Sunday, January 19, 2025
ಹೆಚ್ಚಿನ ಸುದ್ದಿ

BREAKING: ʼಸ್ಟಾರ್‌ ದಂಪತಿʼಗೆ ಸಿಸಿಬಿ ನೋಟಿಸ್‌: ವಿಚಾರಣೆಗೆ ಹಾಜರಾದ ದಿಗಂತ್-ಐಂದ್ರಿತಾ..! – ಕಹಳೆ ನ್ಯೂಸ್

ಬೆಂಗಳೂರು: ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ನೋಟಿಸ್​ ಜಾರಿ ಮಾಡಿರುವ ಸಿಬಿಬಿ, ಇಂದು(ಬುಧವಾರ) ಬೆಳಗ್ಗೆ 11 ಗಂಟೆಗೆ ಕಚೇರಿಗೆ ಹಾಜರಾಗುವಂತೆ ತಿಳಿಸಿತ್ತು. ಅದ್ರಂತೆ, ಸ್ಟಾರ್‌ ದಂಪತಿಗಳು ವಿಚಾರಣೆಗೆ ಹಾಜರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪಾರ್ಟಿಯಲ್ಲಿ ನಟಿ ರಾಗಿಣಿ, ಸಂಜನಾ ಜೊತೆ ಐಂದ್ರಿತಾ ಕೂಡ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಅಲ್ಲದೇ ವಿರೇನ್ ಖನ್ನಾ ಹೇಳಿಕೆಯಲ್ಲೂ ಐಂದ್ರಿತಾ ರೈ ಹೆಸರು ಕೇಳಿಬಂದಿದ್ದು, ಕ್ಯಾಸಿನೋಗೆ ಭೇಟಿ ನೀಡುವ ವಿಡಿಯೋ ಆಧಾರದ ಮೇಲೆ ನಟಿ ಐಂದ್ರಿತಾ ರೇ ಮತ್ತು ನಟ ದಿಗಂತ್​ಗೆ ಸಿಸಿಬಿ ನೋಟಿಸ್​ ಜಾರಿ ಮಾಡಿತ್ತು ಎನ್ನಲಾಗ್ತಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಂದ್ಹಾಗೆ, ಲಂಕಾದಲ್ಲಿ ಕ್ಯಾಸಿನೊ ವ್ಯವಹಾರ ನಡೆಸುತ್ತಿದ್ದ ಫೈಜಲ್, ಚಿತ್ರನಟಿಯರಿಗೆ ಕ್ಯಾಸಿನೊ ಪಾರ್ಟಿಗಳಿಗೆ ಆಹ್ವಾನ ನೀಡುತ್ತಿದ್ದ. ಕ್ಯಾಸಿನೊ ಪಾರ್ಟಿಗೆ ಕನ್ನಡ ನಟಿ ಐಂದ್ರಿತಾ ರೇ ಅವರಿಗೆ ಆಹ್ವಾನ ನೀಡಿರುವ ವಿಡಿಯೊ ಲಭ್ಯವಾಗಿದ್ದು, ‘ಈದ್ ಆಚರಣೆಗೆ ಕೊಲಂಬೊದ ಕ್ಯಾಸಿನೊಗೆ ಬರುತ್ತಿದ್ದೇನೆ. ಇದಕ್ಕೆ ಆಹ್ವಾನ ನೀಡಿರುವ ಶೇಖ್ ಫೈಜಲ್ ಅವರಿಗೆ ಧನ್ಯವಾದಗಳು’ ಎಂದಿದ್ದಾರೆ.