Sunday, January 19, 2025
ಹೆಚ್ಚಿನ ಸುದ್ದಿ

ಸ್ಯಾಂಡಲ್​ವುಡ್ ಡ್ರಗ್ ಮಾಫಿಯಾದ ಕಿಂಗ್​ ಪಿನ್​ ಯಾರು ಗೊತ್ತಾ?; ಕೊನೆಗೂ ಹೊರಬಿತ್ತು ಹೆಸರು – ಕಹಳೆ ನ್ಯೂಸ್

ಬೆಂಗಳೂರು (ಸೆ.17): ಸ್ಯಾಂಡಲ್​ವುಡ್​ ಡ್ರಗ್​ ಮಾಫಿಯಾ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ದಿನಕ್ಕೊಬ್ಬರಂತೆ ಅರೆಸ್ಟ್​ ಕೂಡ ಆಗುತ್ತಿದ್ದಾರೆ. ಡ್ರಗ್ಸ್​ ದಂಧೆಯ ಆರೋಪದಲ್ಲಿ ಸಿಸಿಬಿ ವಶದಲ್ಲಿದ್ದ ನಟಿ ರಾಗಿಣಿ ದ್ವಿವೇದಿ ಸೇರಿದಂತೆ 5 ಆರೋಪಿಗಳ ಜಾಮೀನು ಅರ್ಜಿಯನ್ನು ಮುಂದೂಡಲಾಗಿದೆ. ಇನ್ನು, ನಟಿ ಸಂಜನಾರನ್ನು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ಮಧ್ಯೆ, ಈ ಪ್ರಕರಣದ ಪ್ರಮುಖ ಆರೋಪಿ ಯಾರು ಎನ್ನುವ ಬಗ್ಗೆ ಸಾಕಷ್ಟು ಕುತೂಹಲ ಮೂಡಿತ್ತು. ಈಗ ಇದಕ್ಕೆ ಕೊನೆಗೂ ಉತ್ತರ ಸಿಕ್ಕಿದೆ. ಆಫ್ರಿಕಾದ ಪ್ರಜೆಗಳೆ ಡ್ರಗ್​ ಪ್ರಕರಣದ ಕಿಂಗ್ ಪಿನ್ ಗಳು ಎನ್ನುವ ಮಾಹಿತಿ ಗೊತ್ತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

15 ದಿನಗಳ ಹಿಂದೆ ಲೂಮಾ ಪೆಪ್ಪರ್ ಸಾಂಬಾ ಎಂಬ ಆಫ್ರಿಕಾ ಪ್ರಜೆಯನ್ನು ಸಿಸಿಬಿ ಬಂಧಿಸಿತ್ತು. ಸಿಸಿಬಿ ವಿಚಾರಣೆ ವೇಳೆ ಪೆಪ್ಪರ್ ಹಲವರ ಹೆಸರು ಹೊರಹಾಕಿದ್ದ. ಪೆಪ್ಪರ್ ಮಾಹಿತಿ ಮೇರೆಗೆ ಬೆನ್ನಲ್ಲೇ ಮತ್ತೊಬ್ಬ ಆಫ್ರಿಕನ್ ಪ್ರಜೆ ಬೆನಾಲ್ಡ್ ಉಡೇನ್ನಾನನ್ನು ಬಂಧಿಸಲಾಗಿತ್ತು. ವಿಚಾರಣೆ ವೇಳೆ ಡ್ರಗ್ಸ್ ಸಫ್ಲೈ ಬಗ್ಗೆ ಇಂಚಿಂಚು ಮಾಹಿತಿಯನ್ನು ಉಡೆನ್ನಾ ನೀಡಿದ್ದಾನೆ. ಅಲ್ಲದೆ, ಸೆಲೆಬ್ರಿಟಿಗಳಿಗೆ ಮಾದಕವಸ್ತುಗಳನ್ನು ಪೂರೈಕೆ ಮಾಡುತ್ತಿದ್ದು ನಾವೇ ಎಂದು ಒಪ್ಪಿಕೊಂಡಿದ್ದಾನೆ. ಉಡೆನ್ನಾ, ಆದಿತ್ಯಾ ಆಳ್ವಾಗೆ ಆಪ್ತನಾಗಿದ್ದ. ಆದಿತ್ಯ ಆಳ್ವಾ, ರವಿಶಂಕರ್ ಹಾಗೂ ವಿರೇನ್ ಖನ್ನಾ, ಉಡೆನ್ನಾ ಸಂಪರ್ಕ ಹೊಂದಿದ್ದರು. ನಗರದ ಪಾರ್ಟಿಗಳಿಗೆ ಉಡೆನ್ನಾ ಮಾದಕ ವಸ್ತು ಪೂರೈಕೆ ಮಾಡುತ್ತಿದ್ದ. ಇದೇ ಆಧಾರದ ಮೇಲೆ ಸಿಸಿಬಿ ಆದಿತ್ಯಾ ಆಳ್ವಾ ರೆಸಾರ್ಟ್ ಮೇಲೆ ದಾಳಿ ಮಾಡಿತ್ತು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಉಡೆನ್ನಾ ಬಾಸ್​ ಯಾರು?:

