Sunday, January 19, 2025
ಹೆಚ್ಚಿನ ಸುದ್ದಿ

ಸ್ಟಾರ್ ದಂಪತಿಗಳ ಸಿಸಿಬಿ ವಿಚಾರಣೆ ಅಂತ್ಯ: ದಿಗಂತ್ ಹಾಗೂ ಐಂದ್ರಿತಾಗೆ ಸದ್ಯಕ್ಕೆ ರಿಲೀಫ್ – ಕಹಳೆ ನ್ಯೂಸ್

ಬೆಂಗಳೂರು: ಸ್ಯಾಂಡಲ್ ವುಡ್ ಗೆ ಡ್ರಗ್ಸ್ ಮಾಫಿಯಾ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಗಂತ್ ಹಾಗೂ ನಟಿ ಐಂದ್ರಿತಾ ಅವರ ಸಿಸಿಬಿ ವಿಚಾರಣೆ ಅಂತ್ಯಗೊಂಡಿದ್ದು, ಸಿಸಿಬಿ ಕಚೇರಿಯಿಂದ ದಪತಿಗಳು ಹೊರಬಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಟಾರ್ ದಂಪತಿಗಳ ವಿಚಾರಣೆ ಕುರಿತು ಮಾಹಿತಿ ನೀಡಿದ ಸಿಸಿಬಿ ಮುಖ್ಯಸ್ಥ ಸಂದೀಪ್ ಪಾಟೀಲ್, ನಟ ದಿಗಂತ್ ಹಾಗೂ ಐಂದ್ರಿತಾ ಅವರ ಮೊದಲ ಹಂತದ ವಿಚಾರಣೆ ಮುಗಿದಿದೆ. ಸಾಕಷ್ಟು ಮಾಹಿತಿ ಕಲೆ ಹಾಕಿದ್ದೇವೆ. ಸದ್ಯಕ್ಕೆ ಇಬ್ಬರೂ ಸಿಸಿಬಿ ಕಚೇರಿಯಿಂದ ತೆರಳಿದ್ದಾರೆ. ಮತ್ತೆ ವಿಚಾರಣೆ ಅಗತ್ಯವಿದ್ದರೆ ಸಮನ್ಸ್ ನೀಡಿ ವಿಚಾರಣೆಗೆ ಕರೆಸಿಕೊಳ್ಳಲಾಗುವುದು ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಡ್ರಗ್ಸ್ ಜಾಲದ ಜೊತೆ ನಂಟು ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ನೋಟೀಸ್ ಹಿನ್ನಲೆಯಲ್ಲಿ ನಟ ದಿಗಂತ್ ಹಾಗೂ ಐಂದ್ರಿತಾ ರೇ ಇಂದು ಬೆಳಿಗ್ಗೆ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದರು. ಸತತ ನಾಲ್ಕು ಗಂಟೆಗಳ ಕಾಲ ಸ್ಟಾರ್ ದಂಪತಿಯನ್ನು ವಿಚಾರಣೆ ನಡೆಸಿದ ಸಿಸಿಬಿ ಅಧಿಕಾರಿಗಳು ಹಲವು ಮಾಹಿತಿಗಳನ್ನು ಪಡೆದು ವಾಪಸ್ ಕಳುಹಿಸಿದ್ದಾರೆ.