ಬೆಂಗಳೂರು: ನಿನ್ನೆ ಕೋರ್ಟ್ ಜಾಮೀನು ನಿರಾಕರಿಸಿದ ನಂತರ ಜೈಲುಪಾಲಾಗಿರುವ ನಟಿ ರಾಗಿಣಿ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ರಾತ್ರಿ ಕಳೆದಿದ್ದರೆ, ಇತ್ತ ಸಾಂತ್ವನಾ ಕೇಂದ್ರದಲ್ಲಿ ನಟಿ ಸಂಜನಾ ಒಂಟಿಯಾಗಿದ್ದಾರೆ.
ಈ ನಡುವೆಯೇ, ಸಂಜನಾರಿಗೆ ಸಿಸಿಬಿ ಅಧಿಕಾರಿಗಳು ಇನ್ನಷ್ಟು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ. ಆದರೆ ಸಂಜನಾ ತನಿಖೆಗೆ ಸಂಪೂರ್ಣವಾಗಿ ಸಹಕಾರ ನೀಡುತ್ತಿಲ್ಲ ಎಂದು ತಿಳಿದುಬಂದಿದೆ.
ಈ ಹಿಂದೆ ವಿಚಾರಣೆ ವೇಳೆ ಸಂಜನಾ ಸರಿಯಾಗಿ ತನಿಖೆಗೆ ಸಹಕರಿಸದ ಹಿನ್ನೆಲೆಯಲ್ಲಿ, ಮತ್ತೆ ವಿಚಾರಣೆ ನಡೆಸಲು ಸಂಜನಾ ವಶಕ್ಕೆ ಪಡೆದಿರುವ ಸಿಸಿಬಿ ಅಧಿಕಾರಿಗಳು, ಈಕೆಯ ಬಾಯಿ ಬಿಡಿಸಿ ಮತ್ತಷ್ಟು ಮಹತ್ವದ ಮಾಹಿತಿ ಕಲೆಹಾಕಲು ಯೋಜನೆ ರೂಪಿಸಿದ್ದಾರೆ.
ಇದರಿಂದ ಸಂಜನಾಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ. ಇಷ್ಟು ದಿನ ಹೇಗೋ ಹಾರಿಕೆ ಉತ್ತರ ಕೊಟ್ಟು ತಪ್ಪಿಸಿಕೊಳ್ಳಲು ನೋಡುತ್ತಿದ್ದ ಈ ಮಾದಕ ನಟಿ, ಇದೀಗ ಸಿಸಿಬಿ ವಿಚಾರಣೆ ಎದುರಿಸಲೇಬೇಕಾದ ಅನಿವಾರ್ಯತೆ ಉಂಟಾಗಿದೆ.
ಈಕೆಯ ಮೊಬೈಲ್ ಮೇಲೆ ಸಿಸಿಬಿ ಪೊಲೀಸರ ಕಣ್ಣುಬಿದ್ದಿದೆ. ಮೂರು ಮೊಬೈಲ್ಗಳು ರಿಟ್ರೀವ್ ಆಗಿರುವುದು ಬೆಳಕಿಗೆ ಬಂದ ಹಿನ್ನಲೆ, ಸಿಮ್ ಇಲ್ಲದೇ ಮೊಬೈಲ್ ಫೋನ್ ಬಳಕೆ ಮಾಡಿದ್ದು ಏಕೆ? ಯಾವ ಉದ್ದೇಶಕ್ಕಾಗಿ ಇದನ್ನು ಬಳಸಲಾಗುತ್ತಿತ್ತು? ಸಿಮ್ ಇಲ್ಲದೇ ಸ್ಮಾರ್ಟ್ಫೋನ್ ಬಳಸುತ್ತಿದ್ದ ಔಚಿತ್ಯವೇನಿತ್ತು..? ಯಾವ ಕಾರಣಕ್ಕಾಗಿ ವೈಫೈ ಬಳಕೆ ಮಾಡಿ ಮೊಬೈಲ್ ಗಳನ್ನ ಬಳಸಲಾಗುತ್ತಿತ್ತು ಎಂಬಿತ್ಯಾದಿ ಪ್ರಶ್ನೆಗಳಿಗೆ ಸಂಜನಾ ಉತ್ತರಿಸಬೇಕಾದ ಅನಿವಾರ್ಯತೆ ಉಂಟಾಗಿದೆ.
ಎಲ್ಲಾ ಆಯಾಮಗಳಲ್ಲಿ ತನಿಖೆ ಮುಂದುವರೆಸಲಿರುವ ಸಿಸಿಬಿ ಅಧಿಕಾರಿಗಳು ಹೇಳಿದ್ದಾರೆ.