ಪುತ್ತೂರು : ನೂತನ ಶಿಕ್ಷಣ ನೀತಿಯಲ್ಲಿ ವಿದ್ಯಾರ್ಥಿಗಳಿಗೆ ಕಲಿಯಲು ಬೇಕಾದ ಪರಿಕರಗಳನ್ನೊದಗಿಸುವುದು, ಬೇಕಾದ ವಾತಾವರಣವನ್ನು ಕಲ್ಪಿಸುವುದರ ಜೊತೆಗೆ ತಾವೇ ಕಲಿಯಲು ಅನುವು ಮಾಡಿಕೊಡಬೇಕಾದದ್ದು ಶಿಕ್ಷಕನ ಕೆಲಸ ಎಂದು ಅಂಬಿಕಾ ವಿದ್ಯಾಲಯದಲ್ಲಿ ನಡೆದ ಕಾರ್ಯಾಗಾರವೊಂದರಲ್ಲಿ ಪಾಂಡುರಂಗ ಅವರು ಹೇಳಿದ್ದಾರೆ.
ಮುಂದಿನ ದಿನದಲ್ಲಿ ಕಾರ್ಯಗತಗೊಳ್ಳುವ ನೂತನ ಶಿಕ್ಷಣ ನೀತಿಯ ಕುರಿತಾಗಿ ನಡೆದ ಮಾಹಿತಿ ಕಾರ್ಯಗಾರದಲ್ಲಿ ಪಾಂಡುರಂಗ, ಶಿಕ್ಷಕ ಶ್ರೀನಿವಾಸ ಹಾಗೂ ವಿಜಯಕುಮಾರ್ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ರು. ಈ ಕಾರ್ಯಾಗಾರದಲ್ಲಿ ಸಾಂದೀಪನೀ ವಿದ್ಯಾಸಂಸ್ಥೆಯ ಶಿಕ್ಷಕರೂ, ಸಂಸ್ಥೆಯ ಸಂಚಾಲಕರಾದ ಸುಬ್ರಹ್ಮಣ್ಯ ನಟ್ಟೋಜ, ನಿರ್ದೇಶಕರಾದ ಸುರೇಶ್ ಶೆಟ್ಟಿ, ಪ್ರಾಚಾರ್ಯರಾದ ರಾಜಶ್ರೀ ಎಸ್ ನಟ್ಟೋಜ, ಅಂಬಿಕಾ ವಸತಿಯುತ ಕಾಲೇಜಿನ ಪ್ರಾಚಾರ್ಯ ಶಂಕರನಾರಾಯಣ ಭಟ್, ಬಾಲ ವಿದ್ಯಾಲಯದ ಪ್ರಾಚಾರ್ಯರಾದ ಸುಜನಿ ಬೋರ್ಕರ್ ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಸತೀಶ್ ಕಾರ್ಯಕ್ರಮ ನಿರೂಪಿಸಿದರು.