Friday, September 20, 2024
ಸುದ್ದಿ

ಬ್ರೆಡ್ ಸಮೋಸ – ಅಡುಗೆ ಮನೆ

Bread-samosa
ಬ್ರೆಡ್ ಸಮೋಸ – ಅಡುಗೆ ಮನೆ

Aduge Mane

 

ಜಾಹೀರಾತು
ಜಾಹೀರಾತು
ಜಾಹೀರಾತು
ಬೇಕಾಗುವ ಪದಾರ್ಥಗಳು
  • ಎಣ್ಣೆ – ಕರಿಯಲು
  • ಜೀರಿಗೆ – ಅರ್ಧ ಚಮಚ
  • ಹಸಿಮೆಣಸಿನ ಕಾಯಿ ಪೇಸ್ಟ್ – ಅರ್ಧ ಚಮಚ
  • ಶುಂಠಿ ಪೇಸ್ಟ್ – ಅರ್ಧ ಚಮಚ
  • ಬಟಾಣಿ – ಅರ್ಧ ಬಟ್ಟಲು
  • ದನಿಯಾ ಪುಡಿ – ಆರ್ಧ ಚಮಚ
  • ಸೋಂಪು ಪುಡಿ – ಅರ್ಧ ಚಮಚ
  • ಅಚ್ಚ ಖಾರದ ಪುಡಿ – ಅರ್ಧ ಚಮಚ
  • ಮಾವಿನಕಾಯಿ ಪುಡಿ – ಅರ್ಧ ಚಮಚ
  • ಗರಂ ಮಸಾಲಾ ಪುಡಿ – ಅರ್ಧ ಚಮಚ
  • ಉಪ್ಪು – ರುಚಿಗೆ ತಕ್ಕಷ್ಟು
  • ಬೇಯಿಸಿದ ಆಲೂ – 1 ಬಟ್ಟಲು
  • ಕೊತ್ತಂಬರಿ ಸೊಪ್ಪು – ಸ್ವಲ್ಪ
  • ಬ್ರೆಡ್ – 3-4
  • ಮೈದಾ – 3-4 ಚಮಚ
ಮಾಡುವ ವಿಧಾನ…
  • ಮೊದಲು ಬಾಣಲೆ ತೆಗೆದುಕೊಂಡು ಒಲೆಯ ಮೇಲಿಟ್ಟು 2 ಚಮಚ ಎಣ್ಣೆ ಹಾಕಿ ಕಾಯಲು ಬಿಡಬೇಕು. ನಂತರ ಜೀರಿಗೆ, ಶುಂಠಿ ಪೇಸ್ಟ್, ಹಸಿಮೆಣಸಿನ ಕಾಯಿ ಪೇಸ್ಟ್, ಬಟಾಣಿ ಹಾಕಿ 1 ನಿಮಿಷ ಹುರಿದುಕೊಳ್ಳಬೇಕು.
  • ನಂತರ ದನಿಯಾ ಪುಡಿ, ಅಚ್ಚ ಖಾರದ ಪುಡಿ, ಮಾವಿನ ಕಾಯಿ ಪುಡಿ, ಗರಂ ಮಸಾಲಾ ಪುಡಿ, ಸೋಂಪು ಪುಡಿ, ಉಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು. ಇದಕ್ಕೆ ಬೇಯಿಸಿದ ಆಲೂ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ನಂತರ ಕೊತ್ತಂಬರಿ ಸೊಪ್ಪು ಹಾಕಿ ಮಿಶ್ರಣ ಮಾಡಬೇಕು.
  • ಚಿಕ್ಕ ಪಾತ್ರೆಯೊಂದನ್ನು ತೆಗೆದುಕೊಂಡು ಅದಕ್ಕೆ ಮೈದಾ ಹಿಟ್ಟು, ಸ್ವಲ್ಪ ನೀರು ಹಾಕಿ ಪೇಸ್ಟ್ ರೀತಿಯಲ್ಲಿ ಮಿಶ್ರಣ ಮಾಡಿಕೊಳ್ಳಬೇಕು.
  • ನಂತರ ಬ್ರೆಡ್ ತುಂಡುಗಳನ್ನು ತೆಗೆದುಕೊಂಡು ನಾಲ್ಕು ಬದಿಗಳಲ್ಲಿ ಕತ್ತರಿಸಿ ಬಿಳಿ ಭಾಗದ ಬ್ರೆಡ್ ತೆಗೆದುಕೊಳ್ಳಬೇಕು. ಲಟ್ಟಣಿಗೆ ತೆಗೆದುಕೊಂಡು ಬ್ರೆಡ್ ನ್ನು ಮೆತ್ತಗಾಗುವಂತೆ ನಿಧಾನಗತಿಯಲ್ಲಿ ಒತ್ತಬೇಕು.
  • ನಂತರ ಈ ಬ್ರೆಡ್ ತುಂಡುಗಳ ತುದಿಗೆ ಮೈದಾ ಹಿಟ್ಟನ್ನು ಸವರಿ ಕೋನ್ ರೀತಿ ಮಾಡಿಕೊಂಡು ಒಳಗೆ ಈ ಮೊದಲೇ ಮಾಡಿಕೊಂಡ ಬಟಾಣಿ ಮಸಾಲಾವನ್ನು ಹಾಕಿ ಮುಚ್ಚಬೇಕು.
  • ಬಾಣಲೆಗೆ ಎಣ್ಣೆ ಹಾಕಿ, ಕಾದ ನಂತರ ಈ ಬ್ರೆಡ್ ಗಳನ್ನು ಹಾಕಿ ಕೆಂಪಗಾಗುವವರೆಗೂ ಕರಿದರೆ, ರುಚಿಕರವಾದ ಬ್ರೆಡ್ ಸಮೋಸಾ ಸವಿಯಲು ಸಿದ್ಧ.

ಜಾಹೀರಾತು