Sunday, January 19, 2025
ಕ್ರೈಮ್

ಅಪ್ರಾಪ್ತ ಬಾಲಕಿ ಸ್ನಾನ ಮಾಡುತ್ತಿದ್ದಾಗ ಮೊಬೈಲ್ ನಲ್ಲಿ ಚಿತ್ರೀಕರಿಸಿದ ಕಾಮುಕ ; ಆರೋಪಿಯ ತಂದೆಯ ಬಳಿ ವಿಚಾರ ಹೇಳಿದಕ್ಕೆ ಆರೋಪಿಯಿಂದ ಬಾಲಕಿಯ ತಂದೆಯ ಮೇಲೂ ಹಲ್ಲೆ | ಬೆಳ್ಳಾರೆ ಪೋಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಎಫ್.ಐ.ಆರ್..! – ಕಹಳೆ ನ್ಯೂಸ್

ಬೆಳ್ಳಾರೆ : ಕಲ್ಮಡ್ಕದಲ್ಲಿ ಸ್ನಾನದ ಕೊಠಡಿಯಲ್ಲಿ ಸ್ನಾನದ ದೃಶ್ಯ ಸೆರೆ ಹಿಡಿಯಲು ಯುವಕನೊಬ್ಬ ಮೊಬೈಲ್ ಕೆಮರಾವನ್ನು ಇಟ್ಟ ಆರೋಪಿಯನ್ನು ಬೆಳ್ಳಾರೆ ಪೊಲೀಸರು ಬಂಧಿಸಿ ಪೊಕ್ಸೋ ಪ್ರಕರಣ ದಾಖಲಿಸಿಕೊಂಡ ಘಟನೆ ಸೆ.29 ರಂದು ನಡೆದಿದೆ.

ಕಲ್ಮಡ್ಕದ ಶೆಟ್ಟಿಗದ್ದೆಯ ಮನೆಯೊಂದರ ಸ್ನಾನದ ಕೊಠಡಿಯಲ್ಲಿ ಯುವತಿ ಸ್ನಾನ ಮಾಡುವ ದೃಶ್ಯ ವನ್ನು ಸೆರೆಹಿಡಿಯಲು ಶ್ಯಾಮ್ ಎಂಬಾತ ತನ್ನ ಮೊಬೈಲನ್ನು ಸ್ನಾನದ ಕೊಠಡಿಯ ಮಾಡಿನ ಎಡೆಯಲ್ಲಿ ಚಾಲು ಮಾಡಿ ಇಟ್ಟಿದ್ದನೆಂದೂ
ಸ್ನಾನ ಮಾಡುತ್ತಿರುವಾಗ ಇದನ್ನು ಗಮನಿಸಿದ ಯುವತಿ ತಾಯಿಗೆ ವಿಷಯ ತಿಳಿಸಿ ಮೊಬೈಲನ್ನು ಎಳೆಯಲು ಪ್ರಯತ್ನಿಸಿದಳೆಂದೂ ಈ ವೇಳೆ ಆರೋಪಿಯು ಮೊಬೈಲ್ ಎಳೆದುಕೊಂಡು ಓಟಕ್ಕಿತ್ತನೆನ್ನಲಾಗಿದೆ. ಅವನ ಗುರುತು ಯುವತಿಯ ಮನೆಯವರಿಗೆ ಸಿಕ್ಕಿತು. ಮರುದಿನ ಯುವತಿಯ ಮನೆಯವರು ಆತನ ತಂದೆಯ ಬಳಿ ಈ ವಿಷಯ ತಿಳಿಸುದರೆಂದೂ
ಆತನ ತಂದೆ ಮಗನಿಗೆ ಬುದ್ಧಿ ಹೇಳುವುದಾಗಿ ಹೇಳಿದರೆನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತಾನು ಮೊಬೈಲ್ ಇಟ್ಟಿರುವ ವಿಚಾರ ತನ್ನ ತಂದೆಗೆ ತಿಳಿಸುದರೆಂಬ ಕಾರಣಕ್ಕೆ ಆರೋಪಿಯು ಯುವತಿಯ ಕಡೆಯವರ ಮೇಲೆ ಹಲ್ಲೆಗೆ ಮುಂದಾಗಿದ್ದನೆನ್ನಲಾಗಿದೆ. ಈ ಬಗ್ಗೆ ಯುವತಿಯ ತಾಯಿ ಬೆಳ್ಳಾರೆ ಪೊಲೀಸು ಠಾಣೆಯಲ್ಲಿ ದೂರು ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಕೃತ್ಯದ ಬಗ್ಗೆ ಆರೋಪಿಯ ತಂದೆಯ ಬಳಿ ಬಾಲಕಿಯ ತಾಯಿ ಆರೋಪಿಯ ತಂದೆಯಲ್ಲಿ ತಿಳಿಸಿದರೆಂಬ ದ್ವೇಷದಿಂದ ದೂರುದಾರೆಯ ಗಂಡನಿಗೆ ಹಲ್ಲೆಗೆ ಮುಂದಾಗಿರುವುದಾಗಿದೆ. ಈ ಬಗ್ಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕಲo: 10, 14 ಪೋಕ್ಸೋ ಕಾಯ್ದೆ 2012 ಮತ್ತು ಕಲಂ 354(ಸಿ ) ಐ ಪಿ ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.