Recent Posts

Sunday, January 19, 2025
ರಾಜ್ಯ

ಹಲವರ ಹೆಸರು ಬಾಯ್ಬಿಟ್ಟ ರಾಗಿಣಿ-ಸಂಜನಾ..! -ಕಹಳೆ ನ್ಯೂಸ್

ಬೆಂಗಳೂರು,ಸೆ.10- ಮಾದಕ ವಸ್ತು ಮಾರಾಟ ಜಾಲದ ಪ್ರಕರಣದಲ್ಲಿ ಬಂಧಿತರಾಗಿರುವ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಸಂಜನಾ ಗಲ್ರಾನಿ ವಿಚಾರಣೆ ವೇಳೆ ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ರಾಜಕಾರಣಿ, ಗಣ್ಯರ ಪುತ್ರರು, ಹಿರಿಯ ಸರ್ಕಾರಿ ಅಧಿಕಾರಿಗಳು ಸೇರಿದಂತೆ 30 ಮಂದಿ ಪ್ರಮುಖರ ಹೆಸರನ್ನು ಬಹಿರಂಗಪಡಿಸಿದ್ದಾರೆಂದು ತಿಳಿದುಬಂದಿದೆ.

ನಟಿ ಸಂಜನಾ ಹಾಗೂ ರಾಗಿಣಿ ಇಬ್ಬರನ್ನು ಪ್ರತ್ಯೇಕವಾಗಿ ಸಿಸಿಬಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಪಾರ್ಟಿಗಳಲ್ಲಿ ಯಾರ್ಯಾರು ಭಾಗವಹಿಸುತ್ತಿದ್ದರು ಎಂಬುದರ ಬಗ್ಗೆ ಕೆಲವು ಮಾಹಿತಿ ನೀಡಿದ್ದಾರೆ. ಡ್ರಗ್ಸ್ ದಂಧೆಯಲ್ಲಿ ಭಾಗಿಯಾಗಿರುವ ಹಲವು ಪ್ರಮುಖರ ಹೆಸರುಗಳನ್ನು ಬಾಯ್ಬಿಟ್ಟಿದ್ದಾರೆಂದು ತಿಳಿದುಬಂದಿದೆ.
ಈ ಇಬ್ಬರೂ ನಟಿಯರು ದಂಧೆಯಲ್ಲಿ ಭಾಗಿಯಾಗಿರುವ 30 ಮಂದಿಯ ಹೆಸರನ್ನು ನೀಡಿದ್ದು, ಎರಡೂ ಪಟ್ಟಿಯಲ್ಲಿರುವ ಹೆಸರುಗಳು ಒಂದೇ ರೀತಿಯಲ್ಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದರಲ್ಲಿ ಪ್ರಮುಖ ರಾಜಕಾರಣಿಯ, ಗಣ್ಯರ ಪುತ್ರರು, ಸಂಸದರ ಹಾಗೂ ಶಾಸಕರ ಪುತ್ರರ ಹೆಸರುಗಳಿವೆ ಎನ್ನಲಾಗುತ್ತಿದೆ. ಆದರೆ, ಈ ವ್ಯಕ್ತಿಗಳ ಮನೆಗಳ ಮೇಲೆ ದಾಳಿ ಮಾಡಲು ಅಧಿಕಾರಿಗಳ ಬಳಿ ಸೂಕ್ತ ಸಾಕ್ಷ್ಯಾಧಾರಗಳು ಅಧಿಕಾರಿಗಳಿಗೆ ಲಭ್ಯವಾಗಿಲ್ಲ ಎನ್ನಲಾಗುತ್ತಿದೆ. ಈ ಕುರಿತು ಸಾಕ್ಷ್ಯಾಧಾರಗಳನ್ನು ಪತ್ತೆ ಮಾಡಲಾಗುತ್ತಿದೆ. ಕೆಲ ಹಿರಿಯ ಅಧಿಕಾರಿಗಳ ಕುಟುಂಬ ಸದಸ್ಯರ ಹೆಸರನ್ನು ನಟಿಯರಿಬ್ಬರೂ ಬಾಯ್ಬಿಟ್ಟಿದ್ದು, ಇವರ ಮನೆಗಳ ಮೇಲೆ ದಾಳಿ ನಡೆಸಲು ಸಿಸಿಬಿ ಸಿದ್ಧತೆ ನಡೆಸುತ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ನಡುವೆ ಡ್ರಗ್ಸ್ ದಂಧೆಯಲ್ಲಿ ಮತ್ತೋರ್ವ ಪ್ರಮುಖ ನಟಿ ಕೂಡ ಭಾಗಿಯಾಗಿದ್ದಾರೆಂಬ ಮಾಹಿತಿ ತಿಳಿದುಬಂದಿದೆ. ಆ ನಟಿಯ ಕುರಿತು ಸಾಕ್ಷ್ಯಾಧಾರಗಳನ್ನು ಕಲೆ ಹಾಕಿದ್ದಾರೆಂದು ತಿಳಿದುಬಂದಿದೆ. ರಾಜಕೀಯ ನಾಯಕರೊಂದಿಗೆ ನಟಿ ಸಂಜನಾ ಗಲ್ರಾನಿಯವರು ಸಾಕಷ್ಟು ಆಪ್ತರಾಗಿದ್ದು, ಪ್ರಕರಣ ಸಂಬಂಧ ಹೆಸರು ಕೇಳಿ ಬಂದಿರುವ ಆರೋಪಿಗಳೊಂದಿಗೂ ಸಂಪರ್ಕದಲ್ಲಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ರಾಜಕೀಯ ನಾಯಕರಿಗೆ ಇವರ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿ ತಿಳಿದಿತ್ತೋ, ಇಲ್ಲವೋ ಸ್ಪಷ್ಟವಾಗಿಲ್ಲ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

