Sunday, January 19, 2025
ಸಿನಿಮಾ

55ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿ ನವರಸನಾಯಕ ಜಗ್ಗೇಶ್ – ಕಹಳೆ ನ್ಯೂಸ್

jaggesh

ಬೆಂಗಳೂರು: ಇಂದು ಸ್ಯಾಂಡಲ್ ವುಡ್ ನ ಇಬ್ಬರು ನಟರಿಗೆ ಹುಟ್ಟುಹಬ್ಬದ ಸಂಭ್ರಮ. ನಟ ಪುನೀತ್ ರಾಜ್ ಕುಮಾರ್ ಅವರು ತಮ್ಮ ಅಭಿಮಾನಿಗಳ ಜೊತೆ ಬರ್ತ್ ಡೇ ಆಚರಿಸಿಕೊಂಡ್ರೆ, ಇತ್ತ ಜಗ್ಗೇಶ್ ದೇವಸ್ಥಾನಕ್ಕೆ ತೆರಳಿದ್ದಾರೆ.

ಹೌದು. ಜಗ್ಗೇಶ್ ಅವರು ತಮ್ಮ 55 ಹುಟ್ಟುಹಬ್ಬದ ನಿಮಿತ್ತ ಪತ್ನಿ ಜೊತೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ತೆರಳಿ ನವಚಂಡಿಕಾ ಯಾಗವನ್ನು ಕೈಗೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
Jaggesh Birthday

ತಮ್ಮ ಹುಟ್ಟುಹಬ್ಬದ ಕುರಿತು ಟ್ವೀಟ್ ಮಾಡಿರುವ ಜಗ್ಗೇಶ್, ನನಗೆ ಜನ್ಮ ಕೊಟ್ಟ ನನ್ನ ದೇವರಿಗೆ ಶರಣು ಶರಣಾರ್ಥಿ.. ತಿಳಿದೋ ತಿಳಿಯದೆಯೋ ನಾನು ಮಾಡಿದ ಸರ್ವ ಅಪರಾಧ ಕ್ಷಮಿಸಿ ಹರಸಿ. ಸಾಧ್ಯವಾದಷ್ಟು ನಿಮ್ಮ ಗೌರವ ಉಳಿಸಿದ ಮಗನಾಗಿ ಗಂಡನಾಗಿ, ತಂದೆಯಾಗಿ, ತಾತನಾಗಿ ಸಮಾಜಕ್ಕೆ ತಲೆಬಾಗಿ ಗೌರವದಿಂದ ಬಾಳಿ ಬದುಕಿ ಅಸ್ತಮದ ಕಡೆಗೆ ನಡೆದಿದೆ ನಿಮ್ಮ ಮಗನ ಬದುಕು. ಇಂದಿಗೆ ನಾನು ಮಾಗುತ್ತಿರುವ 55ರ ಮನುಜ. ಈ ಸಮಯದಲ್ಲಿ ಹರಸಿದ ಆತ್ಮಗಳಿಗೆ ಶರಣು ಅಂತ ಬರೆದುಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಪತ್ನಿ ಪ್ರಮೀಳಾ ಜಗ್ಗೇಶ್ ಅವರು ಕೂಡ ಟ್ವೀಟ್ ಮಾಡಿ, ಜಗ್ಗೇಶ್ ಅವರು ತಮ್ಮ ಮೊಮ್ಮಗನ ಜೊತೆ ಇರುವ ಫೋಟೋದೊಂದಿಗೆ ಶುಭಾಶಯ ತಿಳಿಸಿದ್ದಾರೆ. ಸದ್ಯ ಇಬ್ಬರು ದಿಗ್ಗಜರ ಹುಟ್ಟುಹಬ್ಬಕ್ಕೆ ಶೂಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.