Sunday, January 19, 2025
ಬೆಂಗಳೂರುಸುದ್ದಿ

ಡ್ರಗ್ಸ್ ಮಾಫಿಯಾ ಕೇಸ್; ನಟಿ ರಾಗಿಣಿಗೆ ಇಂದು ಜೈಲಾ.? ಬೇಲಾ.? – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣದಲ್ಲಿ ಬಂಧನಕ್ಕೀಡಾಗಿರುವ ನಟಿ ರಾಗಿಣಿ ದ್ವಿವೇದಿಯವರ ಪೊಲೀಸ್ ಕಸ್ಟಡಿ ಇಂದು ಅಂತ್ಯವಾಗಲಿದ್ದು, ನ್ಯಾಯಾಧೀಶರ ಮುಂದೆ ಮತ್ತೆ ಹಾಜರಾಗಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ 8 ದಿನಗಳಿಂದ ಸಿಸಿಬಿ ಕಸ್ಟಡಿಯಲ್ಲಿರುವ ನಟಿ ರಾಗಿಣಿ, ವಿಚಾರಣೆ ವೇಳೆ ಯಾವುದೇ ಮಾಹಿತಿ ನೀಡಿಲ್ಲ. ತನಗೇನೂ ಗೊತ್ತಿಲ್ಲ. ಎಲ್ಲವೂ ಮರೆತು ಹೋಗಿದೆ ಎಂದು ರಾಗಿಣಿ ಹೇಳುತ್ತಿದ್ದಾರೆ ಎನ್ನಲಾಗಿದೆ. ಇಂದಿಗೆ ರಾಗಿಣಿ ಸಿಸಿಬಿ ಕಸ್ಟಡಿ ಮುಗಿಯುವ ಹಿನ್ನಲೆಯಲ್ಲಿ ಮಧ್ಯಾಹ್ನ ರಾಗಿಣಿಯವರನ್ನು ಸಿಸಿಬಿ ಅಧಿಕಾರಿಗಳು ಜಡ್ಜ್ ಮುಂದೆ ಹಾಜರುಪಡಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ರಾಗಿಣಿ ವಿಚಾರಣೆಗೆ ಸರಿಯಾಗಿ ಸ್ಪಂದಿಸುತ್ತಿಲ್ಲವಾದ್ದರಿಂದ ಹೆಚ್ಚಿನ ವಿಚಾರಣೆಗೆ ರಾಗಿಣಿಯವರನ್ನು ಇನ್ನಷ್ಟು ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಕೋರುವ ಸಾಧ್ಯತೆ ದಟ್ಟವಾಗಿದೆ.
ಈ ನಡುವೆ ನಟಿ ರಾಗಿಣಿ ಪರ ವಕೀಲರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮಧ್ಯಾಹ್ನದ ನಂತರ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಕೂಡ ನಡೆಯಲಿದೆ. ಆದರೆ ರಾಗಿಣಿಗೆ ಇಂದು ಜಾಮೀನು ಸಿಗುವುದು ಅನುಮಾನ ಎನ್ನಲಾಗಿದೆ.