Recent Posts

Monday, November 18, 2024
ಪುತ್ತೂರು

ಇಂದು ಸಂಜೆ ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ನರಕಾಸುರ ಮೋಕ್ಷ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ-ಕಹಳೆ ನ್ಯೂಸ್

ಪುತ್ತೂರು: ಕೊರೋನ ವೈರಸ್‍ನ್ನು ತಡೆಗಟ್ಟುವ ನಿಟ್ಟಿನಲ್ಲಿ ಶಾಲಾ , ಕಾಲೇಜುಗಳು ಆರಂಭಗೊಳ್ಳದೆ ಶಿಕ್ಷಣವನ್ನು ಆನ್‍ಲೈನ್ ಮೂಲಕ ಕಲಿಯುವ ಅರ್ನಿವಾಯತೆ ಸೃಷ್ಠಿಯಾಗಿದೆ. ಆದ್ರೆ ಈ ಸಾಂಸ್ಕ0ತಿಕ ರಸದೌತಣಕ್ಕೆ ಕಡಿವಾಣ ಹಾಕದೆ ಯೂಟ್ಯೂಬ್ ಮೂಲಕ ನಿಮ್ಮನ್ನು ,ಮನರಂಜಿಸಲು ಇಂದು ವಿವೇಕಾನಂದ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನರಕಾಸುರ ಮೋಕ್ಷ ಎಂಬ ಯಕ್ಷಗಾನ ತಾಳಮದ್ದಳೆ ನಡೆಸಲಿದ್ದಾರೆ. ಈ ಕಾರ್ಯಕ್ರಮ ಸಂಜೆ ಆರು ಗಂಟೆಗೆ ಪ್ರಸಾರವಾಗಲಿದ್ದು, http://youtu.be/lr7i3SKQCBo ಲಿಂಕ್ ಓಪನ್ ಮಾಡುವ ಮೂಲಕ ಅಥವಾ Vpuc Puttur ಎಂದು ಸರ್ಚ್ ಮಾಡಿ ಈ ಕಾರ್ಯಕ್ರಮವನ್ನು ವೀಕ್ಷಿಸಲು ಅವಕಾಶವಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮುಮ್ಮೇಳದಲ್ಲಿ ದೇವೆಂದ್ರನಾಗಿ ವಿದ್ಯಾರ್ಥಿನಿ ಕೃತಿ ಕೆ.ಎಂ, ನಾರದನಾಗಿ ಶ್ರೀವಿದ್ಯಾ ಬಿ.ಆರ್, ಶ್ರೀಕೃಷ್ಣನಾಗಿ ಗಹನಶ್ರೀ, ಸತ್ಯಭಾಮೆಯಾಗಿ ಶ್ರೇಯಾ, ನರಕಾಸುರನಾಗಿ ಅನೀಶ್ ಕೃಷ್ಣ, ಮುರಾಸುರನಾಗಿ ಅನ್ವಿತ್ ಗೊಪ, ದೇವದೂತನಾಗಿ ಭಗತ್ ಎಚ್.ಎನ್ ಭಾಗವಹಿಸಲಿದ್ದಾರೆ.
ಹಿಮ್ಮೇಳದಲ್ಲಿ ಭಾಗವತಿಕೆಗೆ ಹೇಮಸ್ವಾತಿ ಕುರಿಯಾಜೆ, ಚೆಂಡೆ ಅಂಬಾತನಯ ಅರ್ನಾಡಿ, ಮದ್ದಳೆ ಭೀಮ ಭಾರದ್ವಾಜ್, ಚಕ್ರತಾಳ ನವೀನಕೃಷ್ಣ ಮತ್ತು ಸಾತ್ವಿಕ್.ವಿ ನಾಯಕ್, ನಿರೂಪಕಿಯಗಿ ದೇವಿಕಾ ಕುರಿಯಾಜೆ ಸಹಕಾರವನ್ನು ನೀಡಲಿದ್ದಾರೆ.
ಈ ಕಾರ್ಯಕ್ರಮದ ಸಾಹಿತ್ಯ ಮತ್ತು ನಿರ್ದೇಶನವನ್ನು ಕಾಲೇಜಿನ ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀಧರ.ವಿ ಶೆಟ್ಟಿಗಾರ್ ,ಸಮನ್ವಯ ಮತ್ತು ಸಂಕಲನಕಾರರಾಗಿ ಗಣಕ ವಿಜ್ಞಾನ ವಿಭಾಗದ ಉಪನ್ಯಾಸಕ ಅಜಯಶಾಸ್ತ್ರೀ ನಿರ್ವಹಿಸಿರುತ್ತಾರೆ.ಈ ಕಾರ್ಯಕ್ರಮಕ್ಕೆ ವಿವೇಕಾನಂದ ಪದವಿ ಕಾಲೇಜಿನ ವಿಕಸನ ಸ್ಟುಡಿಯೋ ಸಂಪೂರ್ಣ ಸಹಕಾರವನ್ನು ನೀಡಲಿದೆ.