Sunday, November 17, 2024
ಬಂಟ್ವಾಳಸುದ್ದಿ

ಮಾದಕ ವಸ್ತು ಬಳಕೆ ವಿರುದ್ಧ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಯಾಗಲಿ ಜನಜಾಗೃತಿ ವೇದಿಕೆಯಿಂದ ಒತ್ತಾಯ-ಕಹಳೆ ನ್ಯೂಸ್

ಬಂಟ್ವಾಳ: ಮಾದಕ ವಸ್ತುಗಳ ಬಳಕೆ ತಪ್ಪಿಸಲು ಡ್ರಗ್ಸ್ ದುರ್ಬಳಕೆ ವಿರುದ್ಧ ಇರುವ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಸರ್ಕಾರ ಜಾರಿಗೆ ತರುವಂತೆ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಒತ್ತಾಯಿಸಿದೆ.


ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾ ಮಟ್ಟದ ಪದಾಧಿಕಾರಿಗಳ ಸಭೆ ನಡೆಯಿತು. ಈ ವೇಳೆ ಜನಜಾಗೃತಿ ವೇದಿಕೆ ನಿರ್ದೇಶಕ ಪಾಯ್ಸ್ ಅವರು ಮಾತನಾಡಿ, ದುಶ್ಚಟ ಮುಕ್ತ ರಾಜ್ಯ ಘೋಷಣೆಯಡಿ ಈಗ ನಡೆಯುತ್ತಿರುವ ತನಿಖೆ ನಿಷ್ಪಕ್ಷಪಾತವಾಗಿಸಬೇಕು. ಮಾದಕ ದ್ರವ್ಯ ಜಾಲ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದ್ದು, ಅದಕ್ಕೆ ಅಂತರ್ಜಾಲ ಬಳಕೆಯಾಗುತ್ತಿದೆ. ಸಮಾಜಬಾಹಿರ ಕೃತ್ಯವೆಸಗುವವರನ್ನು ನಿಯಂತ್ರಿಸಲು ಇರುವ ಕಾಯ್ದೆಗಳ ಕಟ್ಟುನಿಟ್ಟು ಜಾರಿಯಾಗಬೇಕು ಎಂದು ಒತ್ತಾಯಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಣ್ಣುಮಕ್ಕಳ ಸಹಿತ ಯುವಜನತೆ, ಸೆಲೆಬ್ರಿಟಿಗಳು ಇದರ ಪಿಡುಗಿನೊಳಗೆ ಸಿಲುಕಿಕೊಳ್ಳುತ್ತಿರುವುದು ಆತಂಕಕಾರಿ. ಮೆಡಿಕಲ್ ಶಾಪ್‍ನವರು ಕಾಯ್ದೆ ಪ್ರಕಾರ ಔಷಧ ವಿತರಿಸುವಂತೆ ಮಾಡಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದರು. ಸಮಾಜಬಾಹಿರ ಕೃತ್ಯವೆಸಗುವವರನ್ನು ನಿಯಂತ್ರಿಸಲು ಇರುವ ಕಾಯ್ದೆಗಳ ಕಟ್ಟುನಿಟ್ಟು ಜಾರಿಯಾಗಬೇಕು ಎಂದು ಒತ್ತಾಯಿಸಿರುವ ಜನಜಾಗೃತಿ ವೇದಿಕೆ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯ್ಸ್, ಈ ಕುರಿತು ಸರ್ಕಾರದ ಬಳಿ ನಿಯೋಗವೊಂದು ತೆರಳಲಿದೆ ಎಂದರು.ಸಭೆಯಲ್ಲಿ ಜನಜಾಗೃತಿ ವೇದಿಕೆ ಅಧ್ಯಕ್ಷ ಎನ್ ಎ ರಾಮಚಂದ್ರ, ಕಾರ್ಯದರ್ಶಿ ಸತೀಶ್ ಶೆಟ್ಟಿ, ಪ್ರಮುಖರಾದ ಎ ರುಕ್ಮಯ ಪೂಜಾರಿ, ಮಹಾಬಲ ಚೌಟ, ವಿಶ್ವನಾಥ ರೈ ಕಳಂಜ, ಅಶ್ವತ್ಥ್ ಪೂಜಾರಿ, ಶಾರದಾ ರೈ, ಮಹಾಬಲ ರೈ ಉಪಸ್ಥಿತರಿದ್ದರು. ಬಂಟ್ವಾಳ ಯೋಜನಾಧಿಕಾರಿ ಜಯಾನಂದ ಕಾರ್ಯಕ್ರಮ ನಿರೂಪಿಸಿದರು. ಬೆಳ್ತಂಗಡಿ ಯೋಜನಾಧಿಕಾರಿ ಜಯಕರ್ ಸ್ವಾಗತಿಸಿದರು. ವೇದಿಕೆಯಲ್ಲಿ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ರಾಮಚಂದ್ರ ಎನ್, ಮಾಜಿ ಶಾಸಕ ರುಕ್ಮಯ ಪೂಜಾರಿ, ಕಾಸರಗೋಡು ಜಿಲ್ಲಾಧ್ಯಕ್ಷ ಅಶ್ವತ್ ಪೂಜಾರಿ ಪೈವಳಿಕೆ, ಬೆಳ್ತಂಗಡಿ ಅಧ್ಯಕ್ಷೆ ಶಾರದ, ಸುಳ್ಯ ವಿಶ್ವನಾಥ ರೈ ಕಳೆಂಜ, ಮಂಗಳೂರು ಮಹಾಬಲ ಚೌಟ, ಪುತ್ತೂರು ಮಹಾಬಲ ರೈ, ಜಿಲ್ಲಾ ನಿರ್ದೇಶಕ ಸತೀಶ್ ಶೆಟ್ಟಿ, ಯೋಜನಾಧಿಕಾರಿಗಳಾದ ಜಯಾನಂದ ಪಿ., ಜಯಕರ ಶೆಟ್ಟಿ ಉಪಸ್ಥಿತಿದ್ದರು.