Recent Posts

Sunday, January 19, 2025
ಹೆಚ್ಚಿನ ಸುದ್ದಿ

ಏಮ್ಸ್ ವರದಿಯಿಂದ ಕೊನೆಗೂ ಬಹಿರಂಗವಾಯ್ತು ಸುಶಾಂತ್ ಸಾವಿನ ರಹಸ್ಯ..!-ಕಹಳೆ ನ್ಯೂಸ್

ದೇಶಾದ್ಯಂತ ಭಾರೀ ಚರ್ಚೆಗೆ ಗ್ರಾಸವಾಗಿದ್ದ ಬಾಲಿವುಡ್ ಪ್ರತಿಭಾವಂತ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣ ಕುರಿತು ಅಂತಿಮ ವರದಿಯನ್ನು ದೆಹಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್) ಸಲ್ಲಿಸಿದ್ದು, ಮಹತ್ವದ ಸಂಗತಿಯೊಂದನ್ನು ತಿಳಿಸಿದೆ. ಸುಶಾಂತ್ ಸಾವಿಗೆ ಕೊಲೆ ಕಾರಣವಲ್ಲ, ಇದೊಂದು ಆತ್ಮಹತ್ಯೆ ಎಂದು ಖ್ಯಾತ ವೈದ್ಯ ಡಾ. ಸುೀರ್ ಗುಪ್ತಾ ಅವರ ನೇತೃತ್ವದ ಏಮ್ಸ್ ವೈದ್ಯಕೀಯ ತಂಡ ತಿಳಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. ಇದರೊಂದಿಗೆ ಸುಶಾಂತ್ ಸಾವು ಕುರಿತು ಕೇಳಿ ಬಂದಿದ್ದ ಕೊಲೆ ಆರೋಪಿಗಳಿಗೆ ಸದ್ಯಕ್ಕೆ ತೆರೆ ಬಿದ್ದಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಆದಾಗ್ಯೂ, ಸಿಬಿಐ ಅಕಾರಿಗಳು ಏಮ್ಸ್ ವರದಿಯನ್ನು ಪರಿಶೀಲಿಸಿ ಎಲ್ಲ ಆಯಾಮಗಳಿಂದಲೂ ತನಿಖೆಯನ್ನು ಮುಂದುವರಿಸಿ ತನ್ನ ಅಂತಿಮ ವರದಿ ನೀಡಲಿದೆ. ತದನಂತರವಷ್ಟೇ ಸುಶಾಂತ್ ಸಾವಿನ ಹಿಂದಿನ ಸತ್ಯ ಸಂಗತಿ ಬಹಿರಂಗಗೊಳ್ಳಲಿದೆ.
ಬಾಲಿವುಡ್ ನಟನಿಗೆ ವಿಷ ಪ್ರಾಶನ ಮಾಡಿ ನಂತರ ಉಸಿರುಗಟ್ಟಿಸಿ ಕೊಲ್ಲಲಾಗಿದೆ ಎಂಬ ಆರೋಪಗಳನ್ನು ಏಮ್ಸ್ ತಳ್ಳಿ ಹಾಕಿದೆ. ಸುಶಾಂತ್ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಕಾರಣ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ವಿವಿಧ ಆಯಾಮಗಳಿಂದ ಏಮ್ಸ್‍ನ ತಜ್ಞ ವೈದ್ಯರು ಸುಶಾಂತ್ ಮರಣೋತ್ತರ ಪರೀಕ್ಷೆಗಳನ್ನು ನಡೆಸಿದ್ದು ಅಂತಿಮ ವರದಿಯೊಂದನ್ನು ಸಲ್ಲಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸುಶಾಂತ್ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂಬ ಮುಂಬೈನ ಆಸ್ಪತ್ರೆಯೊಂದರ ಪ್ರಾಥಮಿಕ ಮರಣೋತ್ತರ ಪರೀಕ್ಷೆ ವರದಿ ನಿಜ. ಆದರೆ, ನಟನ ಸಾವಿಗೆ ಕೊಲೆ ಕಾರಣವಲ್ಲ. ವಿಷ ಉಣಿಸಿ ಉಸಿರುಗಟ್ಟಿಸಿ ಸುಶಾಂತ್‍ರನ್ನು ಕೊಲೆ ಮಾಡಲಾಗಿಲ್ಲ. ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹ್ಯಾಂಗ್ ಮಾಡಿಕೊಂಡ ಕಾರಣ ಕುತ್ತಿಗೆ ಬಿಗಿದು ಉಸಿರುಗಟ್ಟಿ ಅವರು ಮೃತಪಟ್ಟಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸುಶಾಂತ್ ಶವ ಜೂ.14ರಂದು ಮುಂಬೈನ ಬಾಂದ್ರಾದ ಅಪಾರ್ಟ್‍ಮೆಂಟ್‍ವೊಂದರಲ್ಲಿ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಏಮ್ಸ್ ತನ್ನ ಅಂತಿಮ ವರದಿಯನ್ನು ಈ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ದಳ-ಸಿಬಿಐಗೆ ಸಲ್ಲಿಸಿದೆ. ಸಿಬಿಐ ಅಕಾರಿಗಳು ವರದಿಯನ್ನು ಪರಿಶೀಲಿಸಿ ಎಲ್ಲ ಆಯಾಮಗಳಿಂದಲೂ ತನಿಖೆಯನ್ನು ಮುಂದುವರಿಸಿ ತನ್ನ ಅಂತಿಮ ವರದಿ ನೀಡಲಿದೆ. ತದನಂತರವಷ್ಟೇ ಸುಶಾಂತ್ ಸಾವಿನ ಹಿಂದಿನ ಸತ್ಯ ಸಂಗತಿ ಹೊರಬೀಳಲಿದೆ.