Sunday, January 19, 2025
ಕ್ರೈಮ್ರಾಜ್ಯಸಿನಿಮಾಸುದ್ದಿ

ಬ್ಯಾಂಕ್ ಅಧಿಕಾರಿಗಳಿಗೆ ‘ ರೇಪ್ ಕೇಸ್​​’ ಬೆದರಿಕೆ ಒಡ್ಡಿದ್ದ ಆಂಟಿ ಸಂಗೀತಾಗೆ ಡ್ರಗ್​ ಪೆಡ್ಲರ್​ ರಾಹುಲ್​ ಸಖತ್ ಕ್ಲೋಸ್​ ; ವೈರಲ್ ಆಗ್ತಿದೆ ಮೋಜು ಮಸ್ತಿಯ ಬಿಸಿ ಬಿಸಿ ವಿಡಿಯೋ, ಫೋಟೋಗಳು..! – ಕಹಳೆ ನ್ಯೂಸ್

​ಬೆಂಗಳೂರು: ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯೋರ್ವರು ಅಧಿಕಾರಿಗಳಿಗೆ ರೋಪ್​ ಹಾಕುತ್ತಿರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಈ ಮಹಿಳೆಯ ಹೆಸರು ಸಂಗೀತಾ ಗೋಪಾಲ್​. ತುಂಬ ಅಸಭ್ಯವಾಗಿ, ಅಹಂಕಾರದಿಂದ ಅಧಿಕಾರಿಗಳಿಗೇ ಧಮ್ಕಿ ಹಾಕುವ ಈಕೆಯ ಬಗ್ಗೆ ಸ್ಫೋಟಕ ಮಾಹಿತಿಯೊಂದು ಹೊರಬಿದ್ದಿದೆ. ಸಿಸಿಬಿಯಿಂದ ಈಗಾಗಲೇ ಬಂಧಿತನಾಗಿರುವ ಡ್ರಗ್​​ ಪೆಡ್ಲರ್​ ರಾಹುಲ್​ಗೆ ಈ ಸಂಗೀತಾ ತುಂಬ ಆಪ್ತೆ ಎಂದು ಗೊತ್ತಾಗಿದೆ. ಅವರಿಬ್ಬರೂ ಒಟ್ಟಿಗೇ ಇರುವ ಅನೇಕ ಫೋಟೋಗಳೂ ವೈರಲ್​ ಆಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆಕೆ ಬೆದರಿಸುವ ವಿಡಿಯೋವನ್ನು ದೀಪಿಕಾ ನಾರಾಯಣ್​ ಭಾರದ್ವಾಜ್​ ಎಂಬುವರು ತಮ್ಮ ಟ್ವಿಟರ್​ ಮೂಲಕ ಬೆಂಗಳೂರು ಸಿಟಿ ಪೊಲೀಸರ ಗಮನಕ್ಕೂ ತಂದಿದ್ದರು. ಹಾಗೇ ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಆರ್ಯಾ ಅವರು ಇಂದಿರಾನಗರ ಠಾಣೆಯಲ್ಲಿ ಮತ್ತು ನಗರ ಪೊಲೀಸ್ ಕಮಿಷನರ್ ಗೆ ಸಂಗೀತಾ ಗೋಪಾಲ್​ ವಿರುದ್ಧ ದೂರು ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘‘ಸದ್ಯ ರಾಜ್ಯದಾದ್ಯಂತ ಸುದ್ದಿಯಾಗಿರುವ ಡ್ರಗ್ಸ್ ಕೇಸ್‌ನಲ್ಲಿ ಬಂಧಿತನಾದ ಡ್ರಗ್ ಪೆಡ್ಲರ್ ರಾಹುಲ್ ತೋನ್ಸೆ ಎಂಬಾತನ ಜತೆಯೂ ಆಕೆಗೆ ನಂಟಿದೆ’’ ಎಂದು ಸಾಮಾಜಿಕ ಕಾರ್ಯಕರ್ತೆ ಪ್ರಿಯಾ ಆರ್ಯ, ಕಮೀಷನರ್‌ಗೆ ಸೋಮವಾರ ನೀಡಿರುವ ದೂರಿನಲ್ಲಿ ಆರೋಪಿಸಿ, ಅದಕ್ಕೆ ಪೂರಕವಾಗಿ ಆತನ ಜತೆ ಸಂಗೀತಾ ಇರುವ ಹಲವಾರು ಫೋಟೋಗಳನ್ನು ಪೊಲೀಸರಿಗೆ ನೀಡಿದ್ದಾರೆ.

‘‘ಸುಳ್ಳು ಕೇಸ್ ಹಾಕುವುದಾಗಿ ಆಕೆ ಪುರುಷರನ್ನು ಹೆದರಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆಯೂ ಆಕೆ ಹೀಗೆ ಬೇಕಾದಷ್ಟು ಸಲ ನಡೆದುಕೊಂಡಿದ್ದಾಳೆ’’ ಎಂದು ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ, ಆಕೆ ಗಲಾಟೆ ಮಾಡಿ ವ್ಯಕ್ತಿಯೊಬ್ಬರನ್ನು ಹೆದರಿಸುವ ವಿಡಿಯೋ ಒಂದನ್ನೂ ಕೊಟ್ಟಿದ್ದಾರೆ.

‘‘ಮಹಿಳೆಯರ ರಕ್ಷಣೆಗಾಗಿ ಇರುವ ಕಾನೂನುಗಳನ್ನು ದುರುಪಯೋಗಪಡಿಸಿಕೊಳ್ಳುವುದು ಅಪರಾಧ. ತಮ್ಮ ಕೆಲಸಕ್ಕಾಗಿ ಬಂದ ಅಧಿಕಾರಿಗಳಿಗೆ ರೇಪ್ ಕೇಸ್ ಹಾಕುತ್ತೇನೆಂದು ಹೆದರಿಸುತ್ತಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಹಾಗಾಗಿ ಆಕೆಯ ಮೇಲೆ ಕ್ರಮ ಕೈಗೊಳ್ಳಿ’’ ಎಂದು ಪ್ರಿಯಾ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಾಲ ವಸೂಲಾತಿಗೆ ಬಂದಿದ್ದ ಬ್ಯಾಂಕ್​ ಅಧಿಕಾರಿಗಳನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದಲ್ಲದೆ, ಸುಳ್ಳು ಅತ್ಯಾಚಾರ ಆರೋಪ ಹೊರಿಸುವುದಾಗಿ ಆಕೆ ಬೆದರಿಸುತ್ತಾಳೆ. ಓರ್ವನನ್ನು ಮೈಮುಟ್ಟಿ ನೂಕುವುದಲ್ಲದೆ, ಇನ್ನೋರ್ವ ಆಕೆಯ ಕಾಲಿಗೆ ಬೀಳಲು ಮುಂದಾಗುವುದನ್ನೂ ವಿಡಿಯೋದಲ್ಲಿ ನೋಡಬಹುದು. ಇವರೆಲ್ಲ ಬ್ಯಾಂಕ್​ ಅಧಿಕಾರಿಗಳಾಗಿದ್ದು, ಸಾಲ ವಸೂಲಾತಿಗೆ ಬಂದಾಗ ಸಂಗೀತಾ ಇಷ್ಟು ಕೆಟ್ಟದಾಗಿ ವರ್ತಿಸಿದ್ದಾರೆ ಎಂದು ಹೇಳಲಾಗಿತ್ತು.

ಆದರೆ ವಿಡಿಯೋ ಕುರಿತು ಪೂರ್ವ ವಿಭಾಗ ಡಿಸಿಪಿ ಡಾ.ಎಸ್.ಡಿ.ಶರಣಪ್ಪ ಪ್ರತಿಕ್ರಿಯೆ ನೀಡಿದ್ದು, ‘‘ಈ ವಿಡಿಯೋ ಚಿತ್ರೀಕರಣವಾಗಿದ್ದು ಕಳೆದ ವರ್ಷ ಮೇ ತಿಂಗಳಿನಲ್ಲಿ. ಸಂಗೀತಾ ಗೋಪಾಲ್​ ಪತಿ ಕಬ್ಬನ್​ ರಸ್ತೆಯಲ್ಲಿ ಟ್ರಾನ್ಸ್​ಪೋರ್ಟ್ ಆಫೀಸ್ ಹೊಂದಿದ್ದರು. ಅಲ್ಲಿಗೆ ಟೈರ್​ ಸರಬರಾಜು ಮಾಡುತ್ತಿದ್ದವರು ಹಣ ಕೇಳಲು ಬಂದಾಗ ಗಲಾಟೆಯಾಗಿತ್ತು. ವಿಡಿಯೋದಲ್ಲಿ ಇರುವ ಓರ್ವ ವ್ಯಕ್ತಿ ಇತ್ತೀಚೆಗೆ ವೈರಲ್ ಮಾಡಿದ್ದ. ಈ ಘಟನೆ ಬಳಿಕ ಎರಡೂ ಕಡೆಯವರು ಮಾತನಾಡಿ ಬಗೆಹರಿಸಿಕೊಂಡಿದ್ದಾರೆ. ಪ್ರಿಯಾ ಆರ್ಯ​ ನೀಡಿದ ದೂರಿನ ಅನ್ವಯ ಎನ್​ಸಿಆರ್​ ದಾಖಲಿಸಲಾಗಿದೆ’’ ಎಂದು ತಿಳಿಸಿದ್ದಾರೆ.

ಧಮ್ಕಿ ಹಾಕಿರುವ ಮಹಿಳೆ ಸಂಗೀತಾ ಗೋಪಾಲ್​ ಡ್ರಗ್​ ಪೆಡ್ಲರ್​ ರಾಹುಲ್​ ಜತೆ ತುಂಬ ಕ್ಲೋಸ್​ ಆಗಿ, ಪರಸ್ಪರ ಅಪ್ಪಿಕೊಂಡಿರುವ ಫೋಟೋಗಳೆಲ್ಲ ವೈರಲ್​ ಆಗಿದ್ದು, ಮತ್ತಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.