Recent Posts

Sunday, January 19, 2025
ಸುದ್ದಿ

ಕರಿಂಜೆ ಸ್ವಾಮೀಜಿಯವರನ್ನು ನಿಂದಿಸಿದ ಅಭಯಚಂದ್ರ ವಿರುದ್ಧ ತೊಡೆ ತಟ್ಟಿದ ಬಜರಂಗದಳ ; ತಾಕತ್ತಿದ್ದರೆ ಹಿಂದೂಗಳ ಓಟು ಬೇಡ ಎಂದು ಹೇಳಿ – ಮುರಳಿಕೃಷ್ಣ ಹಸಂತ್ತಡ್ಕ

ಪುತ್ತೂರು : ಕರ್ನಾಟಕ ರಾಜ್ಯ ಸರಕಾರದ ಮಾಜಿ ಸಚಿವ ಹಾಗೂ ಕಾಂಗ್ರೇಸ್ಸಿನ ಶಾಸಕ ಅಭಯಚಂದ್ರ ಜೈನ್ ಅವರು ಇ ನಾಡಿನ ಎಲ್ಲರೂ ಭಕ್ತಿ ಭಾವದಿಂದ ಕಾಣುತ್ತಿರುವ ಶ್ರೀ ಶ್ರೀ ಕರಿಂಜೆ ಮುಕ್ತಾನಂದ ಸ್ವಾಮಿಜಿಯವರನ್ನು ಕೆಟ್ಟ ಶಬ್ದಗಳಿಂದ ಮಾತಾನಾಡಿದ್ದು ಹಾಗೂ ದುರಂಹಕಾರದ ಪರಮಾವಧಿಯನ್ನು ತಲುಪಿದ್ದನ್ನು ವಿಶ್ವ ಹಿಂದು ಪರಿಷದ್ ಬಜರಂಗದಳ ಅತ್ಯಂತ ಉಗ್ರವಾಗಿ ಖಂಡಿಸುತ್ತದೆ ಎಂದು ಬಜರಂಗದಳದ ಪ್ರಾಂತ ಸಹ ಸಂಚಾಲಕರಾದ ಮುರಳೀಕ್ರಷ್ಣ ಹಸಂತ್ತಡ್ಕ ಹೇಳಿದ್ದಾರೆ.

Murali Krishna Hasanthadka

ಕರ್ನಾಟಕ ರಾಜ್ಯದಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆ ಹಿಂದೂಗಳ ಭಾವನೆಗಳ ಮೇಲೆ ಅಘಾತಕಾರಿ ಬೆಳವಣಿಗೆಯಾಗುತ್ತಿದೆ ಹಾಗೂ ಮಂಗಳೂರಿನ ಕಾರ್ಪೂರೇಟರ್ ಶ್ರೀಮತಿ ಪ್ರತಿಭಾ ಕುಲಾಯಿ ಇವರ ಮೇಲೆ ಅವಮಾನ ಮಾಡುವ ಕಾರ್ಯವನ್ನು ಕಾಂಗ್ರೇಸ್ಸಿಗರು ಮಾಡುತ್ತಿದ್ದಾರೆ.
ಸುಳ್ಯದ ವಿದ್ಯಾರ್ಥಿನಿ ಅಕ್ಷತಾಳ ಕೂಲೆ ಪ್ರಕರಣ ಗಳಂತಹ ಘಟನೆಗಳು ನಿರಂತರವಾಗಿ ಇ ರಾಜ್ಯದಲ್ಲಿ ಸಂಭವಿಸುತ್ತಿದೆ. ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ.ಈ ಎಲ್ಲಾ ಘಟನೆಗಳನ್ನು ಹಿಂದು ಸಮಾಜ ಗಮನಿಸುತ್ತಿದೆಯೆಂದು ರಾಜ್ಯದಲ್ಲಿ ಅಡಳಿತ ಇರುವಂತಹ ವ್ಯಕ್ತಿಗಳು ತಿಳಿದುಕೂಳ್ಳುವುದು ಉತ್ತಮ. ಇದನ್ನು ಮುಂದುವರಿಸುವುದಾದರೆ ಮುಂಬರುವ ಚುನಾವಣೆಯಲ್ಲಿ ತಾಕತ್ತಿದ್ದರೆ ಹಿಂದೂಗಳ ಬೆಂಬಲವಿಲ್ಲದೆ ರಾಜ್ಯದಲ್ಲಿ ಚುನಾವಣೆಯನ್ನು ಎದುರಿಸುತ್ತೇವೆಂದು ಬಹಿರಂಗವಾಗಿ ಹೇಳಿಕೆ ಕೂಡಲಿ ಎಂದು ಬಜರಂಗದಳ ದ ಪ್ರಾಂತ ಸಹ ಸಂಚಾಲಕರಾದ ಮುರಳೀಕ್ರಷ್ಣ ಹಸಂತ್ತಡ್ಕ ಹಾಗೂ ಬಜರಂಗದಳದ ಪುತ್ತೂರು ಜಿಲ್ಲಾ ಸಂಚಾಲಕರಾದ ‌ಶ್ರೀಧರ್ ತೆಂಕಿಲ ಅವರು ಸವಾಲನ್ನು ಎಸೆದಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಲ್ಲದೆ, ದಿನಾಂಕ 19-3-2018 ರಂದು ಮೂಡಬಿದಿರೆಯಲ್ಲಿ ನಡೆಯುವ ಪ್ರತಿಭಟನಾ ಸಭೆ ಗೆ ಪುತ್ತೂರು ಜಿಲ್ಲೆಯಿಂದ ನೂರಾರು ಕಾರ್ಯಕರ್ತರು ಭಾಗವಹಿಸುತ್ತಾರೆ ಎಂದು ತಿಳಿಸಿರುತ್ತಾರೆ.

ವರದಿ : ಕಹಳೆ ನ್ಯೂಸ್