Recent Posts

Monday, April 14, 2025
ಪುತ್ತೂರು

ವಿವೇಕಾನಂದ ಕಾಲೇಜಿನಲ್ಲಿ ನೆರವೇರಿದ ಸಂಸ್ಕOತಿ – ಪ್ರಸ್ತುತಿ ಸರಣಿ ಕಾರ್ಯಾಗಾರ -ಕಹಳೆ ನ್ಯೂಸ್

ಪುತ್ತೂರು: ಸಂಸ್ಕೃತಿ- ಪ್ರಸ್ತುತಿ ಇಂದಿನ ಕಾಲಕ್ಕೆ ಅತೀ ಅಗತ್ಯ ಎನಿಸುವಂತದ್ದು, ಸಂಸ್ಕೃತಿ ನಮ್ಮನ್ನು ಗಟ್ಟಿಗೊಳಿಸುವಂತ ಶಕ್ತಿಯನ್ನು ಹೊಂದಿದೆ. ಪ್ರಸ್ತುತ ಉಪನ್ಯಾಸಕನಾದವ ವಿಚಾರ ಪ್ರಸ್ತುತಿಯಲ್ಲಿ ಎಂದು ಎಡವಬಾರದು ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಕೆ. ಎನ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನಿನ್ನೆ ವಿವೇಕಾನಂದ ಕಾಲೇಜಿನಲ್ಲಿ ಐಕ್ಯೂಎಸಿ, ಫ್ಯಾಕಲ್ಟಿ ಡೆವಲಪ್ಮೆಂಟ್ ಸೆಲ್ ಮತ್ತು ಹ್ಯುಮ್ಯಾನಿಟಿ ಅಸೋಸಿಯೇಷನ್ ನ ಆಶ್ರಯದಲ್ಲಿ ನಡೆದ ಸಂಸ್ಕೃತಿ -ಪ್ರಸ್ತುತ ಸರಣಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಇವರು ಭವಿಷ್ಯದ ಬೆಳಕಾದ ವಿದ್ಯಾರ್ಥಿಗಳ ಉತ್ತಮ ಏಳಿಗೆಗಾಗಿ ಜಗತ್ತಿನ ಜ್ಞಾನ ಜ್ಯೋತಿಯನ್ನು ತೆರೆಯುವ ಕೆಲಸ ಉಪನ್ಯಾಸಕನಿಂದ ಸಾದ್ಯ. ಭಾರತದ ಸಂಸ್ಕøತಿ ,ಆಚಾರ ವಿಚಾರಗಳ ಪಸರುವಿಕೆ ಈಗ ಅಗತ್ಯ ಎಂದರು.
ಈ ಸಂದರ್ಭದಲ್ಲಿ ವಿವೇಕಾನಂದ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀನಿವಾಸ ಪೈ, ಕಾಲೇಜಿನ ಸಂಚಾಲಕರಾದ ಕೆ.ಎನ್ ಮುರಳಿಕೃಷ್ಣ. ವಿವೇಕಾನಂದ ವಿದ್ಯಾವರ್ಧಕ ಸಂಘದ ಕೋಶಾಧಿಕಾರಿ ಸೇಡಿಯಾಪು ಜನಾರ್ದನ ಭಟ್ ಉಪಸ್ಥಿತರಿದ್ದರು.ಈ ಕಾರ್ಯಕ್ರಮವನ್ನು ಕಾಲೇಜಿನ ಐಕ್ಯೂಎಸಿ ಸಂಯೋಜಕ ಶಿವಪ್ರಸಾದ್ ಸ್ವಾಗತಿಸಿ, ಪ್ರಾಚಾರ್ಯರಾದ ವಿಷ್ಣು ಗಣಪತಿ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ವಿಷ್ಣು ಕುಮಾರ್ ವಂದಿಸಿದರು. ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕಿ ಡಾಕ್ಟರ್ ಮಲ್ಲಿಕಾ ಕಾರ್ಯಕ್ರಮವನ್ನು ನಿರೂಪಿಸಿದರು.

 

ಕಹಳೆ ನ್ಯೂಸ್ ವಾಟ್ಸ್ಅಪ್ ಗ್ರೂಪ್ ಗೆ ಸೇರಿ