Recent Posts

Sunday, January 19, 2025
ಸುದ್ದಿ

ಪ್ರಮೋದ್ ಮಧ್ವರಾಜ್ ಪ್ರಚಾರ ವಾಹನದಲ್ಲಿ ಸಿಎಂ ಇಲ್ಲ, ರಾಹುಲ್ ಗಾಂಧಿಯೂ ಇಲ್ಲ! ಯಾಕೆ ಅಂತಿರಾ..? ಈ ವರದಿ ನೋಡಿ

Pramod-Madhwaraj

ಉಡುಪಿ:  ಯುವಜನ ಸೇವಾ ಮತ್ತು ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಅವರ  ನಡೆ ಅನುಮಾನಕ್ಕೆ ಎಡೆ ಮಾಡಿದ್ದು ಬಿಜೆಪಿ ಸೇರುತ್ತಾರಾ ಎನ್ನುವ  ಪ್ರಶ್ನೆ ಈಗ ಮತ್ತೊಮ್ಮೆ ಚರ್ಚೆಗೆ ಬಂದಿದೆ.

ಸಚಿವರ ಚುನಾವಣಾ ಪ್ರಚಾರಕ್ಕಾಗಿ ನಿರ್ಮಿಸಲಾಗಿರುವ  ಪ್ರಚಾರ ವಾಹನ ಎಲ್ಲರ ಗಮನ ಸೆಳೆಯುತ್ತಿದ್ದು, ಈ ವಾಹನದಲ್ಲಿ ಸಿದ್ದರಾಮಯ್ಯ, ರಾಹುಲ್ ಗಾಂಧಿ, ಕಾಂಗ್ರೆಸ್ ಚಿಹ್ನೆ ಯಾವುದು ಇಲ್ಲದ ಕಾರಣ ಪ್ರಶ್ನೆ ಎದ್ದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಲಾಖೆಯ ಮಾಹಿತಿಯಾಗಲೀ, ರಾಜ್ಯ ಸರಕಾರದ ಕಲ್ಯಾಣ ಯೋಜನೆಗಳಾಗಲೀ ಈ ಪ್ರಚಾರ ವಾಹನದಲ್ಲಿಲ್ಲ. ಬದಲಾಗಿ ವಾಹನದ ಹೋರ್ಡಿಂಗ್ ಗಳಲ್ಲಿ ಸಚಿವರೇ ಮಿಂಚುತ್ತಿದ್ದಾರೆ. ಫೋಟೋದ ಜೊತೆಗೆ ಅಭಿವೃದ್ದಿಯೊಂದಿಗೆ ನನ್ನ ಹೆಜ್ಜೆ, ಜೊತೆಗಿರಲಿ ನಿಮ್ಮ ಹೆಜ್ಜೆ ಎಂಬ ಬರಹಗಳಿವೆ.

ಎಲ್ಲಿಯೂ ಸರಕಾರದ ಸಾಧನೆಗಳನ್ನು ಬಿಂಬಿಸುವ ಪ್ರಯತ್ನ ಈ ವಾಹನದಲ್ಲಿ ಕಾಣಿಸುವುದಿಲ್ಲ. ಕೆಲ ತಿಂಗಳುಗಳಿಂದ ಸಚಿವ ಮಧ್ವರಾಜ್ ಬಿಜೆಪಿ ಸೇರ್ಪಡೆ ಸುದ್ದಿಗೆ ರೆಕ್ಕೆ ಪುಕ್ಕ ಬಂದಿತ್ತು. ಈ ಕಾರಣಕ್ಕಾಗಿಯೇ ಸಚಿವರು ರಾಜ್ಯ ಸರಕಾರದ ಸಾಧನೆಗಳನ್ನು ಬಿಂಬಿಸಲಿಲ್ಲವೇ? ಭವಿಷ್ಯದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುವ ಸಲುವಾಗಿ ಈಗಿನಿಂದಲೇ ಸಚಿವರು ತಯಾರಿ ನಡೆಸುತ್ತಿದ್ದಾರೆಯೇ ಎನ್ನುವ ಪ್ರಶ್ನೆ ಮತ್ತೆ ಚರ್ಚೆಯಾಗುತ್ತಿದೆ.?

Pramod-Madhwaraj