ಪುತ್ತೂರು: ಸಕಾರಾತ್ಮಕ ಸಂದೇಶಗಳನ್ನು ರೂಪಿಸುವುದು ಉತ್ತಮ ಅಭ್ಯಾಸ. ಇದು ಜೀವನಕ್ಕೆ ಹೊಸ ಹುರುಪನ್ನು ಸದಾ ಬಿತ್ತುತ್ತದೆ. ಅದರಲ್ಲೂ ಕರೋನ ಮಹಾಮಾರಿಯ ನಡುವೆ ಏಕತಾನತೆಗೆ ಒಳಗಾಗದೆ ಮಾಡುವಂತಹ ಪ್ರಯೋಗಗಳು ಗಮನಾರ್ಹ ಎಂದು ವಿವೇಕಾನಂದ ಕಾಲೇಜಿನ ಸಂಚಾಲಕ ಮುರಳಿ ಕೃಷ್ಣಕೆ.ಎನ್ ಹೇಳಿದ್ದಾರೆ.
ಸೆಪ್ಟೆಂಬರ್ 5.ರಂದು ವಿವೇಕಾನಂದ ಕಾಲೇಜಿನ ಸ್ನಾತಕೋತ್ತರ ವಾಣಿಜ್ಯ ವಿಭಾಗದ ಆಶ್ರಯದಲ್ಲಿ ನಡೆದ “ಕಲೆಕ್ಷನ್ ಅಫ್ ಥಾಟ್ಫಾರ್ದಿ ಡೇ “ಎಂಬ ಕೋರೋನ ಪಿಡುಗಿನ ಸಮಯದಲ್ಲಿ ವಿದ್ಯಾರ್ಥಿಗಳೇ ಸೃಷ್ಟಿಸಿದ ಸಕಾರಾತ್ಮಕ ಸಂದೇಶಗಳ ಪ್ರತಿಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ವಿವೇಕಾನಂದ ಕಾಲೇಜು ಎಚ್ಚರಿಕೆಯಿಂದ ಹೆಜ್ಜಿ ಇಡುವ ಸಂಸ್ಥೆ. ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಯಜ್ಞದ ರೀತಿ ಶ್ರಮಿಸಿದೆ. ಇಲ್ಲಿ ಜ್ಞಾನಾರ್ಜನೆಯನ್ನು ಪಡೆದು ಸ್ವಸ್ಥ ನಾಗರಿಕನಾಗಿ ಬಾಳಿ . ಮಹಾತ್ಮರು ನೀಡಿದ ಉತ್ತಮ ಸಂದೇಶಗಳನ್ನು ಬದುಕಿನಲ್ಲಿ ಅನುಷ್ಠಾನಗೊಳಿಸಿ ಉತ್ತಮ ವ್ಯತ್ತಿಯಾಗಿ ಹೊರ ನಡೆಯಿರಿ ಎಂದು ಅಭಿಪ್ರಾಯಪಟ್ಟರು.
ಈ ಸಂದರ್ಭದಲ್ಲಿ ವಾಣಿಜ್ಯ ವಿಭಾಗ ಉಪನ್ಯಾಸಕರಾದ ಲಕ್ಷ್ಮಿ ಭಟ್ ,ರಾಘವೇಂದ್ರ ,ವರ್ಷಿತ್, ರಸಾಯನ ಶಾಸ್ತ್ರದ ಉಪನ್ಯಾಸಕ ಮನೋಹರ್‍ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಕೃತಿಕ ಸ್ವಾಗತಿಸಿ, ವಾಣಿಜ್ಯ ವಿಭಾಗದ ಸಂಯೋಜಕಿ ಡಾ| ವಿಜಯ ಸರಸ್ವತಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿದ್ಯಾರ್ಥಿ ಶ್ರೀ ಕೀರ್ತನ ವಂದಿಸಿ, ನವ್ಯಶ್ರೀ ಮತ್ತು ಪ್ರಿಯಾ ಪಿಜಿ ನಿರೂಪಿಸಿದರು.