Sunday, January 19, 2025
ರಾಜಕೀಯರಾಜ್ಯಸುದ್ದಿ

ಒಂದು ತಿಂಗಳಲ್ಲಿ ದಕ್ಷಿಣ ಕನ್ನಡ ಡ್ರಗ್ಸ್ ಮುಕ್ತ ಜಿಲ್ಲೆ | ಪಬ್, ಕ್ಲಬ್ ಎಲ್ಲವೂ ಬಂದ್ ಆಗಬೇಕು ; ಸಂಸದ ನಳಿನ್ ಖಡಕ್ ಹೇಳಿಕೆ – ಕಹಳೆ ನ್ಯೂಸ್

ಮಂಗಳೂರು, ಸೆ. 17 : ರಾಜ್ಯದಲ್ಲಿ ಡ್ರಗ್ಸ್ ವಿಚಾರ ಸಾಕಷ್ಟು ಸದ್ದು ಮಾಡುತ್ತಿದ್ದು, ದ.ಕ. ಜಿಲ್ಲೆಯನ್ನು ಒಂದು ತಿಂಗಳಿನಲ್ಲಿ ಡ್ರಗ್ಸ್ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಬಿಜೆಪಿ ರಾಜ್ಯಾಧ್ಯಕ್ಷ, ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.

 

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರಿನಲ್ಲಿ ಮಾತನಾಡಿರುವ ಅವರು, ನಮ್ಮ ಜಿಲ್ಲೆಯಲ್ಲಿರುವ ಪಬ್‌ಗಳು ಮುಚ್ಚಬೇಕು. ಪಬ್, ಕ್ಲಬ್ ಎಲ್ಲವನ್ನೂ ಬಂದ್ ಮಾಡಿ ಆದೇಶ ನೀಡಬೇಕು. ಈ ಹಿಂದೆ ನಮ್ಮ ಕಾಲಘಟ್ಟದಲ್ಲಿ ವೀಡಿಯೋ ಗೇಮ್ ಕ್ಲಬ್ ನಿಲ್ಲಿಸಿದ್ದೇವೆ. ಸದ್ಯ ಕಮೀಷನರ್‌ಗೆ ಪಬ್ ನಿಲ್ಲಿಸಲು ಸೂಚಿಸಲಾಗಿದೆ. ಪೊಲೀಸರು ಕ್ರಮ ತೆಗೆದುಕೊಳ್ಳದೇ ಇದ್ದರೆ, ಬಿಜೆಪಿ ಯುವಮೋರ್ಚಾಗೆ ಹೇಳಿದ್ದೇನೆ ಕಾನೂನು ಹೋರಾಟ ನಡೆಸಲಿದೆ. ವಕೀಲರನ್ನು ಹಿಡಿದು ಹೈಕೋರ್ಟ್‌ಗೆ ಹೋಗಿ ಕಾನೂನು ಹೋರಾಟ ಮಾಡಲಿದ್ದಾರೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾರ್ಥಿಗಳು ಹಾಳಾಗುವುದಕ್ಕೆ ಅವಕಾಶವಿಲ್ಲ. ವಿದ್ಯಾರ್ಥಿಗಳ ದಾರಿ ತಪ್ಪಿಸುವ ಯಾವುದೇ ಚಟುವಟಿಕೆಗಳಿಗೆ ಬಿಜೆಪಿ ಸರಕಾರ ಅನುಮತಿ ನೀಡುವುದಿಲ್ಲ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಕಠಿಣ ನಿಲುವು ಕೈಗೊಳ್ಳಲಾಗುವುದೆಂದರು. ಇನ್ನು ಕಾಂಗ್ರೆಸ್ ಅವಧಿಯಲ್ಲಿ ಎಷ್ಟೆಲ್ಲಾ ಅಕ್ರಮ ನಡೆದಿದೆ, ಅವೆಲ್ಲವುಗಳ ಎಲ್ಲಾ ಅಂಕಿ ಅಂಶ ನೀಡುತ್ತೇನೆ. ಬನ್ನಿ ಚರ್ಚೆಗೆ ಎಂಬುವುದಾಗಿ ಸವಾಲೆಸೆದಿದ್ದಾರೆ.