Saturday, November 16, 2024
ಕ್ರೈಮ್ರಾಜ್ಯಸಿನಿಮಾಸುದ್ದಿ

ಡ್ರಗ್ಸ್ ದಂಧೆ : ರಾಗಿಣಿ, ಸಂಜನಾಗೆ ಮೂರು ದಿನ ಜೈಲೂಟ ಫಿಕ್ಸ್ ; ಸೆ. 24ಕ್ಕೆ ಜಾಮೀನು ಅರ್ಜಿ ಮುಂದೂಡಿಕೆ – ಕಹಳೆ ನ್ಯೂಸ್

ಬೆಂಗಳೂರು: ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಂಜನಾ ಗಲ್ರಾನಿ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಬೆಂಗಳೂರಿನ ಎನ್‍ಡಿಪಿಎಸ್ ವಿಶೇಷ ಕೋರ್ಟ್, ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಿ ಆದೇಶಿಸಿದೆ.

ನಟಿ ಸಂಜನಾ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆಗೆ ಸಿಸಿಬಿ ಕಾಲಾವಕಾಶ ಕೇಳಿತ್ತು. ಸಿಸಿಬಿ ಮನವಿಗೆ ಸಮ್ಮಿಸಿದ ನ್ಯಾಯಾಲಯ ಸಂಜನಾ ಬೇಲ್ ಅರ್ಜಿಯನ್ನ ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ. ಹಾಗಾಗಿ ಸಂಜನಾ ಇನ್ನು ಮೂರು ದಿನ ಪರಪ್ಪನ ಅಗ್ರಹಾರದಲ್ಲಿರಬೇಕಾಗಿದೆ. ರಾಗಿಣಿ ಅರ್ಜಿಯ ವಿಚಾರಣೆ ನಡೆಸಿದ್ದು, ಆದೇಶವನ್ನು ಸೆಪ್ಟೆಂಬರ್ 24ಕ್ಕೆ ನ್ಯಾಯಾಧೀಶರು ಕಾಯ್ದಿರಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

 

ಜಾಹೀರಾತು
ಜಾಹೀರಾತು
ಜಾಹೀರಾತು

ನಟಿ ರಾಗಿಣಿ ವಿರುದ್ಧ ಸಿಸಿಬಿ ಪರ ವಕೀಲರು 12 ಪುಟಗಳ ಆಕ್ಷೇಪಣೆ ಸಲ್ಲಿಸಿ, ಆರೋಪಿಗಳು ಜಾಮೀನು ನೀಡಬಾರದು. ಆರೋಪಿಗಳು ಪ್ರಭಾವಿಗಳಾಗಿದ್ದು, ಪ್ರಕರಣದ ತನಿಖೆಗೆ ಅಡ್ಡಿಯುಂಟಾಗಬಹುದು. ಇವರ ವಿರುದ್ಧ ಗಂಭೀರ ಆರೋಪಗಳಿದ್ದು, ಈ ಹಂತದಲ್ಲಿ ಜಾಮೀನು ಕೊಡುವುದು ಸರಿಯಲ್ಲ ಎಂದು ವಾದ ಮಂಡಿಸಿದ್ದರು.

ರಾಗಿಣಿ ಐದು ವರ್ಷಗಳಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಡ್ರಗ್ ಪಾರ್ಟಿಯಲ್ಲಿ ಭಾಗವಹಿಸುತ್ತಿದ್ದರು. ಡ್ರಗ್ಸ್ ಪೆಡ್ಲರ್ ಗಳ ಗ್ಯಾಂಗ್ ಜೊತೆಯಲ್ಲಿ ರಾಗಿಣಿ ಮೋಜು ಮಸ್ತಿ ನಡೆಸಿದ್ದಾರೆ. ಪಾರ್ಟಿಗಳಿಗೆ ಬಂದವರಿಗೆ ರಾಗಿಣಿ ಡ್ರಗ್ಸ್ ಪೂರೈಕೆ ಮಾಡುತ್ತಿದ್ದರು. ಆಂಧ್ರ ಪ್ರದೇಶ, ಗೋವಾ, ಮುಂಬೈ, ಪಂಜಾಬ್ ಮತ್ತು ವಿದೇಶಗಳಿಂದಲೂ ಡ್ರಗ್ಸ್ ತೆರೆಸಿಕೊಂಡಿದ್ದಾರೆ.

