ಭೋಪಾಲ್: ‘ಕೋವಿಡ್‌ಗೆ ಮದ್ದು ಕಂಡುಹಿಡಿಯುವ ತನಕ, ಸೋಂಕಿನ ಕುರಿತು ನಿರ್ಲಕ್ಷ್ಯ ತೋರಿಸಬೇಡಿ’ ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಹೇಳಿದರು.
ಮಧ್ಯಪ್ರದೇಶದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ನಿರ್ಮಿಸಲಾದ ಮನೆಗಳನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈ ವೇಳೆ ‘ಜಬ್ ತಕ್ ದವಾಯಿ ನಹೀ, ತಬ್ ತಕ್ ಡಿಲಾಯಿ ನಹೀ’, ‘ದೋ ಗಜ್ ಕಿ ದೂರಿ ಮಾಸ್ಕ್ ಹೈ ಜರೂರಿ’ ಎಂಬ ಘೋಷವಾಕ್ಯಗಳನ್ನು ಹೇಳುವ ಮೂಲಕ ಅವರು ಕೋವಿಡ್-19 ಕುರಿತಂತೆ ಇನ್ನೂ ಮುನ್ನೆಚ್ಚರಿಕೆ ಅಗತ್ಯ ಎಂದು ಪ್ರತಿಪಾದಿಸಿದರು.
ಬಡವರನ್ನು ಬಲಪಡಿಸುವ ಮೂಲಕ ಬಡತನಕ್ಕೆ ಅಂತ್ಯ ಹಾಡಬೇಕಿದೆ. ಈ ನಿಟ್ಟಿನಲ್ಲಿ ಪ್ರಧಾನ್ ಮಂತ್ರಿ ಆವಾಸ್ ಯೋಜನೆ (ಪಿಎಂಎವೈ) ಬಡವರ ಸಬಲೀಕರಣದ ಗುರಿಯನ್ನು ಹೊಂದಿದೆ ಎಂದು ಹೇಳಿದರು.
ಯೋಜನೆಯಡಿ ನಿರ್ಮಿಸಲಾದ 1.75 ಲಕ್ಷ ಮನೆಗಳ ಗೃಹಪ್ರವೇಶ ಸಮಾರಂಭಕ್ಕೂ ಅವರು ಚಾಲನೆ ನೀಡಿದರು. ನಂತರ ಯೋಜನೆಯ ಕೆಲವು ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು.