Sunday, January 19, 2025
ಹೆಚ್ಚಿನ ಸುದ್ದಿ

BIGNEWS: ʼಚೀನಾ-ಭಾರತ ಗಡಿ ವಿವಾದ ಗಂಭೀರʼ: ರಾಜನಾಥ್‌ ಸಿಂಗ್‌ – ಕಹಳೆ ನ್ಯೂಸ್

ನವದೆಹಲಿ: ಚೀನಾ-ಭಾರತ ಗಡಿ ವಿವಾದ ಗಂಭೀರವಾಗಿದ್ದು, ನಮಗೆ ಶಾಂತಿಯುತ ಪರಿಹಾರ ಬೇಕಿದೆ ಎಂದು ಸಂಸತ್‌ನಲ್ಲಿ ರಕ್ಷಣಾ ಸಚಿವರಾಜ ನಾಥ್‌ ಸಿಂಗ್‌ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚೀನಾ-ಭಾರತ ಗಡಿ ಸಂಘರ್ಷ ಇನ್ನೂ ಮುಗಿದಿಲ್ಲ. ಇದಕ್ಕೆ ಚೀನಾ ದೇಶವೇ ಕಾರಣವಾಗಿದ್ದು, ನಮಗೆ ಶಾಂತಿಯುತ ಪರಿಹಾರ ಬೇಕಿದೆ. ಇನ್ನು ಚೀನಾ ಸೇನೆ ನಿಯೋಜನೆ ಏಪ್ರಿಲ್‌ನಿಂದ ಹೆಚ್ಚಳವಾಗಿದ್ದು, ಶಸ್ತ್ರಾಸ್ತ್ರಗಳ ಸಂಗ್ರಹ ಹೆಚ್ಚಿಸಿದೆ. ಹಾಗಾಗಿ ಯಥಾಸ್ಥಿತಿ ಕಾಪಾಡಲು ಭಾರತ ಎಚ್ಚರಿಕೆ ನೀಡಿದೆ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಲಡಾಖ್‌ಗೆ ಪ್ರಧಾನಿ ಮೋದಿ ಭೇಟಿ ನೀಡಿದ್ರು. ಇಡೀ ದೇಶವೇ ನಿಮ್ಮ ಜೊತೆ ಇದೆ ಎಂದು ಸೈನಿಕರನ್ನೂ ಉರಿದುಂಬಿಸಿದರು. ಗಡಿಯಲ್ಲಿ ನಮ್ಮ ಸೈನಿಕರು ತಕ್ಕ ಉತ್ತರ ನೀಡ್ತಿದ್ದು, ನಮ್ಮ ಯೋಧರು ಸಂಯಮ, ಶೌರ್ಯ ಪ್ರದರ್ಶಿಸಿದ್ರು. ಇನ್ನು ಎಲ್‌ಎಸಿಯನ್ನು ಉಭಯ ದೇಶಗಳು ಗೌರಸಬೇಕಿದೆ. ಆಕ್ರಮಿತ ಪ್ರದೇಶಗಳಲ್ಲಿ ಚೀನಾ ಮೂಲಸೌಕರ್ಯ ಕಲ್ಪಸ್ತಿದೆ. ಎಲ್ಲ ವಿಚಾರಗಳನ್ನ ಈಗ ಹೇಳಲು ಸಾಧ್ಯವಿಲ್ಲ ಎಂದು ಸವರು ಹೇಳಿದ್ದಾರೆ.

ಕೊರೊನಾ ಸಂಕಷ್ಟದಲ್ಲೂ ಚೀನಾ ಕಿರಿಕ್‌ ಮಾಡ್ತಿದ್ದು, ಗಡಿಯುದ್ದಕ್ಕೂ ಸೇನೆ ಸರ್ವಸನ್ನದ್ಧವಾಗಿದೆ. ಯಾವುದೇ ಪರಿಸ್ಥಿತಿ ಎದುರಾದ್ರು ನಾವು ಎದುರಿಸಲು ಸಿದ್ಧ. ಇಡೀ ದೇಶವೇ ನಮ್ಮ ಸೈನಿಕರ ಜೊತೆಗಿದೆ ಎಂದು ರಾಜನಾಥ್‌ ಸಿಂಗ್‌ ಹೇಳಿದ್ದಾರೆ.