Sunday, January 19, 2025
ಬೆಂಗಳೂರು

ನಾನು- ರಾಗಿಣಿ ಕ್ಲೋಸ್‌ ಕ್ಲೋಸ್‌: ಅರೆಸ್ಟ್‌ ಮಾಡಿ ಪ್ಲೀಸ್‌. ಸಿಸಿಬಿ ಕಚೇರಿಗೆ ಯುವಕನ ದೌಡು! – ಕಹಳೆ ನ್ಯೂಸ್

ಬೆಂಗಳೂರು: ಡ್ರಗ್ಸ್‌ ದಂಧೆಯಲ್ಲಿ ನಾನೂ ಭಾಗಿ. ನಟಿ ರಾಗಿಣಿ ಮತ್ತು ನಾನು ‌ಕ್ಲೋಸ್‌ ಇದ್ದೇವೆ. ಅವರ ಜತೆಯಲ್ಲಿ ಫೋಟೋದಲ್ಲಿ ಇರುವುದು ನಾನೇ. ನಾನೇ ನಿಮಗೆ ಬೇಕಾದವ. 13ನೇ ಆರೋಪಿ ನಾನೇ… ಅರೆಸ್ಟ್‌ ಮಾಡಿ…

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗೆಂದು ಇಂದು ನಸುಕಿನಲ್ಲಿಯೇ ಟೀ ಟ್ರೇ ಹಿಡಿದು ಬೈಕ್‌ನಲ್ಲಿ ಬೆಂಗಳೂರಿನ ಸಿಸಿಬಿ ಕಚೇರಿಗೆ ದೌಡಾಯಿಸಿದ ಯುವಕ ಕೆಲಕಾಲ ಕಚೇರಿ ಎದುರು ಬಿಗುವಿನ ವಾತಾವರಣ ನಿರ್ಮಾಣ ಮಾಡಿದ.

ಜಾಹೀರಾತು
ಜಾಹೀರಾತು
ಜಾಹೀರಾತು

ಮಾದಕ ವಸ್ತು ಪೂರೈಕೆ ಜಾಲದ ಕುರಿತಂತೆ ಸಿಸಿಬಿ ಪೊಲೀಸರು ತನಿಖೆ ನಡೆಸುತ್ತಿದ್ದು, ನಟಿ ರಾಗಿಣಿ ದ್ವಿವೇದಿಯನ್ನು ಬಂಧಿಸಿದ್ದಾರೆ. ಸದ್ಯ ಇವರು ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ವಶದಲ್ಲಿರಲಿದ್ದು, ಈ ನಡುವೆಯೇ ಯುವಕ ಕಚೇರಿ ಎದುರು ಬಂದು ಹೈಡ್ರಾಮಾ ಮಾಡಿದ್ದಾನೆ.

ನಟಿ ರಾಗಿಣಿ ಆಪ್ತ ರವಿಶಂಕರ್​ನ ಐಷಾರಾಮಿ ಜೀವನಕ್ಕೆ ಸಿಸಿಬಿ ಪೊಲೀಸರೇ ದಂಗು

ಇಲ್ಲಿಯವರೆಗೆ ಒಟ್ಟು 12 ಜನರ ವಿರುದ್ಧ ಎಫ್‌ಐಆರ್ ದಾಖಲು ಮಾಡಲಾಗಿದ್ದು, 13ನೆಯವ ನಾನೇ ಎಂದಿರುವ ಯುವಕ, ನನ್ನನ್ನು ಅರೆಸ್ಟ್‌ ಮಾಡಿ ಎಂದು ಗೋಗರೆದಿದ್ದಾನೆ! ಈತನನ್ನು ವಶಕ್ಕೆ ಪಡೆದಿರುವ ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಯುವಕನ ಹೆಸರು ಅನಿರುದ್ಧ್ ಎಂದು ತಿಳಿದುಬಂದಿದೆ. ಈತ ಬೆಂಗಳೂರಿನ ಜಯನಗರ ಆರ್‌ಟಿಒ ಕಚೇರಿಯ ಎಸ್‍ಡಿಎ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ. ಈತ ರಾಗಿಣಿ ಆಪ್ತ ರವಿಶಂಕರ್‌ನ ಸ್ನೇಹಿತ ಎಂದು ತಿಳಿದುಬಂದಿದೆ. ಇದೇ ಆರ್‌ಟಿಒ ಕಚೇರಿಯಲ್ಲಿ ರವಿಶಂಕರ್ ಕ್ಲರ್ಕ್‌ ಆಗಿ ಕೆಲಸ ಮಾಡುತ್ತಿದ್ದನು. ಸಿಸಿಬಿ ಪೊಲೀಸ್ ಕಚೇರಿಗೆ ಬಂದಿದ್ದ ಸಂದರ್ಭದಲ್ಲಿ ಅನಿರುದ್ಧ್‌ ಡ್ರಗ್ಸ್‌ ಸೇವನೆ ಮಾಡಿದ್ದ ಎಂದಿದ್ದಾರೆ ಪೊಲೀಸರು.