Recent Posts

Tuesday, November 19, 2024
ಹೆಚ್ಚಿನ ಸುದ್ದಿ

ವಾಹನ ಸವಾರರ ಗಮನಕ್ಕೆ: ಅ.1ರಿಂದ ಚಾಲನಾ ಪರವಾನಗಿಯ ಹೊಸ ನಿಯಮಗಳು ಜಾರಿ- ಕಹಳೆ ನ್ಯೂಸ್

ನವದೆಹಲಿ (ಸೆ.28): ಇದೇ ಅಕ್ಟೋಬರ್ 1ರಿಂದ ಚಾಲನಾ ಪರವಾನಗಿಯ ಹೊಸ ನಿಯಮಗಳು ಜಾರಿಯಾಗಲಿದ್ದು, ವಾಹನ ಸವಾರರು ಈ ಬಗ್ಗೆ ಗಮನ ಹರಿಸಬೇಕಿದೆ. ಮುಂದಿನ ದಿನಗಳಲ್ಲಿ ಜಾರಿಗೆ ಬರಲಿರುವ ಪರವಾನಗಿಯ ಹೊಸ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳು ಇರಲಿವೆ. ದಿನನಿತ್ಯ ಉಪಯೋಗವಾಗುವ ಈ ನಿಯಮಗಳು ಜನಸಾಮಾನ್ಯರ ಮೇಲೆ ಪರಿಣಾಮ ಬೀರಲಿವೆ. ಕೇಂದ್ರ ಸರ್ಕಾರವು ಇತ್ತೀಚೆಗೆ ವಾಹನ ನೋಂದಣಿ ಕಾರ್ಡ್​​ ವಿತರಣೆ ಹಾಗೂ ವಾಹನ ಪರವಾನಗಿ(ಡ್ರೈವಿಂಗ್​ ಲೈಸೆನ್ಸ್​​​)ಗಳಿಗೆ ಸಂಬಂಧಿಸಿದಂತೆ ಹಲವು ಬದಲಾವಣೆಗಳನ್ನು ಜಾರಿ ಮಾಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಕ್ಟೋಬರ್ 1ರಿಂದ ದೇಶಾದ್ಯಂತ ಏಕರೂಪದ ವಾಹನ ಚಾಲನಾ ಪರವಾನಗಿ(ಡಿಎಲ್​​) ಮತ್ತು ನೋಂದಣಿ ಪ್ರಮಾಣ ಪತ್ರಗಳನ್ನು(ಆರ್​​​​​​ಸಿ) ವಿತರಣೆ ಮಾಡಲಾಗುತ್ತದೆ. ಹೀಗಾಗಿ ವಾಹನ ಸವಾರರು ಡಿಎಲ್(ಡ್ರೈವಿಂಗ್ ಲೈಸೆನ್ಸ್​​​​) ಹಾಗೂ ಆರ್​​ಸಿಗಳನ್ನು ಅಪ್​​ಡೇಟ್ ಮಾಡಿಕೊಳ್ಳಬೇಕಿದೆ. ಹೌದು, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯವು ಏಕರೂಪದ ಡ್ರೈವಿಂಗ್​ ಲೈಸೆನ್ಸ್​​​ ಮತ್ತು ರಿಜಿಸ್ಟ್ರೇಷನ್ ಸರ್ಟಿಫಿಕೇಟ್​​ಗಳ ವಿತರಣೆಗೆ ಮುಂದಾಗಿದೆ. ಹೊಸದಾಗಿ ಬರುವ ಡಿಎಲ್ ಮತ್ತು ಆರ್​​​ಸಿಗಳು ಸ್ಮಾರ್ಟ್​ ತಂತ್ರಜ್ಞಾನವನ್ನು ಹೊಂದಿವೆ. ಅಂದರೆ ಹೊಸ ಕಾರ್ಡ್​​​​​​ನಲ್ಲಿ ಅತ್ಯಾಧುನಿಕ ಮೈಕ್ರೋ ಚಿಪ್​ ಇರಲಿದೆ. ಕ್ಯೂಆರ್​​​ ಕೋಡ್​ ಹಾಗೂ ನಿಯರ್​ ಫೀಲ್ಡ್​ ಕಮ್ಯುನಿಕೇಷನ್​(ಎನ್​​ಎಫ್​ಸಿ)ಗಳು ಇರಲಿದೆ. ಈ ಕಾರ್ಡ್​​​​ಗಳು ಎಟಿಎಂ ಕಾರ್ಡ್​​​ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಈ ಬದಲಾವಣೆಗಳಿಂದ ಸರ್ಕಾರಕ್ಕೆ ಡಿಎಲ್ ಕಾರ್ಡ್​​​​​ದಾರರ ದಾಖಲೆ ಹಾಗೂ ದಂಡದ ಮಾಹಿತಿಗಳನ್ನು 10 ವರ್ಷಗಳವರೆಗೆ ಕೇಂದ್ರೀಕೃತ ಆನ್​ಲೈನ್​ ಡಾಟಾ ಬೇಸ್​​ನ್ನಿ ನಿರ್ವಹಿಸಲು ಸಾಧ್ಯವಾಗಿಸಲಿದೆ. ಇಷ್ಟು ಮಾತ್ರವಲ್ಲದೇ, ವಿಶೇಷ ಚೇತನ ಚಾಲಕರ ವಿವರಗಳನ್ನು ಒಂದೆಡೆ ಸಂಗ್ರಹಿಸಲು ವಾಹನಗಳಿಗೆ ಮಾಡಿರುವ ಬದಲಾವಣೆ, ಯಾವುದೇ ವ್ಯಕ್ತಿ ಅಂಗದಾನ ಮಾಡಿದ್ದರೆ ಅವುಗಳ ವಿವರಗಳನ್ನು ಪಡೆಯಲು ಸಹಕಾರಿಯಾಗಲಿದೆ.