ಲೂಮಾ ಹಾಗೂ ಉಡೆನ್ನಾ ಇಲ್ಲಿ ಡ್ರಗ್​ ಪೂರೈಕೆ ಮಾಡುತ್ತಿದ್ದಾರೆಯಾದರೂ ಇವರ ಬಾಸ್​ ಬೆರೆಯೇ ಇದ್ದಾನೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಇವರಿಬ್ಬರ ಬಂಧನದ ಬೆನ್ನಲ್ಲೇ ಈ ಆರೋಪಿ ತಲೆ ಮರೆಸಿಕೊಂಡಿದ್ದಾನೆ. ತನಿಖೆಗೆ ತೊಂದೆಯಾಗುವ ಹಿನ್ನೆಲೆಯಲ್ಲಿ ಹೆಸರನ್ನು ಸಿಸಿಬಿ ಗೌಪ್ಯವಾಗಿರಿಸಿದೆ.
ಆದಿತ್ಯ ಆಳ್ವ ಮನೆಯಲ್ಲಿ ಗಾಂಜಾ ಪತ್ತೆ:

ಮಾಜಿ ಸಚಿವ ಜೀವರಾಜ್ ಆಳ್ವ ಅವರ ಮಗ ಆದಿತ್ಯ ಆಳ್ವ ಸ್ಯಾಂಡಲ್​ವುಡ್​ ಡ್ರಗ್​ ಕೇಸ್​ನಲ್ಲಿ ಸಿಲುಕಿಕೊಂಡಿದ್ದಾರೆ. ನಟಿ ರಾಗಿಣಿ ದ್ವಿವೇದಿ, ರವಿಶಂಕರ್ ಬಂಧನವಾಗುತ್ತಿದ್ದಂತೆ ಆದಿತ್ಯ ಆಳ್ವ ತಲೆಮರೆಸಿಕೊಂಡಿದ್ದಾರೆ. ಅವರು ವಿದೇಶದಲ್ಲಿ ತಲೆಮರೆಸಿಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಸೆಪ್ಟೆಂಬರ್ 15ರಂದು ಆದಿತ್ಯ ಆಳ್ವನ ರೆಸಾರ್ಟ್​ ಮೇಲೆ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅವರ ಮನೆಯಲ್ಲಿ ಗಾಂಜಾ ಪತ್ತೆಯಾಗಿತ್ತು. ಆದಿತ್ಯ ಆಳ್ವ ಅವರ ಫಾರ್ಮ್ ಹೌಸ್ ಮ್ಯಾನೇಜರ್ ರಾಮದಾಸ್​ನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದರು. ಆದಿತ್ಯ ಆಳ್ವ ಅವರ ರೆಸಾರ್ಟ್​ನಲ್ಲಿ ಗಾಂಜಾ ಪತ್ತೆಯಾಗಿದ್ದು, ಎರಡು ಲ್ಯಾಪ್​ಟಾಪ್, ಒಂದು ಕಂಪ್ಯೂಟರ್‌ ಹಾಗೂ ಸಿಸಿಟಿವಿ ಡಿವಿಆರ್ ಪತ್ತೆಯಾಗಿದ್ದು, ಅವೆಲ್ಲವನ್ನೂ ಪೊಲೀಸರು ವಶಕ್ಕೆ ಪಡೆದಿದ್ದರು.