Friday, November 15, 2024
ಪುತ್ತೂರು

ಜೆ.ಇ.ಇ. ಮೈನ್ – ಅಂಬಿಕಾ ವಿದ್ಯಾಲಯದ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ- ಕಹಳೆ ನ್ಯೂಸ್

ಪ್ರತಿಷ್ಠಿತ ಐ.ಐ.ಟಿ. ಹಾಗೂ ಎನ್.ಐ.ಟಿ.ಗಳಿಗೆ ಪ್ರವೇಶ ಕಲ್ಪಿಸುವ ರಾಷ್ಟ ಮಟ್ಟದ ಜೆ.ಇ.ಇ. ಮೈನ್-2020 ಪರೀಕ್ಷೆಯಲ್ಲಿ ಅಂಬಿಕಾ ಪದವಿ ಪೂರ್ವ ವಿದ್ಯಾಲಯದ ವಿದ್ಯಾರ್ಥಿಗಳಾದ ಸಮರ್ಥ್ ಕುಮಾರ್ ಶೆಟ್ಟಿ 8769 ನೇ ರ್ಯಾಂ ಕ್, ರಿಶು ಎಚ್ ರೈ 10567 ನೇ ರ್ಯಾಂ ಕ್ ಹಾಗೂ ನದೀಮ್ ಡಿ.ಕೆ 16814 ನೇ ರ್ಯಾಂ ಕ್ ಪಡೆದು ಉತ್ತಮ ಸಾಧನೆ ಮಾಡಿ ಎನ್.ಐ.ಟಿ.ಗಳಿಗೆ ಪ್ರವೇಶ ಅರ್ಹತೆ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಾದ ದೀಕ್ಷಾ ಡಿ ಎಸ್ (92.997), ಶ್ರೀಜಿತ್ ಎಂ (92.607), ಆದರ್ಶ ಎಂ (91.676), ಪ್ರವೀಣ್ ಶೆಟ್ಟಿ (88.913), ಯಜ್ಞೇಶ್ ಎ (87.781), ಸ್ವರೂಪ್ ರಾಜ್ ವರ್ಮ (87.525), ಶ್ರೀಹರಿ ಎಸ್ (86.047), ಶ್ರೀರಂಜನಿ ಎ (86.032), ಸ್ಪೂರ್ತಿ ಎಂ ಎಸ್ (85.790), ಶಿವಸಾಯಿ ಎಸ್ ಮಮದಾಪುರ್ (85.639), ಕಾರ್ತಿಕ್ ಬಿ.ಎಸ್ (85.405) ಉತ್ತಮ ಸಾಧನೆ ತೋರಿ ಗಮನ ಸೆಳೆದಿದ್ದಾರೆ. ಸಂಸ್ಥೆಯಿoದ ಹಾಜರಾದ ವಿದ್ಯಾರ್ಥಿಗಳಲ್ಲಿ ಶೇ.55ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಂದಿನ ಹಂತದ ಜೆ.ಇ.ಇ. ಎಡ್ವಾನ್ಸ್ ಪರೀಕ್ಷೆ ಬರೆಯಲು ಅರ್ಹತೆ ಗಳಿಸಿದ್ದು ಅಂಬಿಕಾ ಸಂಸ್ಥೆಯ ಗುಣಮಟ್ಟದ ಶಿಕ್ಷಣಕ್ಕೆ ಸಾಕ್ಷಿಯಾಗಿದೆ. ವಿದ್ಯಾರ್ಥಿಗಳ ಈ ವಿಶೇಷ ಸಾಧನೆಗೆ ಸಂಸ್ಥೆಯ ಸಂಚಾಲಕರು, ಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಉಪನ್ಯಾಸಕೇತರರು ಅಭಿನಂದಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು