ಮಂಗಳೂರು: ಮಂಗಳೂರಿನ ವೆನ್ಲಾಕ್ ಆಸ್ಪತ್ರೆ ನಿಮಗೆಲ್ಲಾ ಗೊತ್ತೇ ಇದೆ. ಬಡವರ ದೊಡ್ಡ ದೊಡ್ಡ ಖಾಯಿಲೆಗಳಿಗೆ ಔಷಧ ಸಿಗುವ ಜಾಗ ಇದು. ಈ ಆಸ್ಪತ್ರೆಯಲ್ಲಿ ದಾಖಲಾದ್ರೆ, ರೋಗಿಗಳಿಗೆ ಸರ್ಕಾರದಿಂದ ಆಹಾರ ಸಿಗುತ್ತೆ. ಆದ್ರೆ ರೋಗಿಗಳನ್ನು ನೋಡಿಕೊಳ್ಳೊ ಸಹಾಯಕರಿಗೆ ಆಹಾರದ ಸೌಲಭ್ಯ ಇಲ್ಲ. ಹೀಗಾಗಿ ಇಲ್ಲಿ ಸಹಾಯಕರಾಗಿ ನಿಲ್ಲೋ ಅದೆಷ್ಟೋ ಜನ ಊಟ ಇಲ್ಲದೆ, ಹಸಿವು ಕಟ್ಟಿಕೊಂಡು, ನೀರು ಕುಡಿದು, ಕೆಲವೊಮ್ಮೆ ಭಿಕ್ಷೆ ಎತ್ತಿ ಹೊಟ್ಟೆ ತುಂಬಿಸಿಕೊಂಡ ದಿನನೂ ಇದೆ. ಆದ್ರೆ ಕಳೆದ 7 ವರ್ಷಗಳಿಂದ ಇಲ್ಲಿ ರೋಗಿಗಳ ಜೊತೆ ಬರೋರಿಗೆ ಈ ಚಿಂತೆ ಇಲ್ಲ . ಯಾಕೆಂದ್ರೆ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಇವರು “ಕಾರುಣ್ಯ” ಯೋಜನೆಯಡಿ ಹಸಿದವರ ಹೊಟ್ಟೆ ತಣಿಸುವ ಕಾಯಕವನ್ನು ಶುರು ಮಾಡಿದ್ದಾರೆ.
ಹೌದು, ಕಳೆದ ಏಳೂವರೆ ವರ್ಷಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸಂಕಷ್ಟದಲ್ಲಿರುವ ರೋಗಿಗಳಿಗೆ, ಅಶಕ್ತರಿಗೆ ನೆರವಿನ ಹಸ್ತ ಚಾಚುತ್ತಿರುವ ಎಂ.ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ಮಂಗಳೂರು “ಕಾರುಣ್ಯ” ಯೋಜನೆಯಡಿ ಹಸಿದವರ ಹೊಟ್ಟೆ ತಣಿಸುವ ಕಾಯಕದಲ್ಲಿ ತೊಡಗಿಸಿಕೊಂಡು ನಾಳೆಗೆ ಸಾವಿರ ದಿನಗಳನ್ನು ಪೂರೈಸುತ್ತಿದೆ. ಮಂಗಳೂರು ಎಂತಾ ಪರಿಸ್ಥಿಯಲ್ಲಿ ಇದ್ರೂ ರೋಗಿಗಳ ಸಹಾಯಕರಿಗೆ ದಿನನಿತ್ಯ ಆಹಾರದ ವ್ಯವಸ್ಥೆ ಮಾತ್ರ ತಪ್ಪಿಲ್ಲ. ಆದ್ರೆ ಕೆಲವೊಮ್ಮೆ ಆಹಾರಕ್ಕೆ ಹಣದ ಕೊರತೆ ಎದುರಾಗುತ್ತಿದೆ. ಹೀಗಾಗಿ ನಿಮಗೆ ಅಥವಾ ನಿಮ್ಮ ಬಂಧು ಬಳಗ, ಸ್ನೇಹಿತರಿಗೆ ಬಡವರ ಹಸಿವು ನೀಗಿಸುವ ಈ ಯೋಜನೆಗೆ ಕಿಂಚಿತ್ ಸಹಕಾರ ನೀಡುವ ಉದ್ದೇಶವಿದ್ದರೆ ಟ್ರಸ್ಟಿನ ಈ ಬ್ಯಾಂಕ್ ಖಾತೆಗೆ ಧನ ಸಹಾಯ ಮಾಡಬಹುದು.
M Friends Charitable Trust
A/C No: 3058101003352
Bank: Canara Bank
Branch : Vittal
IFSC : CNRB0003058
Contact: +9980880860 +91 9741993313