Sunday, January 19, 2025
ಹೆಚ್ಚಿನ ಸುದ್ದಿ

ನಾಳೆ ಕರ್ನಾಟಕ ಬಂದ್ : ಏನಿರುತ್ತೆ? ಏನಿರಲ್ಲ? ಇಲ್ಲಿದೆ ನೋಡಿ ಫುಲ್ ಡಿಟೇಲ್ಸ್- ಕಹಳೆ ನ್ಯೂಸ್

ಬೆಂಗಳೂರು : ಕೇಂದ್ರ ಸರ್ಕಾರದ ನಡೆ ವಿರೋಧಿಸಿ ರೈತಪರ ಸಂಘಟನೆಯಿಂದ ಸೆ . 28 ರ ಸೋಮವಾರ ಅಂದರೆ ನಾಳೆ ರೈತ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿವೆ.

ಎಪಿಎಂಸಿ ಹಾಗೂ ಭೂಸುಧಾರಣಾ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತಪರ ಸಂಘಟನೆಗಳು ಹಾಗೂ ಕಾರ್ಮಿಕ ಸಂಘಟನೆಗಳಿಂದ ನಾಳೆ ರಾಜ್ಯ ಬಂದ್ ಗೆ ಕರೆ ನೀಡಲಾಗಿದೆ. ನಾಳೆಯ ಕರ್ನಾಟಕ ಬಂದ್ ಗೆ 40 ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದು, ಓಲಾ, ಉಬರ್, ಟ್ಯಾಕ್ಸಿಗಳು ನಾಳೆ ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಸಂಚರಿಸುವುದಿಲ್ಲ.
ಹಾಗಾದ್ರೆ ನಾಳೆಯ ಕರ್ನಾಟಕ ಬಂದ್ ವೇಳೆ ಏನಿರುತ್ತೆ? ಏನಿರಲ್ಲ ? ಇಲ್ಲಿದೆ ನೋಡಿ ಮಾಹಿತಿ

ಜಾಹೀರಾತು
ಜಾಹೀರಾತು
ಜಾಹೀರಾತು

ಏನಿರುತ್ತೆ?

ಜಾಹೀರಾತು
ಜಾಹೀರಾತು
ಜಾಹೀರಾತು

ನಾಳೆಯ ಕರ್ನಾಟಕ ಬಂದ್ ವೇಳೆ ಹಾಲು, ಹಣ್ಣು, ತರಕಾರಿ, ಮೆಡಿಕಲ್ ಸ್ಟೋರ್ಸ್, ಆಸ್ಪತ್ರೆ ಸೇವೆಗಳು ಇರಲಿವೆ. ಹೋಟೆಲ್ ಗಳು, ಬಾರ್ ಮತ್ತು ರೆಸ್ಟೋರೆಂಟ್ ಗಳು, ಎಂದಿನಂತೆ ಓಪನ್ ಇರಲಿದ್ದು, ಕೆಎಸ್‌ಆರ್ ಟಿಸಿ, ಬಿಎಂಟಿಸಿ, ಮೆಟ್ರೋ, ರೈಲು, ವಿಮಾನ ಸಂಚಾರ ಇರಲಿದೆ.

ಏನಿರಲ್ಲ?

ಓಲಾ-ಉಬರ್, ಆಟೋ-ಟ್ಯಾಕ್ಸಿ ಸಂಘಗಳು ಬಂದ್ ಗೆ ಬೆಂಬಲ ನೀಡಿದ್ದು, ಈ ಸೇವೆಗಳು ಇರುವುದಿಲ್ಲ. ಖಾಸಗಿ ಬಸ್, ಲಾರಿ ಸೇವೆಗಳು ಬಂದ್ ಇರಲಿವೆ ಎನ್ನಲಾಗಿದೆ.

ರೈತರ ಹೋರಾಟಕ್ಕೆ ಬೀದಿ ಬದಿ ವ್ಯಾಪಾರಿಗಳು ಬೆಂಬಲ ನೀಡಿದ್ದು, ಹೀಗಾಗಿ ನಾಳೆ ಮಾರ್ಕೆಟ್ ಬಂದ್ ಆಗುವ ಸಾಧ್ಯತೆ ಇದೆ.