Sunday, January 19, 2025
ಹೆಚ್ಚಿನ ಸುದ್ದಿ

ಕೊರೊನಾ ಲಸಿಕೆ ನಿರೀಕ್ಷೆಯಲ್ಲಿದ್ದವರಿಗೆ ‘ಬಿಗ್ ಶಾಕ್’- ಕಹಳೆ ನ್ಯೂಸ್

ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನ ಜಗತ್ತಿನಾದ್ಯಂತ ನಡೆಯುತ್ತಿದೆ. ಆದ್ರೆ ಡಬ್ಲ್ಯು ಎಚ್ ಒ ಮುಖ್ಯಸ್ಥರು ನಿರಾಶೆ ವಿಷ್ಯವನ್ನು ಹೇಳಿದ್ದಾರೆ. ಕೊರೊನಾ ಲಸಿಕೆ ಕಂಡು ಹಿಡಿದ್ರೂ ಅದು ಕೊರೊನಾ ನಿರ್ಮೂಲನೆ ಮಾಡಲು ಯಶಸ್ವಿಯಾಗುತ್ತೆ ಎಂದು ಸ್ವಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುದ್ದಿಗೋಷ್ಠಿ ನಡೆಸಿದ ಅವರು ಪ್ರಪಂಚದಾದ್ಯಂತ ಲಸಿಕೆಗಳ ತಯಾರಿ ನಡೆಯುತ್ತಿದೆ. ಆದ್ರೆ ಎಲ್ಲ ಲಸಿಕೆಗಳು ಕೊರೊನಾ ಹೊಡೆದೋಡಿಸುವಲ್ಲಿ ಯಶಸ್ವಿಯಾಗುತ್ತೆ ಎಂಬುದು ಕಷ್ಟ. ಸುರಕ್ಷಿತ ಹಾಗೂ ಪರಿಣಾಮಕಾರಿ ಲಸಿಕೆ ಸಿಗಬೇಕೆಂದು ಅವರು ಹೇಳಿದ್ದಾರೆ. ಕೋವಿಡ್ -19 ಗಾಗಿ ಸುಮಾರು 200 ಲಸಿಕೆಗಳು ಪ್ರಸ್ತುತ ಕ್ಲಿನಿಕಲ್ ಮತ್ತು ಪ್ರಿ-ಕ್ಲಿನಿಕಲ್ ಪರೀಕ್ಷೆಯಲ್ಲಿವೆ. ಲಸಿಕೆ ತಯಾರಿಕೆಯ ಇತಿಹಾಸ ನೋಡಿದ್ರೆ, ಕೆಲವು ಲಸಿಕೆಗಳು ಯಶಸ್ವಿಯಾಗಿದೆ ಮತ್ತು ಕೆಲವು ವಿಫಲಗೊಳ್ಳುತ್ತವೆ ಎಂದು ಅವರು ಹೇಳಿದ್ದಾರೆ.
ಕೋವಿಡ್ -19 ಚಿಕಿತ್ಸೆಗಾಗಿ ಲಸಿಕೆ ಅವಶ್ಯಕ. ಆದರೆ ಸ್ಪರ್ಧೆಯಾಗಬಾರದು. ಎಲ್ಲರ ಸಹಯೋಗದೊಂದಿಗೆ ಲಸಿಕೆ ಕಂಡು ಹಿಡಿಯಬೇಕು. ಲಸಿಕೆ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸಲು, ಜೀವಗಳನ್ನು ಉಳಿಸಲು ಮತ್ತು ಆರ್ಥಿಕ ಚೇತರಿಕೆಗೆ ಸಹಾಯ ಮಾಡುತ್ತದೆ ಎಂದವರು ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು