Recent Posts

Sunday, January 19, 2025
ಪುತ್ತೂರು

ಪುತ್ತೂರು: ಗಾಂಧಿ ಜಯಂತಿ ಪ್ರಯುಕ್ತ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ ನ ವತಿಯಿಂದ ನಾಳೆ ರಕ್ತದಾನ ಶಿಬಿರ ಹಾಗೂ “ಒಳಿತು ಮಾಡು ಮನುಷ” ತಂಡದ ಉದ್ಘಾಟನೆ- ಕಹಳೆ ನ್ಯೂಸ್

ಪುತ್ತೂರು: ಕಳೆದ 3ವರ್ಷಗಳಿಂದ ಪುತ್ತೂರಿನಲ್ಲಿ ಕಾರ್ಯಚರಿಸುತ್ತಿರುವ ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ ನ ಮಹತ್ವಪೂರ್ಣ ಯೋಜನೆಯಾದ ಕಿಡ್ನಿ ವೈಫಲ್ಯ ದಿಂದ ಬಳಲುತ್ತಿರುವ ಮತ್ತು ಆಸಕ್ತರಿಗೆ ನಿರಂತರವಾಗಿ ಪ್ರತಿ ತಿಂಗಳು ದಿನಸಿ ಸಾಮಗ್ರಿಗಳ ಕಿಟ್ ನೀಡುವ ಮಾಸಿಕ ಯೋಜನೆ “ಒಳಿತು ಮಾಡು ಮನುಷ” ಇದರ ಉದ್ಘಾಟನಾ ಸಮಾರಂಭ ಮತ್ತು ಗಾಂಧಿ ಜಯಂತಿ ಆಚರಣೆಯ ಪ್ರಯುಕ್ತ ಸ್ವಯಂ ಪ್ರೇರಿತ “ರಕ್ತದಾನ ಶಿಬಿರವು” ದಿನಾಂಕ 2-10-2020 ರಂದು ಆದಿತ್ಯವಾರ ಬೆಳಿಗ್ಗೆ 9 ಗಂಟೆಗೆ ರೋಟರಿ ಟ್ರಸ್ಟ್ ಹಾಲ್ ನಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ವೇಳೆ ಗಾಂಧಿ ಜಯಂತಿಯ ದಿನ “ಒಳಿತು ಮಾಡು ಮನುಷ” ತಂಡದ ಉದ್ಘಾಟನೆ ನಡೆಯಲಿದೆ. ಬೆಳಿಗ್ಗೆ 9ಗಂಟೆಗೆ ಉದ್ಘಾಟನಾ ಸಮಾರಂಭ ನಡೆಯಲಿದ್ದು ನಂತರ ಮದ್ಯಾಹ್ನ 2ಗಂಟೆ ತನಕ ನಿರಂತರ ರಕ್ತದಾನ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು