Monday, November 18, 2024
ಹೆಚ್ಚಿನ ಸುದ್ದಿ

ಬಾಬ್ರಿ ಮಸೀದಿ ಪ್ರಕರಣ; ಅಂತಿಮ ತೀರ್ಪು ನೀಡಿ ಸೇವೆಯಿಂದ ಜಡ್ಜ್ ಎಸ್.ಕೆ.ಯಾದವ್ ನಿವೃತ್ತಿ-ಕಹಳೆ ನ್ಯೂಸ್

28 ವರ್ಷಗಳಷ್ಟು ಹಳೆಯ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಅಂತಿಮ ತೀರ್ಪನ್ನು ಲಖ್ನೋ ಸಿಬಿಐ ಕೋರ್ಟ್ ನ ವಿಶೇಷ ನ್ಯಾಯಾಧೀಶರಾದ ಎಸ್.ಕೆ.ಯಾದವ್ ಬುಧವಾರ(ಸೆಪ್ಟೆಂಬರ್ 30, 2020) ಪ್ರಕಟಿಸಿದ್ದಾರೆ. ಲಖ್ನೋ ಜಿಲ್ಲಾ ಮತ್ತು ಸೆಷನ್ಸ್ ಕೋರ್ಟ್ 2017ರಿಂದ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ನಿರಂತರವಾಗಿ ವಿಚಾರಣೆ ನಡೆಸುತ್ತಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ನಿವೃತ್ತಿ ದಿನ ಬಾಬ್ರಿ ಅಂತಿಮ ತೀರ್ಪು ಪ್ರಕಟಿಸಿದ ಜಡ್ಜ್ ಯಾದವ್:

ಜಾಹೀರಾತು
ಜಾಹೀರಾತು
ಜಾಹೀರಾತು

60 ವರ್ಷದ ನ್ಯಾಯಾಧೀಶರಾದ ಎಸ್.ಕೆ.ಯಾದವ್ ಅವರು 2019ರಲ್ಲಿಯೇ ಸೇವೆಯಿಂದ ನಿವೃತ್ತಿಯಾಗಿದ್ದರು. ಆದರೆ 2005ರಿಂದ ಈ ಹೈಪ್ರೊಫೈಲ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಯಾದವ್ ಅವರ ಸೇವಾವಧಿಯನ್ನು ಸುಪ್ರೀಂಕೋರ್ಟ್ ಮುಂದುವರಿಸಿ ಆದೇಶ ನೀಡಿತ್ತು.ಈ ಪ್ರಕರಣದ ವಿಚಾರಣೆಯ ವಾದ, ಪ್ರತಿವಾದ ಆಲಿಸಿ ಇನ್ನು ಎರಡು ವರ್ಷಗಳಲ್ಲಿ ಅಂತಿಮ ತೀರ್ಪನ್ನು ಪ್ರಕಟಿಸುವಂತೆ ಸುಪ್ರೀಂಕೋರ್ಟ್ ಜಡ್ಜ್ ಎಸ್.ಕೆ.ಯಾದವ್ ಅವರಿಗೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ಅವರ ಸೇವಾವಧಿ 2019ಕ್ಕೆ ಮುಕ್ತಾಯಗೊಂಡಿದ್ದು, ಸುಪ್ರೀಂಕೋರ್ಟ್ ಮತ್ತೆ ಒಂದು ವರ್ಷ ಅವಧಿಯನ್ನು ವಿಸ್ತರಿಸಿತ್ತು. ಇಂದು ಅಂತಿಮ ತೀರ್ಪು ಪ್ರಕಟಿಸಿ ಸೇವಾವಧಿಯಿಂದ ನಿವೃತ್ತಿಯಾಗಿದ್ದಾರೆ. ವಿಚಾರಣೆ ವೇಳೆ ಸಿಬಿಐ 351 ಮಂದಿ ಸಾಕ್ಷ್ಯ ಸಂಗ್ರಹಿಸಿತ್ತು. ಅಲ್ಲದೇ 600 ದಾಖಲೆಗಳನ್ನು ಸಲ್ಲಿಸಿತ್ತು. ಪ್ರಕರಣದ ವಾದ, ಪ್ರತಿವಾದ ಸೆಪ್ಟೆಂಬರ್ 1ರಂದು ಮುಕ್ತಾಯವಾಗಿತ್ತು. ಸುಪ್ರೀಂಕೋರ್ಟ್ ನೀಡಿರುವ ಅಂತಿಮ ಗಡುವಿನ ಹಿನ್ನೆಲೆಯಲ್ಲಿ ಜಡ್ಜ್ ಎಸ್.ಕೆ.ಯಾದವ್ ಅವರು ಅಂತಿಮ ತೀರ್ಪು ಬರೆಯಲು ಆರಂಭಿಸಿದ್ದರು. 2017ರ ಏಪ್ರಿಲ್ ನಲ್ಲಿ ಸುಪ್ರೀಂಕೋರ್ಟ್, ಸಿಬಿಐ ವಿಶೇಷ ಕೋರ್ಟ್ ಗೆ ದಿನಂಪ್ರತಿ ವಿಚಾರಣೆ ನಡೆಸುವ ಮೂಲಕ ಎರಡು ವರ್ಷಗಳಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿತ್ತು. ನಂತರ ಹಲವಾರು ಬಾರಿ ಅವಧಿ ಮುಂದೂಡಿಕೆಯಾಗಿತ್ತು. ನ್ಯಾಯಾಧೀಶರು ಕೂಡಾ ಹೆಚ್ಚಿನ ಸಮಯಾವಕಾಶ ಕೇಳಿದ್ದರು. ಕೊನೆಗೆ ಸುಪ್ರೀಂಕೋರ್ಟ್ 2020ರ ಸೆಪ್ಟೆಂಬರ್ 30ರಂದು ಅಂತಿಮ ಗಡುವು ನೀಡಿತ್ತು.