Sunday, January 19, 2025
ಪುತ್ತೂರು

ಅಂಬಿಕಾದಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಸಭೆ – ಕಹಳೆ ನ್ಯೂಸ್

ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ವತಿಯಿಂದ ಅನೇಕ ಶ್ಲಾಘನೀಯ, ಸಾಮಾಜಿಕ ಕಳಕಳಿಯ ಕಾರ್ಯಗಳು ನೆರವೇರುತ್ತಿರುವುದು ಹೆಮ್ಮೆಯ ವಿಚಾರ.

ನೆರೆ ಸಂತ್ರಸ್ತರಿಗೆ ಸಹಾಯ ಹಸ್ತ, ಸಂಸ್ಥೆಯ ದಶಮಾನೋತ್ಸವದ ಪ್ರಯುಕ್ತ ಹತ್ತು ಸಾವಿರ ಸಸಿಗಳ ವಿತರಣೆ, ಸ್ವಚ್ಛತಾ ಆಂದೋಲನ ಪ್ರಯುಕ್ತ ನಗರ ಸಭೆಯ ಪೌರ ಕಾರ್ಮಿಕರಿಗೆ ಸನ್ಮಾನ, ಸೈನಿಕರಿಗೆ ಸಹಾಯ ಹಸ್ತ ಇವೆಲ್ಲವೂ ಹೆಮ್ಮೆಯ ವಿಚಾರ ಎಂದು ಸಂಸ್ಥೆಯ ಸಂಚಾಲಕ ಸುಬ್ರಹ್ಮಣ್ಯ ನಟ್ಟೋಜರು ಅಂಬಿಕಾದಲ್ಲಿ ನಡೆದ ಹಿರಿಯ ವಿದ್ಯಾರ್ಥಿ ಸಭೆಯಲ್ಲಿ ತಮ್ಮ ಸಂಸ್ಥೆಯ ವಿದ್ಯಾರ್ಥಿಗಳ ಬಗ್ಗೆ ಹೆಮ್ಮೆಯ ನುಡಿಗಳನ್ನಾಡಿದರು ಮತ್ತು ಹಿರಿಯ ವಿದ್ಯಾರ್ಥಿಗಳ ಸಾಧನೆಯನ್ನೂ ಪ್ರಶಂಸಿಸಿದರು.ಸಂಸ್ಥೆಯ ಖಜಾಂಜಿ ಹಾಗೂ ಅಂಬಿಕಾ ಪದವಿ ಪೂರ್ವ ವಿದ್ಯಾಲಯ ನೆಲ್ಲಿಕಟ್ಟೆಯ ಪ್ರಾಚಾರ್ಯರಾದ ರಾಜಶ್ರೀ ಎಸ್ ನಟ್ಟೋಜ ಅವರು ಪ್ಲಾಸ್ಟಿಕ್ ಮರು ಉಪಯೋಗದ ಬಗ್ಗೆ ಹಾಗೂ ಅನೇಕ ಸಲಹೆ ಹಾಗೂ ಮಾಹಿತಿಗಳನ್ನು ಮಾರ್ಗದರ್ಶನದ ಮೂಲಕ ಹಿರಿಯ ವಿದ್ಯಾರ್ಥಿಗಳಿಗೆ ನೀಡಿದರು.ಹಿರಿಯ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡು ವಿಶೇಷವಾಗಿ ದಶಮಾನೋತ್ಸವದ ಸಲುವಾಗಿ ತಮ್ಮ ಕಡೆಯಿಂದ ಯಾವ ಮಹತ್ಕಾರ್ಯ ಮಾಡಿ ಸಮಾಜ ಸೇವೆ ಮಾಡಬಹುದು, ದಶಮಾನೋತ್ಸವ ಹೇಗೆ ಆಚರಿಸಬಹುದು ಎಂದು ಪೂರ್ವಭಾವಿ ಸಮಾಲೋಚನೆ ಮಾಡಿದರು. ಪ್ರಥಮ ಹಾಗೂ ದ್ವಿತೀಯ ತಂಡದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಉಪಪ್ರಾಚಾರ್ಯ ಸತ್ಯಜಿತ್ ಉಪಾಧ್ಯಾಯ, ಉಪನ್ಯಾಸಕರು ಉಪಸ್ಥಿತರಿದ್ದರು.
ಸಂಘದ ಕಾರ್ಯದರ್ಶಿ ಅಜಯ್‍ರಾಮ್ ಸ್ವಾಗತಿಸಿ ಶಿಶಿರ್
ವಂದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು