ಸುಶಾಂತ್ ಕೇಸ್; ಬಯಲಾಯ್ತು ರಿಯಾ ಡ್ರಗ್ಸ್ ಜಾಲ, ಬಾಲಿವುಡ್ ಸ್ಟಾರ್ ಗಳ ಬಂಧನ ಸಾಧ್ಯತೆ? – ಕಹಳೆ ನ್ಯೂಸ್
ಮುಂಬೈ:ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿಯನ್ನು ಸಿಬಿಐ, ಎನ್ ಸಿಬಿ ತೀವ್ರ ವಿಚಾರಣೆಗೆ ಗುರಿಪಡಿಸಿದ ಬೆನ್ನಲ್ಲೇ ಮಂಗಳವಾರ (ಸೆ.08, 2020) ಬಂಧಿಸಿದೆ. ಇದರೊಂದಿಗೆ ಹಲವು ದಿನಗಳಿಂದ ತನಗೂ ಡ್ರಗ್ಸ್ ಗೂ ಸಂಬಂಧವಿಲ್ಲ ಎನ್ನುತ್ತಿದ್ದ ರಿಯಾ ನಾಟಕಕ್ಕೆ ತಿರುವು ಸಿಕ್ಕಂತಾಗಿದೆ. ಮತ್ತೊಂದೆಡೆ ಮಹತ್ತರ ಬೆಳವಣಿಗೆಯೊಂದರಲ್ಲಿ ತಾನು ಸಿಗರೇಟಿನೊಳಕ್ಕೆ ಮರಿಜುವಾನಾ(ಗಾಂಜಾ) ತುಂಬಿಸಿ ಸೇವಿಸುತ್ತಿದ್ದಿರುವುದಾಗಿ ಎನ್ ಸಿಬಿ ಮುಂದೆ ತಪ್ಪೊಪ್ಪಿಕೊಂಡಿರುವುದಾಗಿ ವರದಿ ತಿಳಿಸಿದೆ.
ಎನ್ ಸಿಬಿ (ನ್ಯಾಷನಲ್ ಕ್ರೈಂ ಬ್ಯುರೋ) ಅಧಿಕಾರಿಗಳು ತನಿಖೆ ನಡೆಸುತ್ತಿದ್ದ ವೇಳೆ, ತಾನು ದಿ.ನಟ ಸುಶಾಂತ್ ಸಿಂಗ್ ರಜಪೂತ್ ಜತೆ ಮರಿಜುವಾನಾ ಸೇರಿಸಿದ್ದ ಸಿಗರೇಟ್ ಅನ್ನು ಸೇದುತ್ತಿದ್ದೆ ಎಂದು ರಿಯಾ ತಿಳಿಸಿದ್ದಾಳೆ. ಅಲ್ಲದೇ 2016ರಿಂದ ಸುಶಾಂತ್ ಮಾದಕ ದ್ರವ್ಯ ಸೇವಿಸುತ್ತಿದ್ದ ಎಂದು ವರದಿ ತಿಳಿಸಿದೆ.
ನಟ ಸುಶಾಂತ್ ಸಿಂಗ್ ಸಾವಿಗೂ ಮುನ್ನ ವಿಷಪ್ರಾಶನ ಮಾಡಿಸಲಾಗಿತ್ತು: ಸ್ವಾಮಿ ಆರೋಪ
ರಿಯಾ ಮನೆಯಲ್ಲಿ ವಶಪಡಿಸಿಕೊಂಡಿದ್ದ ವಿದ್ಯುನ್ಮಾನ ಗ್ಯಾಜೆಟ್ಸ್ ನಿಂದ ಈ ಮಾಹಿತಿ ಬಯಲಾಗಿದೆ. ವಿಧಿವಿಜ್ಞಾನ ತನಿಖೆಯಲ್ಲಿ ರಿಯಾ ಹಳೆಯ ಮೊಬೈಲ್ ಫೋನ್, ಲ್ಯಾಪ್ ಟಾಪ್ ಮತ್ತು ಟ್ಯಾಬ್ಲೆಟ್ ನಲ್ಲಿ ಎನ್ ಸಿಬಿಗೆ ಹಲವು ಮಹತ್ವದ ಮಾಹಿತಿ ಲಭ್ಯವಾಗಿರುವುದಾಗಿ ವರದಿ ವಿವರಿಸಿದೆ.
ರಿಯಾ ಮನೆಯಲ್ಲಿ ವಶಪಡಿಸಿಕೊಂಡಿದ್ದ ಗ್ಯಾಜೆಟ್ಸ್ ನಿಂದಾಗಿ 2017, 2018, 2019ರಲ್ಲಿ ಇವರ ಡ್ರಗ್ಸ್ ಸರ್ಕಲ್ ಸಕ್ರಿಯವಾಗಿರುವುದು ಬೆಳಕಿಗೆ ಬಂದಿದೆ. ಅಷ್ಟೇ ಅಲ್ಲ ತನಿಖಾ ಏಜೆನ್ಸಿ ಡ್ರಗ್ಸ್ ಪಾರ್ಟಿಯ ಹಲವಾರು ಫೋಟೋಗಳು, ವಿಡಿಯೋ, ವಾಟ್ಸಪ್ ಚಾಟ್ಸ್ ಮತ್ತು ಎಸ್ ಎಂಎಸ್ ಅನ್ನು ಪತ್ತೆ ಹಚ್ಚಿದೆ. ಈ ಫೋಟೋ ಹಾಗೂ ವಿಡಿಯೋಗಳಲ್ಲಿ ಬಾಲಿವುಡ್ ನ ಖ್ಯಾತ ನಟರು ಇದ್ದಿರುವುದು ಬಯಲಾಗಿದೆ. ಬಾಲಿವುಡ್ ನ ಸ್ಟಾರ್ ಗಳು ಎನ್ ಸಿಬಿಯ ಕಣ್ಗಾವಲಿನಲ್ಲಿ ಇದ್ದಿರುವುದಾಗಿ ವರದಿ ತಿಳಿಸಿದೆ.
ಪ್ರೀತಿಸುವುದು ಅಪರಾಧ ಎಂದಾದರೆ ರಿಯಾ ಚಕ್ರವರ್ತಿ ಬಂಧನಕ್ಕೆ ಒಳಗಾಗಲು ಸಿದ್ದ: ವಕೀಲ
ಖ್ಯಾತ ನಟರನ್ನು ಎನ್ ಸಿಬಿ ವಿಚಾರಣೆಗೆ ಗುರಿಪಡಿಸಿದೆಯಾ ಅಥವಾ ಇಲ್ಲವೇ ಎಂಬುದು ತಿಳಿದು ಬರಬೇಕಾಗಿದೆ. ಅಲ್ಲದೇ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ದೊಡ್ಡ ನಟರನ್ನು ಎನ್ ಸಿಬಿ ಬಂಧಿಸುವ ಸಾಧ್ಯತೆ ಇದ್ದಿರುವುದಾಗಿ ವರದಿ ಹೇಳಿದೆ. ಡ್ರಗ್ಸ್ ಜಾಲದ ಕುರಿತಂತೆ ಸ್ಯಾಮ್ಯುಯೆಲ್ ಮಹತ್ತರವಾದ ಮಾಹಿತಿ ನೀಡಿರುವುದು ಎನ್ ಸಿಬಿಗೆ ಅನುಕೂಲಕರವಾಗಿದೆ ಎಂದು ವರದಿ ತಿಳಿಸಿದೆ. ಸುಶಾಂತ್ ಸಿಂಗ್ ಸಿಎ ಶ್ರುತಿ ಮೋದಿಗೂ ಎನ್ ಸಿಬಿ ಸಮನ್ಸ್ ಜಾರಿ ಮಾಡುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.
ಸುಶಾಂತ್ ಪ್ರಕರಣದಲ್ಲಿ ‘ನಶೆ’ ನಂಟು: ರಿಯಾ ಚಕ್ರವರ್ತಿ, ಶೋವಿಕ್ ನಿವಾಸಕ್ಕೆ NCB ರೈಡ್
ಸೋಮವಾರ ವಿಚಾರಣೆ ವೇಳೆ ರಿಯಾ ಚಕ್ರವರ್ತಿ ಹಲವು ಮಹತ್ವದ ಪ್ರಶ್ನೆಗಳಿಗೆ ಉತ್ತರ ನೀಡಲು ವಿಫಲವಾಗಿದ್ದು, ಬಂಧನಕ್ಕೆ ಮುಖ್ಯ ಕಾರಣ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.