Sunday, January 19, 2025
ಪುತ್ತೂರು

ಪ್ರಗತಿ ಸ್ಟಡಿ ಸೆಂಟರ್‌ನಲ್ಲಿ ಸೆಪ್ಟೆಂಬರ್ 21 ರಿoದ ರೆಗ್ಯುಲರ್ ತರಗತಿಗಳು ಆರಂಭ – ಕಹಳೆ ನ್ಯೂಸ್

ಪುತ್ತೂರು: ಸರಕಾರದ ಅಧಿಸೂಚನೆಯ ನಿಯಮದ ಪ್ರಕಾರದಂತೆ ಪ್ರಗತಿ ಎಜ್ಯುಕೇಶನ್ ಫೌಂಡೇಶನ್(ರಿ.)ಪುತ್ತೂರು ಇದರ ಅಧೀನಕ್ಕೆ ಒಳಪಟ್ಟಿರುವ ಧರ್ಮಸ್ಥಳ ಬಿಲ್ಡಿಂಗ್‌ನ ಪ್ರಗತಿ ಸ್ಟಡಿ ಸೆಂಟರ್ ಹಾಗೂ ಪೋಳ್ಯ, ಕಬಕದ ಪ್ರಗತಿ ರೆಸಿಡೆನ್ಸಿಯಲ್ ಕ್ಯಾಂಪಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ವರ್ಷ 2020-21ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ದ್ವಿತೀಯ ಪಿಯುಸಿ ವಿಜ್ಞಾನ, ವಾಣಿಜ್ಯ, ಹಾಗೂ ಕಲಾ ವಿಭಾಗದ ತರಗತಿಗಳು ಸೆಪ್ಟೆಂಬರ್ 21 ಸೋಮವಾರದಿಂದ ಆರಭoಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸರಕಾರ ನಿಯಮಾವಳಿಯಂತೆ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಆರೋಗ್ಯದ ಹಿತದೃಷ್ಟಿಯ ಕಡೆಗೂ ಗಮನಕೊಟ್ಟು 100 ವಿದ್ಯಾರ್ಥಿಗಳಿಗೆ ಮಾತ್ರ ತರಗತಿಗೆ ಅವಕಾಶವಿರುವುದಾಗಿ ಶಿಕ್ಷಣ ಸಂಸ್ಥೆಯ  ಸoಚಾಲಕರಾದ ಪಿ.ವಿ ಗೋಕುಲ್‌ನಾಥ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕಳೆದ 13 ವರ್ಷಗಳಿಂದ ದಾಖಲೆಯ ಫಲಿತಾಂಶವನ್ನು ನೀಡುತ್ತಾ, 2019-20ನೇ ಸಾಲಿನ ದ್ವಿತೀಯ ಪಿಯುಸಿಯಲ್ಲಿ 92% ಫಲಿತಾಂಶವನ್ನು ಪಡೆದ ಹೆಗ್ಗಳಿಕೆಯೊಂದಿಗೆ Covid-19 ನಿಂದ ಪ್ರತಿ ತರಗತಿಗಳಲ್ಲಿಯೂ ಸಾಮಾಜಿಕ ಅಂತರಗಳನ್ನು ಕಾಯ್ದುಕೊಂಡು, ಮುಂದಿನ ವರ್ಷವು ಉತ್ತಮ ಫಲಿತಾಂಶ ನೀಡುವ ಭರವಸೆಯೊಂದಿಗೆ 2020-21ನೇ ಸಾಲಿನ ಶೈಕ್ಷಣಿಕ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ.
ಹೆಚ್ಚಿನ ಮಾಹಿತಿ ಹಾಗೂ ದಾಖಲಾತಿಗಾಗಿ 9448536143, 9900109490 ಹಾಗೂ ನೇರವಾಗಿ ಸಂಸ್ಥೆಯನ್ನು ಸಂಪರ್ಕಿಸಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು