Sunday, January 19, 2025
ಹೆಚ್ಚಿನ ಸುದ್ದಿ

ಅಶ್ವತ್ಥ ಎಲೆಯಲ್ಲಿ ಮೂಡಿದ ಮೋದಿ: ಮೋಡಿಯಾದ ಪ್ರಧಾನಿಯಿಂದ ಟ್ವೀಟ್! – ಕಹಳೆ ನ್ಯೂಸ್

ಮಂಗಳೂರು: ಕಲಾವಿದರೋರ್ವರು ಅಶ್ವತ್ಥ ಎಲೆಯಲ್ಲಿ ಕಲಾತ್ಮಕವಾಗಿ ಕತ್ತರಿಸಿ ಪ್ರಧಾನಿ ಮೋದಿಯವರ ಚಿತ್ರ ರಚಿಸಿದ್ದರು. ಈ ಚಿತ್ರ ಮೋದಿಯವರನ್ನೇ ಮೋಡಿ ಮಾಡಿದ್ದು, ಸ್ವತಃ ಅವರೇ ಚಿತ್ರವನ್ನು ಮೆಚ್ಚಿ ತಮ್ಮ ಟ್ವಿಟ್ಟರ್​​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಸುಳ್ಯ ತಾಲೂಕಿನ ಅಡ್ಕರ್ ಎಂಬಲ್ಲಿನ ಕಲಾವಿದ ಶಶಿ ಅಡ್ಕಾರ್ ಎಂಬುವರು ನಿನ್ನೆ ಒಂದೂವರೆ ತಾಸು ಪ್ರಯತ್ನ ಪಟ್ಟು, ಅಶ್ವತ್ಥ ಎಲೆಯ ಮೇಲೆ ಮೋದಿ ಅವರ ಚಿತ್ರ ಬಿಡಿಸಿದ್ದರು. ಮೊದಲಿಗೆ ಅಶ್ವತ್ಥ ಎಲೆಯಲ್ಲಿ ಮೋದಿಯವರ ಸ್ಕೆಚ್ ಬಿಡಿಸಿ, ಬ್ಲೇಡ್​ನಿಂದ ಶೇಪ್ ಮಾಡಿ, ಕತ್ತರಿಸಿ ಈ ಚಿತ್ರ ಬಿಡಿಸಿದ್ದರು‌. ಪ್ರಧಾನಿ ಮೋದಿಯವರ ಜನ್ಮದಿನದ ಪ್ರಯುಕ್ತ ಅವರು ತಮ್ಮ ಟ್ವಿಟ್ಟರ್​​ನಲ್ಲಿ 17 ಸೆಕೆಂಡ್​​ನ ವಿಡಿಯೋವನ್ನು ಖಾತೆಗೆ ಟ್ಯಾಗ್ ಮಾಡಿದ್ದರು.
ಟ್ವೀಟ್ ಮಾಡಿದ ಅರ್ಧ ಗಂಟೆಯಲ್ಲೇ ಸ್ವತಃ ಮೋದಿಯವರೇ ಈ ಚಿತ್ರವನ್ನು ಮೆಚ್ಚಿ, ತಮ್ಮ ಟ್ವೀಟ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು