Sunday, January 19, 2025
ಹೆಚ್ಚಿನ ಸುದ್ದಿ

ಭಾರತ-ಚೀನಾ ಗಡಿ ಪ್ರದೇಶಕ್ಕೆ ಬರಲು ಕಣ್ಣೀರಿಡುತ್ತಾ ಬಸ್ ಹತ್ತಿದ ಚೀನಾ ಯೋಧರು-ವಿಡಿಯೋ ವೈರಲ್! – ಕಹಳೆ ನ್ಯೂಸ್

ನವದೆಹಲಿ: ಗಡಿಯಲ್ಲಿ ಚೀನಾದ ಕುತಂತ್ರಗಳಿಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಿದೆ. ಈ ನಡುವೆ ಭಾರತೀಯ ಯೋಧರನ್ನು ಕಂಡರೆ ಚೀನಾ ಯೋಧರು ಬೆಚ್ಚಿ ಬೀಳುತ್ತಿದ್ದಾರಾ? ಎಂಬ ಪ್ರಶ್ನೆ ಉದ್ಭವಿಸುವಂತಹ ವಿಡಿಯೋ ಒಂದು ಸಾಮಾಜಕ ಜಾಲತಾಣದಲ್ಲಿ ವೈರಲ್ ಆಗತೊಡಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತ್-ಚೀನಾ ಗಡಿಯಲ್ಲಿ ಉದ್ವಿಗ್ನತೆ ಹೆಚ್ಚಾದಂತೆಲ್ಲಾ ಚೀನಾ ತನ್ನ ಸೇನಾ ಸಾಮರ್ಥ್ಯವನ್ನು, ಸಿಬ್ಬಂದಿಗಳನ್ನು ಹೆಚ್ಚಾಗಿ ನಿಯೋಜಿಸುವ ಕಾರ್ಯದಲ್ಲಿ ತೊಡಗಿದೆ. ಇದಕ್ಕಾಗಿ ಬೇರೆ ಪ್ರಾಂತ್ಯಗಳಿಂದ ಚೀನಾ ಸಿಬ್ಬಂದಿಗಳನ್ನು ಭಾರತ-ಚೀನಾ ಗಡಿಗೆ ನಿಯೋಜನೆ ಮಾಡುವುದಕ್ಕಾಗಿ ಹೊಸ ಯೋಧರನ್ನು ಕಳಿಸಲಾಗಿದ್ದು, ಈ ಯೋಧರು ತಾವು ಭಾರತ-ಚೀನಾ ಗಡಿಗೆ ತೆರಳುತ್ತಿದ್ದೆವೆ ಎಂಬುದನ್ನು ಅರಿತು, ಕಣ್ಣೀರು ಹಾಕುತ್ತಾ ಬಸ್ ಹತ್ತಿರುವ ವಿಡಿಯೋ ಬಹಿರಂಗವಾಗಿದೆ.
ಸೆ.20 ರಂದು ಪಾಕ್ ನ ಕಾಮಿಡಿಯನ್ ಝಿದ್ ಹಮೀದ್ ಈ ವಿಡಿಯೋವನ್ನು ಫೇಸ್ ಬುಕ್ ನಲ್ಲಿ ಹಾಕಿದ್ದು, ಪಿಎಲ್‌ಎ ಗೆ ನೇಮಕವಾದ, ಲಡಾಖ್ ಬಳಿ ಇರುವ ಗಡಿ ಪ್ರದೇಶಕ್ಕೆ ಹೋಗುತ್ತಿರುವಾಗ ಬಸ್ ನಲ್ಲಿ ಕುಳಿತು ಕಣ್ಣೀರು ಹಾಕುತ್ತಿರುವ ದೃಶ್ಯಗಳು ಇದರಲ್ಲಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚೀನಾದ ಸೇನಾ ಹಾಡು ಗ್ರೀನ್ ಫ್ಲವರ್ಸ್ ಇನ್ ದಿ ಆರ್ಮಿ ಎಂಬ ಹಾಡನ್ನು ಕಷ್ಟಪಟ್ಟು ಹಾಡುತ್ತಿರುವುದು ಈ ವಿಡಿಯೋದಲ್ಲಿ ಕಂಡುಬಂದಿದೆ. ಮೂಲತಃ ಈ ವಿಡಿಯೋ ಫುಯಾಂಗ್ ಸಿಟಿ ವೀಕ್ಲಿಯ ವಿಚಾಟ್ ಪೇಜ್ ನಲ್ಲಿ ಪ್ರಕಟಗೊಂಡಿತ್ತು. ಆದರೆ ಅದನ್ನು ಈಗ ತೆಗೆದುಹಾಕಲಾಗಿದೆ.

ಚೀನಾದ ಅನ್ಹುಯ್ ಪ್ರಾಂತ್ಯದ ಫುಯಾಂಕಗ್ ಸಿಟಿಯ ಯಿಂಗ್ಝೌ ಜಿಲ್ಲೆಯಿಂದ 10 ಹೊಸ ಟ್ರೂಪ್ ಗಳನ್ನು ಭಾರತ-ಚೀನಾ ಗಡಿ ಪ್ರದೇಶಕ್ಕೆ ವರ್ಗಾವಣೆ ಮಾಡಲಾಗಿತ್ತು. ಹೊಸದಾಗಿ ನೇಮಕವಾಗಿರುವ ಎಲ್ಲರೂ ಕಾಲೇಜು ವಿದ್ಯಾರ್ಥಿಗಳಾಗಿದ್ದು ಈ ಪೈಕಿ 5 ಜನರು ಸ್ವ-ಇಚ್ಛೆಯಿಂದ ಟಿಬೆಟ್ ನಲ್ಲಿ ಕೆಲಸ ಮಾಡಲು ಮುಂದಾಗಿದ್ದರೆ ವಿಡಿಯೋವನ್ನು ಫುಯಾಂಗ್ ರೈಲ್ವೆ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ ಎಂದು ತೈವಾನ್ ನ್ಯೂಸ್ ವರದಿ ಪ್ರಕಟಿಸಿದೆ. ಈ ವರದಿಯ ಪ್ರಕಾರ ಚೀನಾದ ಈ ಹೊಸ ಸಿಬ್ಬಂದಿಗಳಿಗೆ ಅವರು ಚೀನಾ-ಭಾರತ ಗಡಿಯಲ್ಲಿ ಅವರು ಮುನ್ನೆಲೆಯಲ್ಲಿರಲಿದ್ದಾರೆ ಎಂಬುದನ್ನು ತಿಳಿಸಲಾಗಿತ್ತು.