Recent Posts

Monday, January 20, 2025
ಸುದ್ದಿ

BREAKING NEWS : ಭಾರತದಿಂದ ಮತ್ತೊಂದು ಮಹತ್ವದ ಸಾಧನೆ : ಅಣ್ವಸ್ತ್ರ ಸಾಮರ್ಥ್ಯದ ‘ಶೌರಿಯಾ’ ಕ್ಷಿಪಣಿ ಪರೀಕ್ಷೆ ಯಶಸ್ವಿ

ಒಡಿಶಾ: ಭಾರತದ ಅತ್ಯಾಧುನಿಕ ಪರಮಾಣು ಸಾಮರ್ಥ್ಯದ “ಶೌರ್ಯ” ಕ್ಷಿಪಣಿಯ ಪರೀಕ್ಷಾರ್ಥ ಉಡಾವಣೆ ಯಶಸ್ವಿಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಡಿಶಾದ ಒಡಿಶಾ ಕರಾವಳಿಯ ಅಬ್ದುಲ್ ಕಲಾಂ ದ್ವೀಪದಿಂದ ಪರೀಕ್ಷಾರ್ಥ ಉಡಾವಣೆಯನ್ನು ಮಧ್ಯಾಹ್ನ 12:10ಕ್ಕೆ ನಡೆಸಲಾಯಿತು. ಭೂಮಿಯ ಮೇಲ್ಮೈಯಿಂದ ಮೇಲ್ಮೈಗೆ ನೆಗೆಯುವ ಸಾಮರ್ಥ್ಯವಿರುವ ಮಧ್ಯಮ ಶ್ರೇಣಿಯ ಹೈಬ್ರಿಡ್ ಕ್ಷಿಪಣಿ ಇದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಬಹುಉಪಯೋಗಿ ಅತ್ಯಾಧುನಿಕ ಕಂಪ್ಯೂಟಿಂಗ್ ಟೆಕ್ನಾಲಜಿಯೊಂದಿಗೆ ಅಭಿವೃದ್ಧಿಪಡಿಸಲಾಗಿರುವ ಈ ಕ್ಷಿಪಣಿ ಅತ್ಯಂತ ನಿಖರವಾದ ಸಂಚಾರ ಸಾಮರ್ಥ್ಯ, ಪರಿಣಾಮಕಾರಿ ಪ್ರೊಪಲ್ಷನ್, ಅತ್ಯಾಧುನಿಕ ನಿಯಂತ್ರಣ ಮತ್ತು ಮಾರ್ಗದರ್ಶನ ವ್ಯವಸ್ಥೆಗಳು ಹೊಂದಿದೆ, ಈ ಮಿಷನ್ ಮಾದರಿಯಾಗುವಂತಹ ಸಾಧನೆಯಾಗಿದೆ ಎಂದು ಭಾರತೀಯ ರಕ್ಷಣಾ ಅಧಿಕಾರಿಯೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
ಉಡಾವಣೆಗೊಂಡ ಕ್ಷಿಪಣಿಯ ಮೇಲೆ ಅತ್ಯಾಧುನಿಕ ರಡಾರ್ ಗಳ ಇಂಟಿಗ್ರೇಟೆಡ್ ಸಿಸ್ಟಮ್ ಮೂಲಕ ನಿಗಾ ವಹಿಸಲಾಗಿತ್ತು. ಈ ಶ್ರೇಣಿಯಲ್ಲಿ ಈಗ ಭಾರತ ಉಡಾವಣೆ ಮಾಡಿರುವ ಕ್ಷಿಪಣಿ ವಿಶ್ವದ ಟಾಪ್-10 ಕ್ಷಿಪಣಿಗಳ ಸಾಲಿಗೆ ಸೇರಲಿದ್ದು ಭಾರತದ ಬತ್ತಳಿಕೆಗೆ ಮತ್ತಷ್ಟು ಬಲ ತುಂಬಲಿದೆ.