ಇನ್ನು, ವಾಹನ ಸವಾರರು ಕ್ರೆಡಿಟ್​ ಕಾರ್ಡ್​​​ಗಳ ಮೂಲಕ ಪೆಟ್ರೋಲ್​ ಬಂಕ್​​ಗಳಲ್ಲಿ ಇಂಧನ ತುಂಬಿಸಿದ ಪಾವತಿ ಮಾಡಿದರೆ, ಅಕ್ಟೋಬರ್ 1ರಿಂದ ಅದಕ್ಕೆ ರಿಯಾಯಿತಿ ದೊರೆಯುವುದಿಲ್ಲ.

ಸ್ಯಾಂಡಲ್​​ವುಡ್​​ ಡ್ರಗ್ಸ್ ಕೇಸ್​​​: ಇಂದು ನಟಿ ರಾಗಿಣಿ, ಸಂಜನಾ ಜಾಮೀನು ಅರ್ಜಿ ವಿಚಾರಣೆ

ಆರ್​​ಸಿಗಳ ಪ್ರಕ್ರಿಯೆಯನ್ನು ಸಂಪೂರ್ಣ ಪೇಪರ್​​ ರಹಿತಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಟ್ರಾಫಿಕ್​ ಪೊಲೀಸರು ತಮಗೆ ಬೇಕಾದ ಮಾಹಿತಿಯನ್ನು ಈ ಹೊಸ ಡಿಎಲ್​ ಮತ್ತು ಆರ್​​ಸಿ ಕಾರ್ಡ್​​​ಗಳ ಮೂಲಕ ಪಡೆಯಬಹುದಾಗಿದೆ. ಜೊತೆಗೆ ದಾಖಲೆಗಳು ನಕಲಿ ಆಗುವುದನ್ನು ತಡೆಯಬಹುದಾಗಿದೆ.
ಇನ್ನು, ಡಿಎಲ್​ ಮತ್ತು ಆರ್​​ಸಿ ವಿತರಿಸುವ ಸಂಸ್ಥೆಯ ಹೆಸರು, ದೇಶ ಮತ್ತು ರಾಜ್ಯಗಳ ಅಧಿಕೃತ ಚಿಹ್ನೆ, ವಿತರಣೆಯ ದಿನಾಂಕ ಹಾಗೂ ಮುಕ್ತಾಯದ ದಿನಾಂಕ, ವಾಹನ ಸವಾರನ ಹೆಸರು, ಆತನ ರಕ್ತದ ಗುಂಪು, ಅಂಗಾಂಗ ದಾನದ ಮಾಹಿತಿ, ವಾಹನಗಳ ವಿಧ, ತುರ್ತು ಸಂಪರ್ಕದ ಮೊಬೈಲ್​ ನಂಬರ್​ ಇನ್ನೂ ಮೊದಲಾದ ವಿವರಗಳನ್ನು ಒಳಗೊಂಡಿರುತ್ತವೆ.