Recent Posts

Monday, January 20, 2025
ಸುದ್ದಿ

ರಾಷ್ಟ್ರೀಯ ಭದ್ರತಾ ಕಾಯ್ದೆ: 563 ಮಂದಿ ಈಗಲೂ ಕಸ್ಟಡಿಯಲ್ಲಿ-ಕಹಳೆ ನ್ಯೂಸ್

ನವದೆಹಲಿ: ದೇಶದ ವಿವಿಧ ಕಡೆ 2017 ಮತ್ತು 2018ರ ಅವಧಿಯಲ್ಲಿ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ (ಎಸ್‌ಎಸ್‌ಎ) ಸುಮಾರು 1,200 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಇವರಲ್ಲಿ 563 ಮಂದಿ ಇನ್ನೂ ಕಸ್ಟಡಿಯಲ್ಲಿದ್ದಾರೆ ಎಂದು ಕೇಂದ್ರದ ಗೃಹ ಖಾತೆ ರಾಜ್ಯ ಸಚಿವ ಜಿ.ಕಿಶನ್‌ ರೆಡ್ಡಿ ಸೋಮವಾರ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

2018ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಪ್ರಕಾರ, ಮೇಲಿನ ಎರಡು ವರ್ಷಗಳ ಅವಧಿಯಲ್ಲಿ, ಈ ಕಠಿಣ ಕಾಯ್ದೆಯಡಿ ಮಧ್ಯಪ್ರದೇಶದಲ್ಲಿ ಅತಿ ಹೆಚ್ಚು ಜನರನ್ನು ವಶಕ್ಕೆ ಪಡೆಯಲಾಗಿದೆ. ಉತ್ತರ ಪ್ರದೇಶ ಈ ವಿಷಯದಲ್ಲಿ ಎರಡನೇ ಸ್ಥಾನದಲ್ಲಿದೆ ಎಂದು ಸಚಿವರು ರಾಜ್ಯಸಭೆಯಲ್ಲಿ ನೀಡಿದ ಲಿಖಿತ ಉತ್ತರದಲ್ಲಿ ವಿವರಿಸಿದ್ದಾರೆ.

2017ರಲ್ಲಿ ದೇಶದ ವಿವಿಧ ಕಡೆ 501 ಮಂದಿಯನ್ನು ಈ ಕಾಯ್ದೆಯಡಿ ವಶಕ್ಕೆ ತೆಗೆದುಕೊಳ್ಳಲಾಗಿತ್ತು. ಪರಿಶೀಲನಾ ಪ್ರಾಧಿಕಾರಗಳು 229 ಮಂದಿಯನ್ನು ಬಿಡುಗಡೆ ಮಾಡಿವೆ. 272 ಮಂದಿ ಕಸ್ಟಡಿಯಲ್ಲಿದ್ದಾರೆ. 2018ರಲ್ಲಿ 697 ಮಂದಿಯನ್ನು ವಿವಿಧ ಕಡೆಗಳಿಂದ ವಶಕ್ಕೆ ಪಡೆಯಲಾಗಿದ್ದು, ನಂತರ 406 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. 291 ಮಂದಿ ಇನ್ನೂ ಕಸ್ಟಡಿಯಲ್ಲಿದ್ದಾರೆ ಎಂದು ರೆಡ್ಡಿ ಹೇಳಿದ್ದಾರೆ.

ಈ ಎರಡು ವರ್ಷಗಳ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ 795 ಮಂದಿಯನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವಶಕ್ಕೆ ಪಡೆಯಲಾಗಿದೆ. 329 ಮಂದಿ ಈಗಲೂ ಕಸ್ಟಡಿಯಲ್ಲಿದ್ದು, ಉಳಿದವರು ಬಿಡುಗಡೆಗೊಂಡಿದ್ದಾರೆ. ಉತ್ತರ ಪ್ರದೇಶದಲ್ಲಿ ವಶಕ್ಕೆ ಪಡೆಯಲಾದ 338 ಮಂದಿಯಲ್ಲಿ 150 ಮಂದಿ ಬಿಡುಗಡೆಯಾಗಿದ್ದಾರೆ. 188 ಮಂದಿ ಬಂಧನದಲ್ಲಿದ್ದಾರೆ ಎಂದು ವಿವರ ನೀಡಿದ್ದಾರೆ.