Sunday, January 19, 2025
ಹೆಚ್ಚಿನ ಸುದ್ದಿ

BIG NEWS : ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣ : ಸಿಸಿಬಿಯಿಂದ ‘ನಿರೂಪಕಿ ಅನುಶ್ರೀ’ಗೂ ನೋಟಿಸ್-ಕಹಳೆ ನ್ಯೂಸ್

ಮಂಗಳೂರು : ಡ್ಯಾನ್ಸರ್ ಕಿಶೋರ್ ಶೆಟ್ಟಿ ಆಪ್ತ ತರುಣ್ ನೀಡಿದಂತ ಮಾಹಿತಿಯನ್ನು ಆಧರಿಸಿ, ಮಂಗಳೂರಿನ ಸಿಸಿಬಿ ಪೊಲೀಸರು ಖ್ಯಾತ ನಿರೂಪಕಿ ಅನುಶ್ರೀಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸ್ಯಾಂಡಲ್ ವುಡ್ ಡ್ರಗ್ಸ್ ಪ್ರಕರಣದಲ್ಲಿ ಮಂಗಳೂರಿನಲ್ಲಿ ಸಿಸಿಬಿ ಪೊಲೀಸರು ಡ್ಯಾನ್ಸರ್ ಕಿಶೋರ್ ಶೆಟ್ಟಿ ಆಪ್ತ ತರುಣ್ ಅವರನ್ನು ಬಂಧಿಸಿದ್ದರು. ಇಂತಹ ತರುಣ್ ಅನ್ನು ತೀವ್ರ ವಿಚಾರಣೆ ನಡೆಸಿದ್ದಂತ ಸಿಸಿಬಿ ಪೊಲೀಸರಿಗೆ ನಿರೂಪಕಿ ಅನುಶ್ರೀ ಅವರ ಹೆಸರನ್ನು ಬಾಯ್ಬಿಟ್ಟಿದ್ದ ಎನ್ನಲಾಗಿದೆ. ತರುಣ್ ನೀಡಿದಂತ ಮಾಹಿತಿಯನ್ನು ಆಧರಿಸಿ, ವಿಚಾರಣೆಗೆ ಹಾಜರಾಗುವಂತೆ ಖ್ಯಾತ ನಿರೂಪಕಿ ಅನುಶ್ರೀಗೂ ಮಂಗಳೂರಿನ ಸಿಸಿಬಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ವಾಟ್ಸ್ ಅಪ್ ಮೂಲಕ ನೋಟಿಸ್ ಜಾರಿ ಮಾಡಿದ್ದಾರೆ. ಈ ಮೂಲಕ ಖ್ಯಾತ ನಿರೂಪಕಿ ಅನುಶ್ರೀಗೂ ಸಂಕಷ್ಟ ಎದುರಾದಂತೆ ಆಗಿದೆ. ಆದ್ರೇ ಈ ಕುರಿತಂತೆ ಪ್ರತಿಕ್ರಿಯಿಸಿರುವ ನಿರೂಪಕಿ ಅನುಶ್ರೀ, ನನಗೆ ಸಿಸಿಬಿಯಿಂದ ಯಾವುದೇ ನೋಟಿಸ್ ಬಂದಿಲ್ಲ. ನೋಟಿಸ್ ಬಂದಿದ್ದರೇ ನಾನೇ ಹೇಳುತ್ತಿದೆ. ನೋಟಿಸ್ ನೀಡಿದ್ರೆ ವಿಚಾರಣೆಗೆ ಹಾಜರಾಗುವುದಾಗಿ ಸ್ಪಷ್ಟ ಪಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು