Sunday, January 19, 2025
ಸುದ್ದಿ

ಜಿಯೋ ಆರಂಭಿಸಿದ ‘ರಹಸ್ಯ’ ಬಿಚ್ಚಿಟ್ಟ ಮುಕೇಶ್ ಅಂಬಾನಿ – ಕಹಳೆ ನ್ಯೂಸ್

ಕಹಳೆ ನ್ಯೂಸ್ : ರಿಲಯೆನ್ಸ್ ಜಿಯೋ ಬಹುಬೇಗ ಭಾರತದ ಟೆಲಿಕಾಂ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಏರ್ಟೆಲ್, ವೊಡಾಫೋನ್ ನಂತಹ ದೊಡ್ಡ ದೊಡ್ಡ ಕಂಪನಿಗಳಿಗೆ ಟಕ್ಕರ್ ಕೊಡುವಂತಹ ಮಾಸ್ಟರ್ ಪ್ಲಾನ್ ನೊಂದಿಗೇ ಜಿಯೋ ಎಂಟ್ರಿ ಕೊಟ್ಟಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಮುಕೇಶ್ ಅಂಬಾನಿಗೆ ಇಂತಹ ಐಡಿಯಾ ಎಲ್ಲಿಂದ ಬಂತಪ್ಪ ಅಂತಾ ಎಲ್ಲರೂ ಆಶ್ಚರ್ಯಪಟ್ಟಿದ್ದರು. ಅಷ್ಟಕ್ಕೂ ಈ ಐಡಿಯಾ ಮುಕೇಶ್ ಅಂಬಾನಿ ಅವರದ್ದಲ್ಲ, ಪುತ್ರಿ ಇಶಾ ಅಂಬಾನಿ ಅವರದ್ದು. ಖುದ್ದು ಮುಕೇಶ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
Mukesh Ambani & Isha Ambani
Mukesh Ambani & Isha Ambani

ಯೇಲ್ ನಲ್ಲಿ ಓದುತ್ತಿದ್ದ ಇಶಾ ರಜೆ ಕಳೆಯಲು ಮುಂಬೈಗೆ ಬಂದಿದ್ರು. ಆಕೆಗೆ ಕೋರ್ಸ್ ವರ್ಕ್ ಕೂಡ ಸಬ್ ಮಿಟ್ ಮಾಡಬೇಕಾಗಿತ್ತು. ಆದ್ರೆ ಮನೆಯಲ್ಲಿ ಇಂಟರ್ನೆಟ್ ಕೈಕೊಟ್ಟಿತ್ತು. ಈ ಸಂದರ್ಭದಲ್ಲಿ ಇಶಾ ಹೊಸದೊಂದು ಐಡಿಯಾವನ್ನು ತಂದೆಯ ಮುಂದಿಟ್ಟಿದ್ದರು.

ಲಂಡನ್ ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮುಕೇಶ್ ಅಂಬಾನಿ ಮಾತನಾಡುವ ವೇಳೆ ಈ ವಿಷಯ ಬಿಚ್ಚಿಟ್ಟಿದ್ದಾರೆ. 2011 ರಲ್ಲೇ ಜಿಯೋ ಪ್ಲಾನ್ ಮಗಳು ಇಶಾಗೆ ಹೊಳೆದಿತ್ತು ಅಂತಾ ಹೇಳಿದ್ದಾರೆ. 2016ರಲ್ಲಿ ಲಾಂಚ್ ಆಗಿದ್ದ ಜಿಯೋ ಉಚಿತ ಕರೆ ಹಾಗೂ ಅನ್ ಲಿಮಿಟೆಡ್ ಫ್ರೀ ಡೇಟಾ ನೀಡುವ ಮೂಲಕ ಗ್ರಾಹಕರನ್ನು ಸೆಳೆದಿತ್ತು.