Friday, November 15, 2024
ರಾಷ್ಟ್ರೀಯ

ಅಮಿತ್ ಶಾ ಮತ್ತೆ ಆಸ್ಪತ್ರೆಗೆ ದಾಖಲು, ಏಮ್ಸ್‌ನಲ್ಲಿ ಚಿಕಿತ್ಸೆ – ಕಹಳೆ ನ್ಯೂಸ್

ನವದೆಹಲಿ, ಸೆ.13-ಕೇಂದ್ರ ಗೃಹ ಸಚಿವ ಅಮಿತ್ ಶಾ ಅನಾರೋಗ್ಯದಿಂದಾಗಿ ನಿನ್ನೆತಡರಾತ್ರಿ ಮತ್ತೆದಹೆಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್) ಆಸ್ಪತ್ರೆಗೆದಾಖಲಾಗಿದ್ದಾರೆ. ಅವರಆರೋಗ್ಯ ಸ್ಥಿರವಾಗಿದೆ ಎಂದುಆಸ್ಪತ್ರೆಯ ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೆಲವು ದಿನಗಳ ಹಿಂದೆಕೊರೊನಾ ವೈರಸ್ ಸೋಂಕಿನಿಂದಾಗಿ ಏಮ್ಸ್‍ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಅಮಿತ್ ಶಾ ಅವರಿಗೆ ನಿನ್ನೆರಾತ್ರಿ 11 ಗಂಟೆಯಲ್ಲಿ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿತು. ತಕ್ಷಣ ಅವರನ್ನುಏಮ್ಸ್ ಆಸ್ಪತ್ರೆಗೆಕರೆದೊಯ್ಸುಅತಿಗಣ್ಯ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ವಿಶೇಷ ವ್ಯವಸ್ಥೆಇರುವ ಸಿಎನ್ ಟವರ್ಸ್ ವಿವಿಐಪಿ ಕೊಠಡಿಯಲ್ಲಿ ಇರಿಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಏಮ್ಸ್‍ಆಸ್ಪತ್ರೆಯ ಖ್ಯಾತ ತಜ್ಞ ವೈದ್ಯಡಾರಣದೀಪ್‍ಗುಲೇರಿಯಾ ನೇತೃತ್ವದ ತಂಡ ಅಮಿತ್ ಶಾ ಅವರಆರೋಗ್ಯದ ಉಸ್ತುವಾರಿ ನೋಡಿಕೊಳ್ಳುತ್ತಿದೆ. ಗೃಹ ಸಚಿವರಿಗೆ ಉಸಿರಾಟದ ಸಮಸ್ಯೆಯಾಗಿದೆ. ಯಾವುದೇ ಆತಂಕವಿಲ್ಲ. ಅವರ ಆರೋಗ್ಯ ಸ್ಥಿರವಾಗಿದೆ.

ಕೋವಿಡ್-19 ಸೋಂಕಿಗೆ ಒಳಗಾಗಿ ಚೇತರಿಸಿಕೊಂಡ ನಂತರ ಕಂಡು ಬಹುದಾದ ಸಣ್ಣಪುಟ್ಟ ಆನಾರೋಗ್ಯ ಸಮಸ್ಯೆಇದಾಗಿದೆ. ಅವರಿಗೆಚಿಕಿತ್ಸೆ ನೀಡಲಾಗಿದೆಎಂದು ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.

ಕೊರೊನಾ ಸೋಂಕಿನಿಂದಾಗಿ ಆಗಸ್ಟ್ 2ರಂದು ಅಮಿತ್ ಶಾ ಅವರನ್ನುಗುರುಗ್ರಾಮದ ಮೇಡಾಂತಆಸ್ಪತ್ರೆಗೆ ಸೇರಿಸಲಾಗಿತ್ತು. ನಂತರ ಆ.18ರಂದು ಅವರು ಏಮ್ಸ್‍ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು.