Saturday, November 23, 2024
ಹೆಚ್ಚಿನ ಸುದ್ದಿ

ನಾಳೆ ಎನ್‍ಇಪಿ ಕುರಿತ ರಾಜ್ಯಪಾಲರ ಸಮಾವೇಶ : ರಾಷ್ಟ್ರಪತಿ, ಪ್ರಧಾನಿ ಭಾಷಣ – ಕಹಳೆ ನ್ಯೂಸ್

ನವದೆಹಲಿ, ಸೆ.6-ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಕುರಿತ ರಾಜ್ಯಪಾಲರ ಮಹತ್ವದ ಸಮಾವೇಶ ನಾಳೆ ನಡೆಯಲಿದೆ. ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿಡಿಯೋ ಲಿಂಕ್ ಮೂಲಕ ಉದ್ಘಾಟನಾ ಭಾಷಣ ಮಾಡಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಶಿಕ್ಷಣ ಸಚಿವಾಲಯದಿಂದ ಆಯೋಜಿಸಿರುವ ಈ ಸಮಾವೇಶವು ಉನ್ನತ ಶಿಕ್ಷಣದ ಪರಿವರ್ತನೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ (ಎನ್‍ಇಪಿ) ಪಾತ್ರ-2020 ಎಂಬ ಶೀರ್ಷಿಕೆ ಹೊಂದಿದೆ. ರಾಜ್ಯಪಾಲರ ಈ ಸಮಾವೇಶದಲ್ಲಿ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರು, ರಾಜ್ಯಗಳ ಪ್ರಮುಖ ವಿಶ್ವವಿದ್ಯಾಲಯಗಳ ಉಪ ಕುಲಪತಿಗಳು ಮತ್ತು ಶಿಕ್ಷಣ ಕ್ಷೇತ್ರದ ಉನ್ನತಾಧಿಕಾರಿಗಳು ಭಾಗವಹಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಸರ್ಕಾರವು ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿದ ನಂತರ ನಡೆಯುತ್ತಿರುವ ಪ್ರಥಮ ರಾಷ್ಟ್ರ ಮಟ್ಟದ ಸಮಾವೇಶ ಇದಾಗಿದೆ. ನಾಳೆ ಬೆಳಗ್ಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟನಾ ಭಾಷಣ ಮಾಡುವರು.

ಭಾರತದಲ್ಲಿ 1986ರಲ್ಲಿ ಅನುಷ್ಠಾನಗೊಂಡಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು 34 ವರ್ಷಗಳ ಬಳಿಕ ಮಾರ್ಪಡಿಸಿ ಇತ್ತೀಚೆಗೆ ಕೇಂದ್ರ ಸರ್ಕಾರ ನೂತನ ಎನ್‍ಇಪಿ ಜಾರಿಗೊಳಿಸಿದೆ. ಈ ನೂತನ ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಶಾಲೆ ಮತ್ತು ಉನ್ನತ ಶಿಕ್ಷಣ ಮಟ್ಟ ಇವೆರಡರಲ್ಲೂ ಪ್ರಮುಖ ಸುಧಾರಣೆಗಳತ್ತ ವಿಶೇಷ ಗಮನ ಕೇಂದ್ರೀಕರಿಸಲಾಗಿದೆ.