Sunday, January 19, 2025
ಹೆಚ್ಚಿನ ಸುದ್ದಿ

BIG BREAKING : ಸಿಸಿಬಿಯಿಂದ ಅಕುಲ್ ಬಾಲಾಜಿ, ಸಂತೋಷ್ ಕುಮಾರ್ ಹಾಗೂ ಆರ್ ಬಿ ಯುವರಾಜ್ ಗೆ ನೋಟಿಸ್- ಕಹಳೆ ನ್ಯೂಸ್

ಬೆಂಗಳೂರು : ಈಗಾಗಲೇ ಹಲವರನ್ನು ಸಿಸಿಬಿ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟು, ವಿಚಾರಣೆಯನ್ನೂ ನಡೆಸುತ್ತಿದೆ. ಇದರ ಬೆನ್ನಲ್ಲೇ, ಟಿವಿ ಆಂಕರ್ ಅಕುಲ್ ಬಾಲಾಜಿ ಸೇರಿದಂತೆ ಮೂವರಿಗೆ ಪ್ರಕರಣದಲ್ಲಿ ಸಿಸಿಬಿ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಅಕುಲ್ ಬಾಲಾಜಿಗೂ ಬಿಗ್ ಶಾಕ್ ನೀಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ನಟಿ ಸಂಜನಾ, ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಅನೇಕರನ್ನು ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿ, ವಿಚಾರಣೆ ನಡೆಸಿದೆ. ಅಲ್ಲದೇ ನಟಿ ರಾಗಿಣಿ ಸೇರಿದಂತೆ ಇತರೆ ಆರೋಪಿಗಳು ಜೈಲು ಸೇರಿದ್ದಾರೆ.ಇದೀಗ ಇದೇ ಪ್ರಕರಣದಲ್ಲಿ, ಸಿಸಿಬಿಯಿಂದ ಅಕುಲ್ ಬಾಲಾಜಿ, ಸಂತೋಷ್ ಕುಮಾರ್ ಹಾಗೂ ಆರ್ ಬಿ ಯುವರಾಜ್ ಗೆ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದೆ. ಈ ಮೂಲಕ ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ ಮತ್ತೊಂದು ಟ್ವಿಸ್ಟ್ ಪಡೆದುಕೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು