Friday, November 15, 2024
ಸುದ್ದಿ

ಕೋವಿಡ್-19 ವಿರುದ್ಧ ಭಾರತ-ಮಾಲ್ಡಿವ್ಸ್ ಹೋರಾಟ : ಮೋದಿ-ಕಹಳೆ ನ್ಯೂಸ್

ನವದೆಹಲಿ,ಸೆ.21- ಡೆಡ್ಲಿ ಕೋವಿಡ್-19 ವೈರಸ್ ದಾಳಿಯಿಂದ ತಲೆದೋರಿರುವ ಆರೋಗ್ಯ ಮತ್ತು ಆರ್ಥಿಕ ಪರಿಣಾಮಗಳ ವಿರುದ್ಧ ಭಾರತ ಮತ್ತು ಅದರ ಮಿತ್ರ ರಾಷ್ಟ್ರವಾದ ಮಾಲ್ಡಿವ್ಸ್ ಹೋರಾಟ ಮುಂದುವರೆಸಿದೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕುರಿತು ಟ್ವಿಟ್ ಮಾಡಿರುವ ಅವರು, ಏಷ್ಯಾದ ಯಾವುದೇ ರಾಷ್ಟ್ರ ಸಂಕಷ್ಟದಲ್ಲಿದ್ದರೂ ಅವುಗಳಿಗೆ ಭಾರತ ಅಗತ್ಯವಾದ ಎಲ್ಲಾ ನೆರವುಗಳನ್ನು ನೀಡಲು ಸಿದ್ಧ ಎಂದು ಪುನರುಚ್ಚರಿಸಿದ್ದಾರೆ.

ದ್ವೀಪರಾಷ್ಟ್ರ ಮಾಲ್ಡಿವ್ಸ್‍ಗೆ ಹಣಕಾಸು ನೆರವು ನೀಡಿದ ಭಾರತಕ್ಕೆ ಮಾಲ್ಡಿವ್ಸ್ ಅಧ್ಯಕ್ಷ ಇಬ್ರಾಹಿಂ ಮಹಮದ್ ಸೋಲಿ ಅವರು ಕೃತಜ್ಞತೆ ಸಲ್ಲಿಸಿ ಟ್ವಿಟ್ ಮಾಡಿರುವುದಕ್ಕೆ ಪ್ರತಿಕ್ರಿಯಿಸಿರುವ ಮೋದಿ, ಭಾರತ ಮತ್ತು ಮಾಲ್ಡಿವ್ಸ್ ಮಿತ್ರ ರಾಷ್ಟ್ರ ಹಾಗೂ ನೆರೆಹೊರೆ ದೇಶಗಳಾಗಿವೆ. ಮೊದಲಿನಿಂದಲೂ ಆ ದೇಶದೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಅದು ಸದಾ ಕಾಲ ಮುಂದುವರೆಯಲಿದೆ ಎಂದು ಹೇಳಿದ್ದಾರೆ.

ಕೊರೊನಾ ವೈರಸ್ ದಾಳಿಯಿಂದ ಭಾರತದಂತೆಯೇ ಮಾಲ್ಡಿವ್ಸ್ ಕೂಡ ಆರೋಗ್ಯ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಪಿಡುಗಿನ ವಿರುದ್ಧ ಎಡರೂ ದೇಶಗಳು ಒಗ್ಗೂಡಿ ಹೋರಾಟ ಮುಂದುವರೆಸಲಿದೆ ಎಂದು ಮೋದಿ ತಿಳಿಸಿದ್ದಾರೆ.