
ಬೆಳ್ತಂಗಡಿ: ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿ ಅಪ್ರಾಪ್ತ ಬಾಳಕಿಯೊಬ್ಬಳು ಗರ್ಭಧರಿಸಿದ ಘಟನೆ ಬೆಳ್ತಂಗಡಿ ತಾಲೂಕಿನ ಕೊಕ್ರಾಡಿಯಲ್ಲಿ ನಡೆದಿದೆ. ಬಾಲಕಿಯ ಸ್ವಂತ ಅಣ್ಣ ಹಾಗೂ ಹತ್ತಿರದ ಸಂಬಂಧಿಯಿಂದ 1 ವರ್ಷ ನಿರಂತರವಾಗಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿದ್ದರೂ ಈಕೆ ಮಾತ್ರ ಮನೆಯವರ ಜೊತೆ ಹೇಳಿಕೊಂಡಿರಲಿಲ್ಲ. ಆದ್ರೆ ಬಾಲಕಿಯ ದೈಹಿಕ ಬದಲಾವಣೆ ಕಂಡು ತಾಯಿ ಹಾಗೂ ಅಕ್ಕ ಸಮೀಪದ ನಾರಾವಿ ಸರ್ಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿದಾಗ ಗರ್ಭಧರಿಸಿರುವುದಾಗಿ ತಿಳಿದು ಬಂದಿದೆ. ಪ್ರಕರಣ ಆರೋಪಿಗಳನ್ನು ವೇಣೂರು ಪೊಲೀಸರು ಬಂಧಿಸಿದ್ದಾರೆ.