# ರಾಗಿಣಿಗಿವೆ ಮೂರು ಹೆಸರುಗಳು:
ರವಿಶಂಕರ್ ಮತ್ತು ರಾಗಿಣಿಯ ಹಲವು ಆಪ್ತರು ನಟಿ ರಾಗಿಣಿಯನ್ನ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಿದ್ದರು. ರಾಗಿಣಿ ದ್ವಿವೇದಿ, ಅಲಿಯಾಸ್ ಗಿಣಿ, ಅಲಿಯಾಸ್ ರಾಗ್ಸ್. ಈ ಮೂರು ಹೆಸರಲ್ಲಿ ರಾಗಿಣಿಯನ್ನ ಕರೆಯಲಾಗುತಿತ್ತು. ಹೈ ಎಂಡ್ ಪಾರ್ಟಿಯಲ್ಲಿ ರಾಗಿಣಿ ರಾಗ್ಸ್ ಅಗಿರುತ್ತಿದ್ದರು. ಮನೆಯಲ್ಲಿ ಗಿಣಿಯಾಗಿರುತ್ತಿದ್ದರು ಹಾಗೂ ಹೊರ ಜಗತ್ತಿಗೆ ರಾಗಿಣಿ ದ್ವಿವೇದಿ ಯಾಗಿರುತ್ತಿದ್ದರು.

2018ರ ಬಾಣಸವಾಡಿ ಡ್ರಗ್ಸ್ ಕೇಸ್‍ನಲ್ಲಿ ಪ್ರತೀಕ್ ಶೆಟ್ಟಿ, ರವಿಶಂಕರ್ ಹೆಸರು ಹೇಳಿದ್ದ. ಆದರೆ ರವಿಶಂಕರ್ ಆಗ ತಗಲಾಕಿಕೊಂಡಿರಲಿಲ್ಲ. ನಂತರ ರವಿಶಂಕರ್‍ನನ್ನು ಮಾನಿಟರ್ ಮಾಡಿ ಸಿಸಿಬಿ ವಶಕ್ಕೆ ಪಡೆದಿದ್ದರು. ತನಿಖೆಯ ಸಮಯದಲ್ಲಿ ರಾಗಿಣಿ ಡ್ರಗ್ಸ್ ಸೇವನೆ ಬಗ್ಗೆ ಮಾಹಿತಿ ಕೊಟ್ಟಿದ್ದ ಎನ್ನಲಾಗಿದೆ.

ಇಬ್ಬರ ಮಾಹಿತಿ ಮೇರೆಗೆ ಇಂಟರ್‍ನ್ಯಾಷನಲ್ ಡ್ರಗ್ಸ್ ಪೆಡ್ಲರ್ಸ್ ಲೂಪ್ ಪೆಪ್ಪರ್ ಅಲಿಯಾಸ್ ಸೈಮನ್ ಅರೆಸ್ಟ್ ಮಾಡಲಾಯಿತು. ಇಷ್ಟೆಲ್ಲಾ ಆದ ನಂತರ ಮುಂದುವರೆದ ತನಿಖೆಯಲ್ಲಿ ರಹಸ್ಯ ಬಯಲಾಗಿತ್ತು.

ಸಂಜನಾ ಜೊತೆಗೂ ನಂಟು ಇದ್ದ ಮತ್ತೊಬ್ಬನ ಹೆಸರನ್ನು ಮೂವರು ಅರೋಪಿಗಳು ಬಾಯಿ ಬಿಟ್ಟಿದ್ದರು. ಬಳಿಕ ಹೆಚ್.ಎಸ್.ಆರ್ ಲೇಔಟ್‍ನಲ್ಲಿ ವಾಸವಾಗಿರುವ ಮೂಲತಃ ಕೇರಳಾದ ನಿಯಾಜ್ ಅರೆಸ್ಟ್ ಆಗಿದ್ದ. ನಿಯಾಜ್ ಪಕ್ಕ ಗಾಂಜ ಪಾರ್ಟಿಯಾಗಿದ್ದ. ರಾಗಿಣಿ, ರವಿಶಂಕರ್‍ಗೆ ಡ್ರಗ್ಸ್ ನೀಡುತ್ತಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದ. ನಿಯಾಜ್ ರಾಗಿಣಿ ಮಾತ್ರವಲ್ಲದೆ ಸಂಜನಾಗೂ ಲಿಂಕ್ ಇದ್ದ. ಅದು ಮುಂದಿನ ದಿನದ ತನಿಖೆಯಲ್ಲಿ ಬಯಲಾಗಿದೆ.