Saturday, November 16, 2024
ಹೆಚ್ಚಿನ ಸುದ್ದಿ

18ರಿಂದ ಬದಲಾಗಲಿದೆ ಎಟಿಎಂ ವಿತ್​ಡ್ರಾ ರೂಲ್ಸ್​: ಇಲ್ಲಿದೆ ಮಾಹಿತಿ – ಕಹಳೆ ನ್ಯೂಸ್

ನವದೆಹಲಿ: ಗ್ರಾಹಕರ ಸುರಕ್ಷತೆಯೇ ಮುಖ್ಯಧ್ಯೇಯ ಎಂದಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂನಲ್ಲಿ ಹಣವನ್ನು ವಿತ್​ಡ್ರಾ ಮಾಡುವುದಕ್ಕೆ ಸಂಬಂಧಿಸಿದಂತೆ ಕೆಲವೊಂದು ನಿಯಮಗಳನ್ನು ರೂಪಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮುಂದೆ 10 ಸಾವಿರಕ್ಕಿಂತ ಹೆಚ್ಚಿನ ಮೊತ್ತವನ್ನು ವಿತ್​ಡ್ರಾ ಮಾಡಿಕೊಳ್ಳಬಯಸಿದರೆ, ನಿಮ್ಮ ಫೋನ್​ಗೆ ಓಟಿಪಿ (ಒನ್​ಟೈಂ ಪಾಸ್​ವರ್ಡ್​) ಬರುತ್ತದೆ. ನೀವು ಬ್ಯಾಂಕ್​ಗೆ ನೋಂದಣಿ ಮಾಡಿರುವ ಮೊಬೈಲ್​ ಸಂಖ್ಯೆಗೆ ಈ ಓಟಿಪಿ ಬರುತ್ತದೆ. ಅದನ್ನು ಎಟಿಎಂ ಮಷಿನ್​ ಮೇಲೆ ನಮೂದು ಮಾಡಿದ ಮೇಲಷ್ಟೇ ಹಣವನ್ನು ಪಡೆಯಲು ಸಾಧ್ಯ.
ಆದ್ದರಿಂದ ಇನ್ನುಮುಂದೆ ಎಸ್​ಬಿಐನ ಯಾವುದೇ ಎಟಿಎಂಗೆ ಹೋಗಬೇಕಿದ್ದಲ್ಲಿ, 10 ಸಾವಿರ ರೂಪಾಯಿಗಿಂತ ಅಧಿಕ ಹಣವನ್ನು ವಿತ್​ಡ್ರಾ ಮಾಡುವುದೇ ಆಗಿದ್ದಲ್ಲಿ ಮೊಬೈಲ್​ ಫೋನ್​ ಅನ್ನು ಕಡ್ಡಾಯವಾಗಿ ಒಯ್ಯಲೇಬೇಕು. ಎಟಿಎಂಗೆ ಕನ್ನ ಹಾಕಿ ಹಣವನ್ನು ವಿತ್​ಡ್ರಾ ಮಾಡುತ್ತಿರುವುದು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ವ್ಯವಸ್ಥೆಯನ್ನು ಬ್ಯಾಂಕ್​ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಈ ನಿಯಮ ಎಸ್​ಬಿಐನ ಎಟಿಎಂ ಹೊರತುಪಡಿಸಿ ಬೇರೆ ಯಾವುದೇ ಬ್ಯಾಂಕ್​ಗಳ ಎಟಿಎಂನಿಂದ ಹಣವನ್ನು ವಿತ್​ಡ್ರಾ ಮಾಡುವಾಗಿ ಅನ್ವಯ ಆಗುವುದಿಲ್ಲ. ಇದರ ಅರ್ಥ ಒಂದು ವೇಳೆ ನೀವು ಎಸ್​ಬಿಐ ಕಾರ್ಡ್​ ಹೊಂದಿದ್ದರೆ, ಬೇರೆ ಬ್ಯಾಂಕ್​ನ ಎಟಿಎಂನಿಂದ ಹಣವನ್ನು ಡ್ರಾ ಮಾಡುವುದಿದ್ದರೆ, ಎಷ್ಟು ಹಣ ಪಡೆದರೂ ಎಟಿಎಂ ಬರುವುದಿಲ್ಲ. ಏಕೆಂದರೆ ಇದು ಸದ್ಯ ಬೇರೆ ಬ್ಯಾಂಕ್​ಗಳಿಗೆ ಅನ್ವಯ ಆಗಿಲ್ಲ.