Wednesday, April 16, 2025
ಸುದ್ದಿ

ಆಲಂಕಾರಿನಲ್ಲಿ 11 ಮಂದಿ ದಲಿತರು ಬೌದ್ದ ಧರ್ಮಕ್ಕೆ ಮತಾಂತರ – ಕಹಳೆ ನ್ಯೂಸ್

ಕಡಬ : ದಲಿತ ಸಮುದಾಯಕ್ಕೆ ಸೇರಿದ 11 ಮಂದಿ ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ಮತಾಂತರಗೊಂಡ ಘಟನೆ ಕಡಬದ ಆಲಂಕಾರಿನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಡಬ ತಾಲೂಕಿನ ಆಲಂಕಾರು ತೋಟಂತಿಲ ಎಂಬಲ್ಲಿ ಪುಟ್ಟಣ್ಣ ಎಂಬವರ ಗೃಹಪ್ರವೇಶದ ಸಂದರ್ಭದಲ್ಲಿ ಮೈಸೂರಿನ ಭಂತೇಜಿ ಸ್ವಾಮೀಜಿ ಮತ್ತು ಕೊಳ್ಳೇಗಾಲದ ಜೇತವನ ಬುದ್ಧ ವಿಹಾರದ ಸುಗತಪಾಲ ಭಂತೇಜಿಯವರು ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಕೆಲವರು ಹಿಂದೂ ಧರ್ಮದಿಂದ ಬೌದ್ಧ ಧರ್ಮಕ್ಕೆ ದೀಕ್ಷೆ ಪಡೆದಿದ್ದಾರೆ ಎಂದು ತಿಳಿದಿಬಂದಿದೆ. ದಲಿತ ಸಂಘರ್ಷ ಸಮಿತಿಯ ಪುತ್ತೂರು ತಾಲೂಕು ಸಂಘಟನಾ ಸಂಚಾಲಕ ಆನಂದ ಮಿತ್ತಬೈಲ್ ನೇತೃತ್ವದಲ್ಲಿ 11  ಮಂದಿ ಬೌದ್ಧ ಧರ್ಮಕ್ಕೆ ಮತಾಂತರಗೊಂಡರು.

ಜಾಹೀರಾತು
ಜಾಹೀರಾತು
ಜಾಹೀರಾತು

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