ಡ್ರಗ್ಸ್ ದಂಧೆಯಲ್ಲಿ ರಾಗಿಣಿಯ ಆ್ಯಕ್ಟಿವ್ ಮೆಂಬರ್. ಎಂಡಿಎಂಎ, ಎಲ್ ಎಸ್‍ಡಿ, ಕೋಕೆನ್ ಕೊಡುತ್ತಿದ್ದರು. ಆರೋಪಿಗಳ ಜೊತೆ ನಡೆಸಿರುವ ಸಂಭಾಷಣೆಯ ಡಿಜಿಟಲ್ ಸಾಕ್ಷ್ಯವಿದೆ. ಮೂತ್ರ ಪರೀಕ್ಷೆ ವೇಳೆ ಸಾಕ್ಷ್ಯ ನಾಶಕ್ಕೆ ಮುಂದಾಗಿದ್ದರು ಎಂಬ ಅಂಶಗಳನ್ನು ಉಲ್ಲೇಖಿಸಿ ಸಿಸಿಬಿ ವಕೀಲರು ಜಾಮೀನಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ.

 

ರಾಗಿಣಿ ಪರ ಕೀಲ ಕಲ್ಯಾಣ್ ಕೃಷ್ಣ, ಕಕ್ಷಿದಾರರು ಸಿಸಿಬಿ ಪೊಲೀಸರ ವಿಚಾರಣೆಗೆ ಸಂಪೂರ್ಣ ಸಹಕಾರ ನೀಡಿದ್ದಾರೆ. ಕಕ್ಷಿದಾರರ ಪರ ಯಾವುದೇ ಆರೋಪಗಳಿಲ್ಲ ಮತ್ತು ಸಾಕ್ಷ್ಯ ಇಲ್ಲ. ಈ ಹಂತದಲ್ಲಿ ಕಕ್ಷಿದಾರರಿಗೆ ಜಾಮೀನು ನೀಡಬಹುದು. ಪೊಲೀಸರು ಆತುರದಲ್ಲಿ ತನಿಖೆಯ ದಿಕ್ಕು ತಲುಪಿಸು ಕೆಲಸ ಮಾಡುತ್ತಿದ್ದಾರೆ. ಪ್ರಕರಣ ಒಂದೇ ದಿಕ್ಕಿನಲ್ಲಿ ಸಾಗದೇ, ಬೇರೆ ಬೇರೆ ಆಯಾಮಗಳಲ್ಲಿ ಸಾಗಿ ನಮ್ಮ ಕಕ್ಷಿದಾರರನ್ನು ಸಿಲುಕಿಸುವ ಹುನ್ನಾರ ಮಾಡಲಾಗುತ್ತಿದೆ. ಪೊಲೀಸರು ರಾಗಿಣಿ ಆರೋಪಿ ಎಂದು ಕಲ್ಪನೆ ಮಾಡಿಕೊಂಡಿದ್ದಾರೆ. ಕಲ್ಪನೆಯಲ್ಲಿ ತನಿಖೆ ಸಾಗುತ್ತಿದೆ.

 

ಎಫ್‍ಐಆರ್ ದಾಖಲಾದ ಬಳಿಕ ರಾಗಿಣಿ ಮನೆಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ರಾಗಿಣಿ ಮನೆಯಲ್ಲಿ ಎರಡು ಫೋನ್ ಮತ್ತು ಆರು ಆರ್ಗೆನಿಕ್ಸ್ ಸಿಗರೇಟ್ ವಶಕ್ಕೆ ಪಡೆದುಕೊಂಡಿದ್ದಾರೆ. ಎಫ್‍ಐಆರ್ ಯಾಕೆ ಬಂಧನವಾಗಿದೆ ಎಂಬುದನ್ನ ಉಲ್ಲೇಖಿಸಿಲ್ಲ. ವೈಭವ್ ನಿಂದ ಸ್ವಲ್ಪ ಸ್ವಲ್ಪ ಡ್ರಗ್ಸ್ ಖರೀದಿಸಿದ್ದ ಎಂದು ರವಿಶಂಕರ್ ಹೇಳಿಕೆ ಉಲ್ಲೇಖಿಸಿದ ರಾಗಿಣಿ ಪರ ವಕೀಲರು, ಕಮರ್ಶಿಯಲ್ ಕ್ವಾಂಟೆಟಿ ಕಡಿಮೆ. ಇದು ಅಪರಾಧವಲ್ಲ. ರವಿಶಂಕರ್ ಮತ್ತು ವೈಭವ್ ಜೈನ್ ನಿಂದ ಕಡಿಮೆ ಪ್ರಮಾಣದಲ್ಲಿ ಡ್ರಗ್ಸ್ ಖರೀದಿಸಿದ್ದಾರೆ. ಇದು ಕಮರ್ಶಿಯಲ್ ಕ್ವಾಂಟಿಟಿ ಕಡಿಮೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.

 

ಡ್ರಗ್ಸ್ ಪ್ರಕರಣದಲ್ಲಿ ಇಬ್ಬರೂ ನಟಿಯರು ನ್ಯಾಯಾಂಗ ಬಂಧನದಡಿ ಪರಪ್ಪನ ಅಗ್ರಹಾರದಲ್ಲಿದ್ದಾರೆ. ಶನಿವಾರ ವಿಚಾರಣೆ ನಡೆದಾಗ ಸಿಸಿಬಿ ಪರ ವಕೀಲರು, ಎಲ್ಲ ಅರ್ಜಿಗಳು ಒಂದಕ್ಕೊಂದು ಲಿಂಕ್ ಹೊಂದಿವೆ. ಎಲ್ಲ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿ ವಿರುದ್ಧ ಆಕ್ಷೇಪಣೆ ಸಲ್ಲಿಸಲು ಸೋಮವಾರದವರೆಗೂ ಸಮಯ ಕೇಳಿದ್ದರು. ಇಂದು ಜಾಮೀನು ಅರ್ಜಿ ವಿಚಾರಣೆ ನ್ಯಾಯಾಲಯದ ಮುಂದೆ ಬಂದಿತ್ತು. ಶನಿವಾರ ಅರ್ಜಿದಾರರ ಪರ ವಕೀಲರು, ಸಿಸಿಬಿ ವಕೀಲರು ಕಾಲಹರಣ ಮಾಡುತ್ತಿದ್ದಾರೆ ಎಂದು ವಾದ ಮಂಡಿಸಿದ್ದರು.

 

 

ರಾಗಿಣಿ ಡ್ರಗ್ಸ್ ಕನ್ಸೂಮರ್ ಅಲ್ಲವೇ ಅಲ್ಲ. ಸಿಸಿಬಿ ಪೊಲೀಸರು ಪ್ಲಾನ್ ಮಾಡಿಕೊಂಡ ರೀತಿಯಲ್ಲಿ ತನಿಖೆ ನಡೆಯುತ್ತಿದೆ. ರಾಗಿಣಿ ಸಂಪೂರ್ಣ ಅಮಾಯಕರು. ಉದ್ದೇಶಪೂರ್ವಕವಾಗಿ ರಾಗಿಣಿಯವರನ್ನು ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ. ರಾಗಿಣಿ ಸಂಪೂರ್ಣ ಅಮಾಯಕರು ಎಂದು ಹೇಳಿ ಕಲ್ಯಾಣ್ ಕೃಷ್ಣ ವಾದ ಅಂತ್ಯ ಮಾಡಿದರು.