Sunday, January 19, 2025
ಕ್ರೈಮ್ಸುದ್ದಿ

ಪರಿಚಯಸ್ಥನಿಂದ ಹದಿಹರಯದ ಯುವತಿಯ ರೇಪ್ ; ಅತ್ಯಾಚಾರದ ಬಳಿಕ ಆಕೆಯ ಸೆಕ್ಸ್ ವಿಡಿಯೋ ತೋರಿಸಿ ಸಂತ್ರಸ್ತೆಯಿಂದಲೇ 9.70 ಲಕ್ಷ ಹಣ ಪಡೆದ ಕಾಮುಕ – ಕಹಳೆ ನ್ಯೂಸ್

ಚಂಡೀಗಢ: ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕಾಮುಕ ವಿಡಿಯೋ ರೆಕಾರ್ಡ್ ಮಾಡಿ ಸಂತ್ರಸ್ತೆಯಿಂದ 10 ಲಕ್ಷ ರೂ.ಗೂ ಅಧಿಕ ಹಣ ಪಡೆದಿರುವ ಘಟನೆ ಹರಿಯಾಣದ ಹಿಸ್ಸಾರ್ ನಲ್ಲಿ ನಡೆದಿದೆ. ಶನಿವಾರ ಸಂತ್ರಸ್ತೆ ಈ ಸಂಬಂಧ ಹಿಸ್ಸಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ

ಮಹಿಳೆ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅತ್ಯಾಚಾರ, ಜೀವ ಬೆದರಿಕೆ, ಬ್ಲ್ಯಾಕ್‍ಮೇಲ್ ಮಾಡಿ 9 ಲಕ್ಷದ 70 ಸಾವಿರ ಹಣ ಪಡೆದಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಅಶ್ಲೀಲ ಫೋಟೋ ಜೊತೆ ಸೆಕ್ಸ್ ವಿಡಿಯೋ: ಸೆಪ್ಟೆಂಬರ್ 2018ರಲ್ಲಿ ಬಾಲಕೃಷ್ಣ ಎಂಬಾತನ ಪರಿಚಯವಾಯ್ತು. ಒಂದು ದಿನ ಬಾಲಕೃಷ್ಣನ ಸಿನಿಮಾ ನೋಡಲು ನನ್ನನ್ನು ಕರೆದುಕೊಂಡು ಹೋಗಿದ್ದನು. ಅದೇ ದಿನ ತನ್ನ ಮನೆಗೆ ಕರೆದುಕೊಂಡು ಹೋಗಿದ್ದ ಬಾಲಕೃಷ್ಣ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಈ ವೇಳೆ ಅಶ್ಲೀಲ ಫೋಟೋಗಳ ಜೊತೆ ಸೆಕ್ಸ್ ವಿಡಿಯೋ ಸಹ ರೆಕಾರ್ಡ್ ಮಾಡಿಕೊಂಡಿದ್ದನು.

ಜಾಹೀರಾತು
ಜಾಹೀರಾತು
ಜಾಹೀರಾತು

ಅತ್ಯಾಚಾರದ ಬಳಿಕ ಆರೋಪಿ ಬಾಲಕೃಷ್ಣ ವಿಡಿಯೋ ಮತ್ತು ಫೋಟೋ ತೋರಿಸಿ ಬ್ಲ್ಯಾಕ್‍ಮೇಲ್ ಮಾಡಲು ಆರಂಭಿಸಿದನು. ಅಂದಿನಿಂದ ಇಂದಿನವರೆಗೆ ಆತ ಹಂತ ಹಂತವಾಗಿ ನನ್ನಿಂದ 9 ಲಕ್ಷದ 70 ಸಾವಿರ ಹಣ ಪಡೆದುಕೊಂಡಿದ್ದಾನೆ. ಒಂದು ವಿಷಯ ಯಾರಿಗಾದ್ರೂ ತಿಳಿಸಿದ್ರೆ ಕುಟುಂಬಸ್ಥರನ್ನು ಕೊಲ್ಲುವದಾಗಿ ಬೆದರಿಕೆ ಹಾಕಿದ್ದನು ಎಂದು ಸಂತ್ರಸ್ತೆ ಹೇಳಿದ್ದಾರೆ.

ಆರೋಪಿ ಬಾಲಕೃಷ್ಣ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆತನಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದಾರೆ. ಸಂತ್ರಸ್ತೆಯಿಂದ ಆರೋಪಿ ಹಣ ಸಹ ಪಡೆದುಕೊಂಡಿದ್ದಾನೆ. ಶೀಘ್ರದಲ್ಲೇ ಆರೋಪಿಯನ್ನು ಬಂಧಿಸಲಾಗುವುದು ಎಂದು ಹಿಸ್ಸಾರ್ ಠಾಣೆಯ ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ.