರವಿಶಂಕರ್ ಸೇರಿದಂತೆ ಹಲವರಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಡ್ರಗ್ ಮಾಫಿಯಾ ತನಿಖೆ ಯಾರ ಮನೆ ಬಾಗಿಲಿಗೆ ಹೋಗುತ್ತೋ ಗೊತ್ತಿಲ್ಲ: ಸಚಿವ ಸಿಟಿ ರವಿ

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಟಿ ರಾಗಿಣಿ ದ್ವಿವೇದಿ, ರವಿಶಂಕರ್, ವೀರೇನ್ ಖನ್ನಾ, ಟೋನ್ಸಿ ಎಂಬವರನ್ನು ಬಂಧಿಸಲಾಗಿದೆ. ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಲೂಮ್ ಪೆಪ್ಪಾರ್ ಸೇರಿ 12 ಮಂದಿಯ ಮೇಲೆ ಎಫ್‌ಐಆರ್ ದಾಖಲಾಗಿದೆ ಎಂದು ವರದಿಯಾಗಿದೆ.

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