Recent Posts

Saturday, November 16, 2024
ಸುದ್ದಿ

ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಆಯ್ಕೆ – ಕಹಳೆ ನ್ಯೂಸ್

ಪುತ್ತೂರು: 2020ನೇ ಸಾಲಿನ ಎರಡನೇ ಹಂತದ ಜೆಇಇ ಮೈನ್ಸ್ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು, ಈ ಪರೀಕ್ಷೆಯಲ್ಲಿ ವಿವೇಕಾನಂದ ಪದವಿ ಪೂರ್ವಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆಯನ್ನು ಮಾಡಿ ಜೆಇಇ ಅಡ್ವಾನ್ಸ್ ಪರೀಕ್ಷೆಗೆ ಆಯ್ಕೆಯಾಗಿರುತ್ತಾರೆ.

ವಿದ್ಯಾರ್ಥಿಗಳಾದ ಗೌರೀಶ ಕಜಂಪಾಡಿ (99.928), ವಿಜಿತ್‍ಕೃಷ್ಣ (97.12), ಸಕ್ಷಾತ್(94.82), ನಿಶಾ ಎಂ.ಎಸ್(94.73),ಅಂಕಿತಾ ಸಿ(93.44),ಅಕ್ಷಯ್ ಪಾಂಗಳ್(93.35), ಸುಹಾಸ್ ಭಟ್(89.17), ಪ್ರಣವ್(88.29), ಶಶಾಂಕ್ ಎಂ.ಬಿ(87.78), ವಿಶ್ವಾಸ್ ರಾವ್(87.48), ಅಭಿಷೇಕ್ ಮೂರ್ತಿ(85.23), ದೇವಿಪ್ರಸಾದ್ ರೈ(83.83), ವಿಜೇತ್(83.75), ಚವ್ವನ್(83.38), ರಾಹುಲ್ ನಾಯಕ್(82.35), ಸಂಪತ್ ಹೆಗಡೆ (76.709) , ಲಿಖಿತ್ ಟಿ. ನಾಯ್ಕ್ (56.98) ಪರ್ಸಂಟೇಜ್ ಗಳಿಸಿದ್ದಾರೆ. ಸಂಸ್ಥೆಯಿಂದ ಹಾಜರಾದ ವಿದ್ಯಾರ್ಥಿಗಳಲ್ಲಿ ಶೇ.65ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮುಂದಿನ ಹಂತದ ಪರೀಕ್ಷೆಯನ್ನು ಬರೆಯಲು ಅರ್ಹತೆಗಳಿಸಿದ್ದು, ವಿದ್ಯಾರ್ಥಿಗಳ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ಮತ್ತು ಉಪನ್ಯಾಸಕೇತರ ವೃಂದದವರು ಅಭಿನಂದಿಸಿರುತ್ತಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು