Sunday, January 19, 2025
ಸಿನಿಮಾ

ಪುರುಷರ ಮರ್ಮಾಂಗ ಹೋಲುವ ಕೇಕ್‌ ಕತ್ತರಿಸಿದ ಬಾಲಿವುಡ್​ ನಟಿ ; ವ್ಯಾಪಕ ಟೀಕೆ – ಕಹಳೆ ನ್ಯೂಸ್

ಮುಂಬೈ, ಸೆ.21 : ಸಿನಿಮಾ ನಟಿಯ ಹುಟ್ಟುಹಬ್ಬವೆಂದರೆ ಅನೇಕ ಶುಭಾಶಯಗಳು ಹರಿದು ಬರುವುದು ಸಾಮಾನ್ಯ. ಆದರೆ, ಇಲ್ಲೊರ್ವ​ ನಟಿ ಬರ್ತಡೇ ಆಚರಿಸಿಕೊಂಡ ರೀತಿ ವ್ಯಾಪಕ ಟೀಕೆಗೆ ಗುರಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಂದಿಯ ಕಿರುತೆರೆ ನಟಿ ನಿಯಾ ಶರ್ಮಾ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ರೀತಿಯು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆಗೆ ಕಾರಣವಾಗಿದೆ. ಆಕೆ ತನ್ನ 30ನೇ ವರ್ಷದ ಹುಟ್ತುಹಬ್ಬವನ್ನು ಪುರುಷರ ಮರ್ಮಾಂಗ ಹೋಲುವ ಕೇಕ್ ಕತ್ತರಿಸುವ ಮೂಲಕ ಆಚರಿಸಿಕೊಂಡಿದ್ದಾರೆ. ಆಕೆಯ ಸ್ನೇಹಿತರು ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಈ ವಿಡಿಯೊ ಮತ್ತು ಫೋಟೊಗಳನ್ನು ಆಕೆ ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಈ ರೀತಿಯ ಕೇಕ್‌ಗಳನ್ನು ಹೆಚ್ಚಾಗಿ ಬ್ಯಾಚುಲರ್‌ ಪಾರ್ಟಿಗೆ ಮಾಡಿಸುವುದು ಸಾಮಾನ್ಯ ಆದರೆ ನಿಯಾ ತನ್ನ ಜನ್ಮದಿನದ ಆಚರಣೆಗೆ ಈ ಮಾದರಿಯ ಕೇಕ್‌ ಮಾಡಿಸಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ನಿಯಾ ಶರ್ಮಾ ‘ಫಿಯರ್‌ ಫ್ಯಾಕ್ಟರ್; ಖತ್ರೋನ್ ಕೆ ಖಿಲಾಡಿ’ ರಿಯಾಲಿಟಿ ಶೋನ ಸೀಸನ್‌ 11ರ ವಿಜೇತೆಯೂ ಹೌದು. ಹಿಂದಿಯ ನಾಗಿನ್ ಧಾರಾವಾಹಿಯ 4ನೇ ಸರಣಿಯಲ್ಲೂ ನಟಿಸಿದ್ದಾರೆ. ಕಳೆದ ವರ್ಷ ನಡೆದ ಹಿಂದಿಯ ಬಿಗ್‌ಬಾಸ್‌ ಸೀಸನ್‌ 13ರಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು.